N-2495 
  05-04-2024 04:59 PM   
ಜೀವನ: ಸಿಹಿ ಕಹಿ ನೆನಪುಗಳ ತೂಗುಯ್ಯಾಲೆ
ಬಿಸಿಲು ಬೆಳದಿಂಗಳು…
*ತಾ॥4/4/2024 ರ ಅಂಕಣ*
ಪರಮಪೂಜ್ಯ ಗುರುಗಳ ಪಾದಪದ್ಮಗಳಲ್ಲಿ ವಂದಿಸುತ್ತಾ, ತಮ್ಮ ಅಂಕಣ,”ಜೀವನ: ಸಿಹಿ ಕಹಿ ನೆನಪುಗಳ ತೂಗುಯ್ಯಾಲೆ”, ಅಂಕಣಕ್ಕೆ ನನ್ನ ಪ್ರತಿಕ್ರಿಯೆ…..
ಜೀವನದ ಹಾದಿಯಲ್ಲಿ ನಾವು ನುಡಿಯುವುದು ಹಾಗೂ ನಡೆದುಕೊಳ್ಳುವುದು ಬಹಳ ಮುಖ್ಯವಾದ ಎರಡು ಅಂಶಗಳು. ಸದಾಚಾರದ ನಡವಳಿಕೆ, ಸುಮಧುರ ಮಾತುಗಳಿಂದ ಎಲ್ಲರನ್ನೂ ಗೆಲ್ಲಬಹುದು. ಹೇಳುವುದು ಸುಲಭವಾದರೂ, ಅದರಂತೆ ನಡೆದುಕೊಳ್ಳುವುದು ಕಷ್ಟವೇ. ಆದರೂ ನೆನೆಸಿಕೊಂಡಾಗಲಾದರೂ ಸತತ ಪ್ರಯತ್ನ ಮಾಡುವುದನ್ನು ಬಿಡಬಾರದು ಅಷ್ಟೇ. ನಾಲಗೆ ಚೆನ್ನಾಗಿದ್ದರೆ ಲೋಕವನ್ನೇ ಗೆಲ್ಲಬಹುದು ಎಂಬ ನಾನ್ನುಡಿಯೂ ಕೂಡಾ ಇದೆ.
ಗುರುಗಳು ಯಾವುದೇ ಸಂವಹನದ ಬೆಳವಣಿಗೆ ಇಲ್ಲದ ಕಾಲದಲ್ಲಿ ವಿದೇಶದಲ್ಲಿ ವಿದ್ಯಾಭ್ಯಾಸ ಗಳಿಸಲು ಬಂದ ಅನುಭವ, ನಂತರದಲ್ಲಿ ಭಾರತೀಯರ ಪರಿಚಯವಾಗಿ, ಆ ಬಂಧ ಹೇಗೆ ಕೊನೆವರೆಗೂ ಕರೆದುಕೊಂಡು ಹೋಯಿತು ಎನ್ನುವುದನ್ನು ಮನೋಜ್ಞವಾಗಿ ಲೇಖನಿಸಿದ್ದಾರೆ. ಕೇವಲ ರಕ್ತ ಹಂಚಿಕೊಂಡಾಗ ಮಾತ್ರ ಸಂಬಂಧಿಗಳಾಗುವುದಿಲ್ಲ, ಭಾವನೆಗಳನ್ನು ಹಂಚಿಕೊಂಡಾಗ ಆ ಬಂಧ ಎಲ್ಲಕ್ಕಿಂತಲೂ ಬಲವಾಗಿ ಕೊನೆವರೆಗೂ ಉಳಿಯುವುದನ್ನ ನಾವು ಕೂಡಾ ನಮ್ಮ ಜೀವನದ ಅನುಭವಗಳಲ್ಲಿ ಸಾಕ್ಷೀಕರಿಸಿಕೊಂಡಿದ್ದೇವೆ. ಏನೇ ಆಗಲಿ ಸಜ್ಜನರು, ಸಾತ್ವಿಕರ ಸಂಗ ಬದುಕಿನಲ್ಲಿ ದೊರೆತಾಗ, ಅವನ್ನು ಕೊನೆವರೆಗೂ ಜತನದಿಂದ ಕಾಪಾಡಿಕೊಂಡರೆ, ಅದಕ್ಕಿಂತಲೂ ದೊಡ್ಡದಾದ ಸಂಪತ್ತು ಬೇರೊಂದಿಲ್ಲ. ಅವರು ನಮಗೆ ತಮ್ಮ ಆಸ್ತಿಯಲ್ಲಿ ಪಾಲು ಕೊಡದೇ ಹೋದರೂ, ಒಳ್ಳೆಯ ಮೌಲ್ಯಯುತ ಬದುಕನ್ನು ಬಾಳಲು ನೀಡುವ ಹಿತೋಪದೇಶಗಳು ನಮ್ಮ ಇಹಪರದ ಬದುಕಿಗೆ ಬೇಕಾದ ಬುತ್ತಿಗಂಟಾಗುತ್ತದೆ.
ಗುರುಗಳ ಅಂಕಣಕ್ಕೆ ನಾಲ್ಕು ಸಾಲು ಬರೆಯಲು ಅವಕಾಶ ಮಾಡಿಕೊಟ್ಟ ಗುರುಮಠದ ಎಲ್ಲರಿಗೂ ನನ್ನ ಕೋಟಿ ಪ್ರಣಾಮಗಳು.
"ರೂಪ ಮಂಜುನಾಥ*
ಹೊಳೆನರಸೀಪುರ. ವಾಸ್ತವ್ಯ: ಅಮೆರಿಕಾ