N-2495 
  14-04-2024 08:23 AM   
ಜೀವನ: ಸಿಹಿ ಕಹಿ ನೆನಪುಗಳ ತೂಗುಯ್ಯಾಲೆ
ಶ್ರೀ ಗಳವರ ಅಂಕಣ *"ಬಿಸಿಲು ಬೆಳದಿಂಗಳು"*
*ಜೀವನ ಸಿಹಿ -ಕಹಿ ನೆನಪುಗಳ ತೂಗುಯ್ಯಾಲೆ*
ಇದರ ಬಗ್ಗೆ ನನ್ನ ಮನದಾಳದ ಮಾತುಗಳನ್ನು ವ್ಯಕ್ತ ಪಡಿಸುವುದರ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದೇನೆ.
ಈ ಜೀವನದ ಹಾದಿ ಅಂದುಕೊಂಡಷ್ಟು ಸುಲಭವಲ್ಲ. ಅನೇಕ ನಿರೀಕ್ಷಿತವಾದ ಮತ್ತು ಅನಿರೀಕ್ಷಿತವಾದ ಘಟನೆಗಳು ನಡೆದುಬಿಡುತ್ತವೆ. ಒಮ್ಮೊಮ್ಮೆ ನಾವು ಅಂದುಕೊಂಡಂತೆ ಏನು ಆಗುವುದಿಲ್ಲ. ಯಾವುದನ್ನು ನಾವು ಕನಸು ಮನಸ್ಸಿನಲ್ಲೂ ಅಂದುಕೊಂಡಿರುವುದಿಲ್ಲವೋ ಅದು ಆಗಿಬಿಡುತ್ತದೆ. ಯಾವುದಕ್ಕೂ ವಿಚಲಿತ ರಾಗದೆ ಸಿಹಿ ಕಹಿ ಅಂದರೆ, ಕಷ್ಟ ಸುಖ, ನೋವು ನಲಿವು, ಎರಡು ಸಮಾನವಾಗಿ ತೆಗೆದುಕೊಳ್ಳಬೇಕು. ಆಗಲೇ ನಾವು ನೆಮ್ಮದಿಯಾಗಿ ಬದುಕಲು ಸಾಧ್ಯ.
ನನ್ನ ಅನಿಸಿಕೆ ಪ್ರಕಾರ ಕಷ್ಟವನ್ನು ನೋವನ್ನು ಕಹಿಯನ್ನು ಹೆಚ್ಚಾಗಿ ಅನುಭವಿಸಬೇಕು ಆಗ ನಾವು ಹಣ್ಣಿನಂತೆ ಪರಿಪಕ್ವವಾಗಲು ಸಾಧ್ಯವಾಗುತ್ತದೆ. ಸುಖ ಆರೋಗ್ಯಕ್ಕೆ ಹಾನಿಕರ, ಸಿಹಿ ತಿಂದರೆ ಡಯಾಬಿಟಿಸ್, ಬೇವಿನ ಎಲೆ ಅಥವಾ ಹಾಗಲಕಾಯಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು, ಹಾಗೆ ಕಷ್ಟಗಳು ಬಂದಾಗ ನಮ್ಮಲ್ಲಿ ಒಂದು ಅದ್ಭುತ ಶಕ್ತಿ ಬರುತ್ತದೆ. ಧೈರ್ಯ ಬರುತ್ತದೆ, ಒಳ್ಳೊಳ್ಳೆ ಆಲೋಚನೆಗಳು ಹುಟ್ಟಿಕೊಳ್ಳುತ್ತದೆ. ಹೇಗೆ ಎದುರಿಸಬೇಕು ಹಾಗೂ ಎದುರಿಸಿ ನಿಲ್ಲಲೇ ಬೇಕು ಎಂಬ ಛಲ ಕೂಡ ಹುಟ್ಟುತ್ತದೆ. ಅದೇ ಸುಖ, ನಲಿವು, ಸಂತೋಷ, ಸಿಹಿ, ಹೆಚ್ಚಾದರೆ ನಮ್ಮಲ್ಲಿ ಅನುಭವದ ಕೊರತೆ, ಅಹಂ, ನಮಗೆ ಏನು ಬರೋದೇ ಇಲ್ಲ ಅನ್ನೋ ರೀತಿ ಕಲ್ಪನೆಗಳು ಬಂದು ನಾವು ಏನೇನೋ ಆಗಿಬಿಡುತ್ತೇವೆ. ಯೋಚಿಸಿ ನೋಡಿ. ಹೌದೋ ಅಲ್ಲವೋ ? ಆದಷ್ಟು ನಾವು ಕಹಿಯನ್ನು ಅಗಿದು ನುಂಗುತ್ತಿರಬೇಕು. ಆಗ ನಮಗೆ ಬಿಪಿ, ಶುಗರ್ ಇತ್ಯಾದಿ ಕಾಯಿಲೆಗಳು ಬರುವುದಿಲ್ಲ. ಅಂದರೆ ಇದರ ಅರ್ಥ ಒಂದು ಹಿಂದಿ ಹಾಡಿನ ಪ್ರಕಾರ, ದುಃಖ್ ತೋ ಅಪ್ ನಾ ಸಾಥೀರೇ ಅಂತ.
ಸ್ವಾಮೀಜಿಯವರು ವಿದೇಶ ಪ್ರವಾಸದಲ್ಲಿದ್ದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.ಎಂತಹ ಅನುಭವ ನೋಡಿ.
ನಾವು ಒಂಟಿಯಾಗಿದ್ದಾಗ, ವಿದೇಶಕ್ಕೆ ಹೋದಾಗ, ಬೇರೆ ಕಡೆ ವಾಸವಿದ್ದಾಗ, ನಮ್ಮವರನ್ನೆಲ್ಲ ಬಿಟ್ಟು ಹೋಗಿರುತ್ತೇವೆ. ಆಗ ನಮಗೆ ಯಾರು ಇಲ್ಲವಲ್ಲ ಎಂಬ ಒಂಟಿತನ ಕಾಡುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ನಮನ್ನು ಯಾರಾದರೂ ಕರೆದು ಆತ್ಮೀಯವಾಗಿ ಮಾತನಾಡಿಸಿದರೆ, ನಮಗೆ ಆಗುವ ಆನಂದ ಅಷ್ಟಿಷ್ಟಲ್ಲ . ಒಂದು ಕ್ಷಣ ಜಾತಿ, ಧರ್ಮ, ವೃತ್ತಿ, ಅಂತಸ್ತು, ಎಲ್ಲವನ್ನು ಬಿಟ್ಟು ನಮ್ಮೆದುರಿಗೆ ಇರುವ ಆತ್ಮೀಯರೇ ನಮಗೆ ತಂದೆ ತಾಯಿ, ಬಂಧು ಬಳಗ, ಎಲ್ಲವೂ ಆಗಿಬಿಡುತ್ತಾರೆ. ಅವರು ಮಾಡಿದ ಉಪಚಾರ, ಸೇವೆ, ತೋರಿಸಿದ ಪ್ರೀತಿ, ಇವೆಲ್ಲ ಬೆಲೆ ಕಟ್ಟದವುಗಳಾಗಿ ಬಿಡುತ್ತವೆ. ಆ ಅನುಭವವೇ ಒಂದು ರೀತಿಯ ರೋಮಾಂಚನ.
ಸ್ವಾಮೀಜಿಗಳು ಈ ಅಂಕಣದಲ್ಲಿ ಬರೆದ ತಮ್ಮ ಅನುಭವಗಳನ್ನು ಓದಿ ರೋಮಾಂಚನವಾಯಿತು. ಕೊನೆಯಲ್ಲಿ ಅವರ ಮಗಳು ಬರೆದ ಪತ್ರ ತಾಯಿಯ ಕೊನೆಯ ಆಸೆಯಂತೆ ಚಿತಾಭಸ್ಮವನ್ನು ಮಠದ ಶಾಂತಿವನ ಜಲಾಶಯದಲ್ಲಿ ವಿಸರ್ಜನೆ ಮಾಡುವ ಸಮ್ಮತಿ ಏನೋ ಒಂದು ರೀತಿಯ, ಏನೆಲ್ಲಾ ಯೋಚನೆಗಳು ಸುಳಿದು ಮಾಯವಾಗಿ ಬಿಡುತ್ತವೆ ಅಲ್ಲವೇ ? ಆದ್ದರಿಂದ ನಾವು ಎಲ್ಲೇ ಇರಲಿ ಸಹೋದರತ್ವ ಬೆಳೆಸಿಕೊಂಡು, ಸಹಬಾಳ್ವೆಯ ಜೀವನವನ್ನು ನಡೆಸಬೇಕು. ನಮ್ಮ ಸುತ್ತಮುತ್ತಲಿನವರು, ಅಕ್ಕಪಕ್ಕದವರು, ನಮ್ಮ ಜೊತೆ ಇರುವವರನ್ನು ಆಪತ್ಬಾಂಧವರು , ಸಹೋದರ ಸಹೋದರಿಯರು, ಬಂಧು ಬಾಂಧವರೆಂದು ತಿಳಿದು ನಾವು ಜೀವನವನ್ನು ಸಾಗಿಸಿದರೆ, ಸಿಹಿ ಕಹಿ ಎಂಬ ತೂಗು ಯ್ಯಾಲೆಯಲ್ಲಿ ತೂಗಬಹುದು. *ಧನ್ಯವಾದಗಳು* *ಜೈ ಹಿಂದ್*
ಮಹಬೂಬಿ ದೈಹಿಕ ಶಿಕ್ಷಣ ಶಿಕ್ಷಕಿ ಸ ಹಿ ಪ್ರಾ ಶಾಲೆ ಮದಕರಿಪುರ ಚಿತ್ರದುರ್ಗ*