N-2515 

  18-04-2024 09:03 AM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

 "Happiness is accepting and understanding the ups and downs in the LIFE." ಶ್ರೀ ಗುರುಗಳಿಗೆ ಮುಂಜಾನೆಯ ದೀರ್ಘ ದಂಡ ನಮಸ್ಕಾರಗಳು. ಜೀವನದ ಸ್ವಾರಸ್ಯ ಸವಿಯಬೇಕಾದರೆ ಬದುಕಿನ ಹಾದಿಯಲ್ಲಿ ಬರುವ ಏರಿಳಿತಗಳನ್ನು ಸವಿಯುವ ಮನೋಭಾವವನ್ನು ಅಳವಡಿಸಿಕೊಂಡು ಪಾಲಿಸುವುದನ್ನು ಅಭ್ಯಸಿಸುವುದು ಒಳ್ಳೆಯದು. ಸಮಯದ ಒತ್ತಡ ವಯೋಸಹಜ ಏರಿಳಿತಗಳು ಸಂಸಾರದ ಮೇಲಿನ ಮೋಹ ಒಂಟಿತನ ಇನ್ನೂ ಮುಂತಾದ ದೇಹ ಮತ್ತು ಮನಸ್ಸಿನ ಅನಿಸಿಕೆಗಳು ದಿಕ್ಕು ತಪ್ಪಿಸುವ ಹಾದಿಗಳು. ಬಸವಣ್ಣನವರು ಹೆಣ್ಣನ್ನು ವಿವರಿಸಿರುವ ಬಗೆ ಮನೋಜ್ಞವಾಗಿದೆ. ಶ್ರೀ ಗಳ ಚರಣಗಳಲ್ಲಿ ವಂದಿಸುತ್ತಾ ಪ್ರಭುದೇವ್ ಎಮ್ ಎಸ್ ಮತ್ತು ಕುಟುಂಬದವರು ಶಿವಮೊಗ್ಗ.
Prabhudev M S
SHIVAMOGGA

N-2515 

  18-04-2024 09:02 AM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

 ಕಳೆದ ಮೂರು ಅಂಕಣಗಳಲ್ಲಿ ತಾಯಿ, ತಾಯಿಯ ಪ್ರೀತಿ ಮತ್ತು ಮಮಕಾರ ಈ ವಿಚಾರಗಳೇ ವಿಷಯ ವಸ್ತುಗಳಾಗಿವೆ.
ಎಲ್ಲಾ ಕಡೆ ದೇವರಿದ್ದಾನೆ ಎಂದು ಹೇಳುವಾಗ ನಮ್ಮ ಕಷ್ಟದ ಸಮಯದಲ್ಲಿ ಆ ದೇವರೇಕೆ ನಮ್ಮ ಎದುರು ಬರುವುದಿಲ್ಲ ಎಂದು ವಾದಿಸುತ್ತಾ ಶಪಿಸುವವರಿಗೆ ಸಾತ್ವಿಕರು ಹೇಳುವ ಉತ್ತರ: "ಎಲ್ಲಾ ಕಡೆ ಎಲ್ಲಾ ಸಮಯದಲ್ಲೂ ಬರಲು ಆಗದ ಕಾರಣ, ದೇವರು ತಾಯಿಯನ್ನು ಸೃಷ್ಟಿಸಿದ್ದಾನೆ" ಎಂದು. ಇದು ಅಕ್ಷರಶಃ ಸತ್ಯವಾದ ಮಾತು. ಮನುಷ್ಯನಿಗೆ ಅವನ ತಾಯಿಯೇ ಇನ್ನೊಂದು ದೇವರು ಎಂಬ ಆಫ್ರಿಕನ್ ಗಾದೆಮಾತು ಇದೆ. ತಂದೆಯ ಒಳ್ಳೆತನ ಪರ್ವತಗಳಿಗಿಂತಲೂ ಎತ್ತರವಾಗಿದ್ದರೆ, ತಾಯಿಯ ಒಳ್ಳೆತನ ಸಮುದ್ರಕ್ಕಿಂತಲೂ ಆಳವಾಗಿರುತ್ತದೆ ಎಂದು ಜಪಾನಿನಲ್ಲಿ ಒಂದು ನಾಣ್ಣುಡಿ ಇದೆ. ಚಾಣಾಕ್ಯ ಹೇಳುವಂತೆ ತಾಯಿಗಿಂತ ಮಿಗಿಲಾದ ದೇವರಿಲ್ಲ. ಹಾಗೆಯೇ "ಮಾತೃ ದೇವೋ ಭವ" ಎಂದು ಉಪನಿಷತ್ತುಗಳಲ್ಲಿ ಉಲ್ಲೇಖವಾಗಿದೆ. "ತನ್ನ ಮಕ್ಕಳ ತಪ್ಪನ್ನು ಕ್ಷಮಿಸದ ತಾಯಿ ಇದ್ದಾಳೆಯೇ?" ಎಂದು ಭಾಸ ಕವಿ ತನ್ನ `ಪ್ರತಿಮಾ` ನಾಟಕದ ಮೂಲಕ ಪ್ರಶ್ನೆ ಮಾಡುತ್ತಾನೆ (ತಾಯಿಯ ಕ್ಷಮಾ ಗುಣವನ್ನು ವಿವರಿಸುತ್ತಾ). ಮನುಸ್ಮೃತಿಯಲ್ಲಿ ಹೇಳಿರುವಂತೆ "ಒಬ್ಬ ಗುರು ಹತ್ತು ಶಿಕ್ಷಕರಿಗಿಂತ ಮಿಗಿಲಾದವನು, ಒಬ್ಬ ತಂದೆ ನೂರು ಗುರುಗಳಿಗಿಂತ ಮಿಗಿಲಾದವನು, ಒಬ್ಬ ತಾಯಿ ಸಾವಿರ ತಂದೆಯರಿಗಿಂತ ಮಿಗಿಲಾದವಳು".‌ ಅಂದರೆ ಶಿಕ್ಷಕ, ಗುರು ಮತ್ತು ತಂದೆಗಿಂತಲೂ ದೊಡ್ಡ ಸ್ಥಾನ ತಾಯಿಯದ್ದು. ನಿನಗೇನು ಗೊತ್ತಾಗುತ್ತೆ ಸುಮ್ಮನಿರಮ್ಮಾ ಎಂದು ಭುಜದೆತ್ತರಕ್ಕೆ ಬೆಳೆದು ನಿಂತ ಮಗನು ಹೇಳಿದಾಗ ಆ ತಾಯಿಗೆ ಸುಮ್ಮನಿರುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ. ತಾಯಿಯನ್ನು ಅಂದರೆ ದೇವರನ್ನು ಸುಮ್ಮನಿರುವಂತೆ ಮಾಡುವ ಶಕ್ತಿ ಮನುಷ್ಯನಿಗಿದೆ. ಸಮಯ ಸಂದರ್ಭಕ್ಕೆ ತಕ್ಕಂತೆ ಭಕ್ತನ ರೂಪದಲ್ಲಿ ಇರುವ ಮಗನು ಹೇಳಿದ್ದನ್ನು ಕೇಳಿಸಿಕೊಂಡು ದೇವರ ರೂಪದಲ್ಲಿ ಇರುವ ತಾಯಿಯು ಸುಮ್ಮನಿರಬೇಕಾದ ಅನೇಕ ಪ್ರಸಂಗಗಳನ್ನು ನಾವೇ ನೋಡಿದ್ದೇವೆ. ಅಮ್ಮನಿಗೆ ತೋರಿಸುವ ಪ್ರೀತಿ ದೇವರಿಗೆ ತೋರಿಸುವ ಭಕ್ತಿಗೆ ಸಮ ಎಂಬುದು ನನ್ನ ಭಾವನೆ. ಶರಣ ಸತಿ ಲಿಂಗ ಪತಿ ಎಂಬಂತೆ ಈ ಮಾತೂ ಸಹ ಅದೇ ಅರ್ಥವನ್ನೇ ಮೂಡಿಸುತ್ತದೆ. ತನ್ನ ಮಗ ತನ್ನನ್ನು ಸುಮ್ಮನಿರಲು ಹೇಳಿದ ಎಂದು ಸಿಟ್ಟಾಗದ ತಾಯಿಯು ಮಗನ ಕ್ಷೇಮವನ್ನೇ ಕೊನೆಯವರೆಗೂ ಬಯಸುತ್ತಾಳೆ. ಹಾಗೆಯೇ ದೇವರೂ ಸಹ ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ ಎಂಬಂತೆ ತನಗೆ ನಿಂದಿಸಿದವರಿಗೆ ಶಪಿಸದೆ ಒಳ್ಳೆಯದನ್ನೇ ಹರಸುವನು. ಇದರಲ್ಲಿ ಸಂಶಯವೇ ಇಲ್ಲ. ಅರ್ಥಪೂರ್ಣವಾದ ಅಂಕಣ. ಉದಾಹರಣೆ, ಉಲ್ಲೇಖ ಮತ್ತು ವಿಷಯ ಪ್ರಸ್ತುತಿ ಅದ್ಭುತವಾಗಿ ಮೂಡಿಬಂದಿದೆ.
ಶರಣು ಶರಣಾರ್ಥಿಗಳು. 🙏


ಪ್ರಸನ್ನ ಯು, ಸನ್ನದು ಆರ್ಥಿಕ ಗುರಿಯೋಜಕರು
ಸಿರಿಗೆರೆ

N-0 

  18-04-2024 08:59 AM   

 



N-2515 

  18-04-2024 08:52 AM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

 ಪರಮಪೂಜ್ಯ ಶ್ರೀ ಗಳ ಈ ಲೇಖನ ನಾಡಿನ ಜನರ ಜೀವನಾನುಭವವನ್ನು ಒರೆಗೆ ಹಚ್ಚುವಂತಿದೆ..ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿಯಲ್ಲೂ ಕರಿಯಮ್ಮನ ಜಾತ್ರೆಯಲ್ಲಿ ಭಕ್ತರು ಆ ದೇವಿ ಕುರಿತು ತಮ್ಮ ಅಭೀಷ್ಟಗಳು ಈಡೇರದಿದ್ದಾಗ ವಾದ್ಯಸಮೇತ ತಮ್ಮದೇ ಆದ ರೀತಿಯಲ್ಲಿ ನಿಂದಿಸುವುದನ್ನು ನಾನು ಸಹ ಗಮನಿಸಿದ್ದೇನೆ..ಅದು ಭಕ್ತ ಮತ್ತು ದೇವರ ನಡುವಿನ ಅತ್ಯಾಪ್ತ ಸಂಬಂಧವೇ ಸರಿ...ನಮ್ಮೆಲ್ಲರ ಹೆಮ್ಮೆಯ ತರಹದ ಜಗದ್ಗುರುಗಳಿಗೆ ಅನಂತ ಅನಂತ ಪ್ರಣಾಮಗಳು...ಜೈ ಶಿವ...
ಮರುಳಸಿದ್ಧೇಶ್ವರ ಎ.ಜಿ.
ನಾಗೇನಹಳ್ಳಿ ಅರಸೀಕೆರೆ ತಾಲ್ಲೂಕು.ಭಾರತ.

N-2515 

  18-04-2024 07:50 AM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

  ಗುರುಭ್ಯೋನಮಃ
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ದೈವ ಅದುವೆ ದೇವರು ದೇವರು ಮತ್ತು ಭಕ್ತ ಒಂದು ಆತ್ಮೀಯ ಬೆಸುಗೆ ನಂಟು ಹೊಂದಿರುವುದೆ ಭಕ್ತಿ ಆಗ ಅನಿರ್ವಚನೀಯ ವ್ಯಕ್ತತೆ
Nazma kousar A
Sirigere

N-2515 

  18-04-2024 07:49 AM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

 Kolaku manasina mooseyind kalmasha baravanigegalu mathada bagge samajika jalatanadalli haridaduthiruvudu gottiddu vichalitharagade odugarige matru premada ankanavannu needida poojyarige pranamagalu
B.basavaraja
Kannakatte. Kottur tq. Vijayanagara dist.

N-2515 

  18-04-2024 07:25 AM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

 ಗುರುಗಳ ಪಾದಕಮಲಗಳಿಗೆ ನಮಿಸುತ್ತಾ,
ದೇವರ ನಿಂದನೆ ಭಕ್ತಿಯಾಗಬಲ್ಲುದೆ? ಎಂಬ ಪ್ರಶ್ನೆ ಗೆ ನನ್ನ ಉತ್ತರ ಹೌದು, ಭಕ್ತಿಯೆ ಅದು ತುಂಬಾ ಪ್ರೀತಿ ವಿಶ್ವಾಸವಿದ್ದಾಗ ಮಾತ್ರ ಸಲುಗೆ ಹೆಚ್ಚಾಗಿ ಆತ್ಮೀಯತೆ ಯಿಂದ ನಮ್ಮ ವರೆ ಅವರೆಂದು ಮನಸ್ಸಿನಿಂದ ಬೈಯುವ ರೀತಿಯಲ್ಲಿ ಪ್ರೀತಿಯನ್ನು ನಿವೆದಿಸುತ್ತೆವೆ.. ಈ ಸಂಧರ್ಭದಲ್ಲಿ ಯಾವುದೇ ಕೆಟ್ಟ ಆಲೋಚನೆ ಹೊಂದಿರದೆ ಇದ್ದಾಗ ಮಾತ್ರ ನೈಜತೆಯ ಬೈಗುಳದ ಜೊತೆ ಪ್ರೀತಿಯ ಅನಾವರಣವಾಗುತ್ತದೆ.ಮನಸ್ಸು ಮತ್ತು ಬುದ್ಧಿ ಎರಡು ಸಹ ಪ್ರೀತಿ ವಾತ್ಸಲ್ಯ ಭಾವನೆಗಳಿಂದ ಕೂಡಿದ್ದು ಆಂತರಿಕ ಮತ್ತು ಬಾಹ್ಯ ನಿಲುವುಗಳು ಒಂದೇಯಾಗಿ ಅಭಿವ್ಯಕ್ತಗೊಳುವ ಬಗೆ ಇದಾಗಿರುತ್ತದೆ.

ರಂಜಿತ ಎಮ್ ಸಿರಿಗೆರೆ.
ರಂಜಿತ ಎಮ್ ಸಿರಿಗೆರೆ
ಸಿರಿಗೆರೆ

N-2515 

  18-04-2024 07:03 AM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

 ದೇವರೆ ಒಂದು ಅತೀತ ಶಕ್ತಿ, ಅಗೋಚರ ಲಿಂಗದ ಶಕ್ತಿ, ಕೆಲವರಿಗೆ ಮಾಯೆಯ ಶಕ್ತಿ,ಕೆಲವರಿಗೆ ನಿಂಬೆ ಹಣ್ಣಿನ ಮಂತ್ರ,ತಂತ್ರದ ಶಕ್ತಿ.
ಈ ಶಕ್ತಿಗಳ ಮೇಲಿನ ಭಯದಲ್ಲಿ ಭಕ್ತಿ,ಸತ್ಯ ಭಕ್ತಿ.
"ಏನೇ ಆಗಲಿ ಭಗವಂತ ನೋಡಿಕೂಳ್ಳುತ್ತಾನೆ "ಎನ್ನುವ ಮಾತು!.ದೇವರ ಆರ್ಶೀವಾದ ಕಳ್ಳನಿಗೂ,ಸುಳ್ಳನಿಗೂ,ನಿಜಭಕ್ತನಿಗೂ ಸಿಗ್ತದೆ.
ಆದರೆ ಎಷ್ಟು ಸತ್ಯವಾಗಿದೆ ಎನ್ನುವುದು ನಮ್ಮ ಬದುಕಿನ ರೀತಿ ,ನೀತಿ,ನಡೆ,ನುಡಿಗಳ ಮೇಲೆ ಪ್ರತಿಶತ(%) ಆಗಿರುತ್ತದೆ. `ಆಶಕ್ತಿ ಕೆಟ್ಟವರಿಗೆ ಮೂದಲು ಕೈಹಿಡಿದು ಕೂನೆಗೆ ಕೈ ಬಿಡುತ್ತಾನೆ.
ಒಳ್ಳೆಯ ವರಿಗೆ ಮೂದಲು ಕೈಬಿಟ್ಟು ಕೂನೆಗೆ ಕೈ ಹಿಡಿಯುತ್ತಾನೆ.ದೇವರು ಒಲಿಯುವುದು ನಿಂದಾಸ್ಥುತಿಗೂ,ಭಕ್ತಿ ಸ್ಥುತಿಗೂ ಒಲಿಯುವುದು ನಮ್ಮ ಮನುಷತ್ವ,ಸತ್ಯದ ಬದುಕಿನ ನೆಲೆಯಮೇಲಂತೂ ಸತ್ಯ`.ಹರಮುನಿದರೆ ಗುರು ಕಾಯ್ವನುಗುರು ಮುನಿದರೆ?
ಪ್ರಣಾಮಗಳೂಂದಿಗೆ💐
ಹೆಚ್ ಎಸ್ ಸಿದ್ದಲಿಂಗಮೂರ್ತಿ
ಸಿರಿಗೆರೆ

N-0 

  18-04-2024 03:41 AM   

 



N-0 

  17-04-2024 08:52 PM   

 



N-2495 

  16-04-2024 01:23 PM   

ಜೀವನ: ಸಿಹಿ ಕಹಿ ನೆನಪುಗಳ ತೂಗುಯ್ಯಾಲೆ

 ಪರಮಪೂಜ್ಯರಿಗೆ ಭಕ್ತಿಯ ಪ್ರಣಾಮಗಳು....

ಪರಮಪೂಜ್ಯರ ಅಂಕಣವು ಭಾರತೀಯ ಸಂಸ್ಕೃತಿ ವಿಶ್ವಮನ್ನಣೆಯನ್ನು ಪಡೆಯಲು ಕಾರಣವೇನೆಂಬುದನ್ನು ಸಾಧ್ಯವಾಗಿಸಿದೆ ಎಂಬುದು ನನ್ನ ಅಭಿಮತ, ವಸುಧೈವ ಕುಟುಂಬಕಂ ಎಂಬ ಈ ಮಣ್ಣಿನ ಧ್ಯೆಯವಾಕ್ಯ ಇಲ್ಲಿನ ಸಂಸ್ಕೃತಿಯ ಬಿಂಬವೆಂದರೆ ಅತಿಶಯೋಕ್ತಿ ಎಂದೆನಿಸದು.

ನಮ್ಮತನ, ನಮ್ಮವರು ಎಂಬುದು ನಾವು ಪರ ಸ್ಥಳಗಳಲ್ಲಿ ಇದ್ದಾಗ, ಹೆಚ್ಚು ಅವಗಾಹನೆಗೆ ಬರುತ್ತದೆ,ಪರಿಚಯವಾದ ತರುವಾಯ ನಮ್ಮವರೇ ಎಂಬ ಮನೋಭಾವನೆ ನಮ್ಮಲ್ಲಿ ಮೂಡುತ್ತದೆ. ಎಂದೂ ಪರಿಚಯವಿರದವರು ಆಕಸ್ಮಿಕವಾಗಿ ಪರಿಚಿತರಾದಾಗ ಅವರೊಂದಿಗಿನ ಬಾಂಧವ್ಯ ಶಾಶ್ವತ, ಆರತಿ ಮಖರ್ಜಿಯವರ ಜೀವನದ ಅಂತ್ಯಕಾಲದಲ್ಲಿ ಪರಮಪೂಜ್ಯರನ್ನು ಕನವರಿಸುವುದು ಶ್ರೀಗಳ ಮೇಲಿನ ನಿಷ್ಕಲ್ಮಶ ಭಕ್ತಿಯ ದ್ಯೋತಕವೇ ಸರಿ. ಬಹುತೇಕ ಉತ್ತರ ಭಾರತೀಯರು ಚಿತಾಭಸ್ಮವನ್ನು ಪವಿತ್ರ ಗಂಗಾನದಿಯಲ್ಲಿ ವಿಸರ್ಜಿಸುವುದು ವಾಡಿಕೆ. ಆದರೆ ಆರತಿ ಮುಖರ್ಜಿರವರ ಅಸ್ತಿಯನ್ನು ಸಿರಿಗೆರೆಯ ಶಾಂತಿವನದ ಜಲಾಶಯದಲ್ಲಿ ಅರ್ಪಿಸಬೇಕೆಂಬ ಮೃತರ ಕುಟುಂಬ ಸದಸ್ಯರ ನಿರ್ಣಯ ನವ ಸಂಕಲ್ಪಕ್ಕೆ ನಾಂದಿಯಾಗಿದೆ. ಈ ಕೋರಿಕೆಗೆ ಪರಮಪೂಜ್ಯರ ಸಹಮತ ಸ್ತುತ್ಯರ್ಹ,

ಇವನಾರವ, ಇವನಾರವ,
ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ,
ಇವನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.

ಎಂಬ ಬಸವಣ್ಣನವರ ವಚನ ಇಲ್ಲಿ ಪ್ರಸ್ತುತವೆನಿಸುವುದು.
*ಪ್ರದೀಪ್ ಎಂ ತೂಲಹಳ್ಳಿ*
ತೂಲಹಳ್ಳಿ

N-2512 

  16-04-2024 10:20 AM   

ಬಿರು ಬೇಸಿಗೆಯಲ್ಲಿ ಮೂಕ ಜೀವಿಗಳಿಗೆ ಶ್ರೀಮಠದ ನೀರಿನಾಸರೆ

 Namaskara Valle kelasa madiddiri,mookapranigaligi kudiyalu neeru koduvudu Valle kelesa.
Chandramouli Chitriki
Yeshwantnagar,Karnataka,India

N-2512 

  16-04-2024 09:09 AM   

ಬಿರು ಬೇಸಿಗೆಯಲ್ಲಿ ಮೂಕ ಜೀವಿಗಳಿಗೆ ಶ್ರೀಮಠದ ನೀರಿನಾಸರೆ

 Parama Pooja Sri shivakumara Shiv Aacharya swameji avarege Nan koti koti namasukara🇮🇪
Siddeshwara ka
Kenchapura chatanahalli.p. harapanahalli.t.vijayanagara.d.karnataka

N-2512 

  16-04-2024 07:13 AM   

ಬಿರು ಬೇಸಿಗೆಯಲ್ಲಿ ಮೂಕ ಜೀವಿಗಳಿಗೆ ಶ್ರೀಮಠದ ನೀರಿನಾಸರೆ

 ಪರಮಪೂಜ್ಯರಿಗೆ ಕೋಟಿ ಕೋಟಿ ಅಭಿನಂದನೆಗಳು
Umesha babu M A
MADHUGIRI Karnataka

N-2511 

  16-04-2024 07:04 AM   

ಸಿರಿಗೆರೆ ಶಾಂತಿವನದಲ್ಲಿ ಕಡಿಮೆ ನೀರಿನ ಪ್ರಮಾಣದಲ್ಲಿ ಏರೋಬಿಕ್ ಭತ್ತ ಪ್ರಯೋಗ ಯಶಸ್ವಿ

 We want this paddy seed sir 9008632724
G S Patel
Karanataka

N-2511 

  15-04-2024 03:11 PM   

ಸಿರಿಗೆರೆ ಶಾಂತಿವನದಲ್ಲಿ ಕಡಿಮೆ ನೀರಿನ ಪ್ರಮಾಣದಲ್ಲಿ ಏರೋಬಿಕ್ ಭತ್ತ ಪ್ರಯೋಗ ಯಶಸ್ವಿ

 ವಿಜ್ಞಾನ ಹೇಳುತ್ತೆ ಪ್ರಶ್ನಸಿದೆ ಯಾವುದೇ ವಿಷಯದ ,ಅನುಭವಕ್ಕೆ ತಿಳಿಯುವುದಿಲ್ಲ.ಅದೇರೀತಿ ಶ್ರೀಗಳ ವಿಚಾರ ಧಾರೆನೂ ಕೂಡ ಅಳತೆ ಮಾನದಂಡಗಳಿಂದಲೇ ನಿಜವಾದ ವಿಷಯ ಮಂಥನ ಹಾಗೂ ಭತ್ತದ ತಳಿಗಳ ಬಗ್ಗೆ ಅಧ್ಯಯನ ,ಪ್ರಾಯೋಗಿಕವಾಗಿದೆ.ಫಲಿತಾಂಶ ದಲಿ ಪಾಸಾದ,ರೆ.ರೈತರಿಗೆ ಅನುಕೂಲ ವಾಗಬಹುದಲ್ಲವೆ.
ಹೆಚ್ ಎಸ್ ಸಿದ್ದಲಿಂಗಮೂರ್ತಿ
ಸಿರಿಗೆರೆ

N-2510 

  15-04-2024 11:30 AM   

ಪ್ರಾಣ ಪ್ರತಿಷ್ಠಾಪನೆ ಅಲ್ಲ ವಿಗ್ರಹದ ಮೇಲೆ ನಿಮ್ಮ ಭಕ್ತಿ ಪ್ರತಿಷ್ಠಾಪನೆಯಾಗಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 ೧೧ ಮತ್ತು ೧೨ ರಂದು ನಡೆದ ಭಜನಾ ಸ್ಪರ್ಧೆ ನಿಜವಾಗಿಯೂ ಒಂದು ಅವಿಸ್ಮರಣೀಯ ಕ್ಷಣಗಳು,ನಾನು ಕೂಡ ಒಬ್ಬ ತೀರ್ಪುಗಾರನಾಗಿ ಭಾಗವಹಿಸಿದ್ದು ನನ್ನ ಜೀವನ ಸಾಧನೆ, ಶ್ರೀ ಮಠದ ಈ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು , ಈ ಸ್ಪರ್ಧೆಯಲ್ಲಿ ೧. ವೇಷಭೂಷಣ, ೨. ಸಾಹಿತ್ಯ, ೩ತಾಳ/ಲಯಗರಿಕೆ, ೪.ವಾದ್ಯ. ೫ ತಂಡಗಳ ಕೌಶಲ್ಯ. ಇವುಗಳ ಆಧಾರದ ಮೇಲೆ ತೀರ್ಪು/ ನಿರ್ಣಯ ಮಾಡಿ ಸುಮಾರು ೬೫ ತಂಡಗಳಲ್ಲಿ ಕಿರಿಯರ ವಿಭಾಗದಲ್ಲಿ ೩ ತಂಡ, ಹಿರಿಯರ ೩ ತಂಡಗಳನ್ನು ಆಯ್ಕೆ ಮಾಡಲಾಯಿತು.ಎಲ್ಲ ತಂಡಗಳು ಉತ್ತಮ ಪ್ರದರ್ಶನ ನೀಡಿದವು, ಈ ಸಂದರ್ಭದಲ್ಲಿ ನಿರ್ಣಾಯಕ ಜವಾಬ್ದಾರಿ ವಹಿಸುವುದು ಒಂದು ಸವಾಲು. ಇಂತಹ ಸಂದರ್ಭದಲ್ಲಿ ಅವಕಾಶ ಕೊಟ್ಟ ಶ್ರೀ ಮಠದ ಕಾರ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ, ನಿಷ್ಟೆಯಿಂದ ಮಾಡಿದ್ದೇವೆ ಎಂದು ಭಾವಿಸಿದ್ದೇನೆ. ಅವಕಾಶ ಕಲ್ಪಿಸಿದ ಪರಮ ಪೂಜ್ಯರಿಗೂ ಅಣ್ಣನ ಬಳಗದ ಅಧ್ಯಕ್ಷರಿಗೂ ಎಲ್ಲ ಕಾರ್ಯಕರಿ ಪದಾಧಿಕಾರಿಗಳಿಗೆ ಧನ್ಯವಾದಳೊಂದಿಗೆ ಭಕ್ತಿ ಪೂರ್ವಕ ನಮನಗಳು.
Gnanadeva CP
India

N-2511 

  15-04-2024 09:50 AM   

ಸಿರಿಗೆರೆ ಶಾಂತಿವನದಲ್ಲಿ ಕಡಿಮೆ ನೀರಿನ ಪ್ರಮಾಣದಲ್ಲಿ ಏರೋಬಿಕ್ ಭತ್ತ ಪ್ರಯೋಗ ಯಶಸ್ವಿ

 Jai taralabalu ಆಧುನಿಕ ಬಗೀರಥರು
Santhosh
India karanataka

N-2510 

  14-04-2024 01:20 PM   

ಪ್ರಾಣ ಪ್ರತಿಷ್ಠಾಪನೆ ಅಲ್ಲ ವಿಗ್ರಹದ ಮೇಲೆ ನಿಮ್ಮ ಭಕ್ತಿ ಪ್ರತಿಷ್ಠಾಪನೆಯಾಗಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 ಬಯಲು ಸೀಮೆಯಿಂದ ಬಂದಂತಹ ಭಜನಾ ಮಂಡಳಿಗೆ ಒಂದು ಅವಕಾಶ ಕೊಡಬಹುದಿತ್ತು
ಕಡೂರು,ತರೀಕೆರೆ, ಹೊಸದುರ್ಗ,
ತೀರ್ಪುಗಾರರು ಆಯ್ಕೆ ಮಾಡಿದ ಒಂದು ತಂಡ
ತುಂಬಾ ದುರ್ಬಲ ಇತ್ತು ಆದರೂ ಯಾವ ಮಾನದಂಡದಮೇಲೆ ಆಯ್ಕೆ ಮಾಡದರೊ ತಿಳಿಯದು ರಾತ್ರಿ ಅವರು ಹಾಡುವಾಗ ಹತ್ತು ಜನಕೂ ಜಾಸ್ತಿ ಇದ್ದರು
ಬೆಳಿಗ್ಗೆ ಗುರುಗಳ ಸಮ್ಮುಖದಲ್ಲಿ ಹಾಡಿದ ಭಜನೆ
ಯಾವುದು ಸಾಹಿತ್ಯ ಏನು ಅನ್ನೊದೆ ಅರ್ಥ ಆಗಲಿಲ್ಲಾ
ಅವರಿಗೆ ದ್ವೀತಿಯ ಬಹುಮಾನ ಕೊಟ್ಟಿದ್ದು ಬಹಳ ತಂಡಗಳಿಗೆ ಅಸಮದಾನ ಕಂಡುಬಂತು
ಒಟ್ಟಾರೆ ಪೂಜ್ಯರ ಮಾರ್ಗದರ್ಶನದಲ್ಲಿ ಆಯೊಜನೆ ಮಾಡಿದ್ದ ಈ ಭಕ್ತಿ ಕಾರ್ಯಕ್ರಮ ತುಂಬಾ ಚಂದ ಮೂಡಿಬಂತು
ಎಲ್ಲರಿಗೂ ಅವಕಾಶ,ಊಟ ತಿಂಡಿ ವಿಶ್ರಾಂತಿ ವ್ಯವಸ್ಥೆ ಮತ್ತು ನಮ್ಮೊಂದಿಗೆ ಮಠದ ಎಲ್ಲಾ ಭಕ್ತರು ಸಹಕರಿಸಿದ ರೀತಿ,ನಾವು ಮದ್ಯಾಹ್ನ ಊಟ ಮಾಡುವಾಗ ಸ್ವತಃ ಸ್ವಾಮಿಜಿಯವರೆ ಆಗಮಿಸಿ ವಿಚಾರಿಸಿದ್ದು ಬಹಳ ಸಂತೊಷ ಆಯಿತು
ಪೂಜ್ಯರಿಗೆ ಅನಂತ ನಮನಗಳು
ಸಹಕರಿಸಿದ ಸರ್ವರಿಗೂ ಪ್ರೀತಿಯ ನಮನಗಳು,,
NagarajaKS
Kunkanadu,kadur karnataka

N-2510 

  14-04-2024 08:46 AM   

ಪ್ರಾಣ ಪ್ರತಿಷ್ಠಾಪನೆ ಅಲ್ಲ ವಿಗ್ರಹದ ಮೇಲೆ ನಿಮ್ಮ ಭಕ್ತಿ ಪ್ರತಿಷ್ಠಾಪನೆಯಾಗಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 ವಿಗ್ರಹದ‍ಮೇಲಿನ ನಿಷ್ಠೆ ನಿಮ್ಮ ಭಕ್ತಿ:಼
ಆ ಭಯದ ,ಅಭಯದ ಮನೋ ನಿಗ್ರಹವೇಭಕ್ತಿ ಪರಾಕಾಷ್ಠೆ.
ಮನೆ ದೇವರ,ಗುರುಹಿರಿಯರ, ನಿಯಮಬದ್ದ ಸಂಸ್ಕಾರದಿಂದಲೆ ಮಾತ್ರ ಸಾಧ್ಯ.
ಬೂಟಾಟಿಕೆಯ ಭಕ್ತಿ ಮೆಚ್ಚನಾ ನಮ್ಮ ಕೂಡಲಸಂಗಮ ಬಸವಣ್ಣ.
ನಾವು ದೇವರ ಸೃಷ್ಟಿ. ನಾನೇ ದೇವರನ್ನು ಸೃಷ್ಟಿಸಿ ದ್ದೇವೆಂದರೆ ಮೂರ್ಖತನ. ಅಗೋಚರ, ಅಗಮ್ಯ,ಅಪ್ರತಿಮ ಶಕ್ತಿಯೇ ದೇವರ,ಭಗವಂತನ ದಯೆ.
ಈ ನಂಬಿಕೆಗಳು ಮಾನವನ,ಮಾನವೀಯ ಮೌಲ್ಯ,ಮನುಷತ್ವ,ವ್ಯಕಕ್ತಿತ್ವ, ನಡೆ ನುಡಿಗೆ ಗುರು ಆರ್ಶೀವಾದ ಗಳ ಫಲವಲ್ಲವೇ?!.
ಹೆಚ್ ಎಸ್ ಸಿದ್ದಲಿಂಗಮೂರ್ತಿ
ಸಿರಿಗೆರೆ