N-2495 
  04-04-2024 04:39 PM   
ಜೀವನ: ಸಿಹಿ ಕಹಿ ನೆನಪುಗಳ ತೂಗುಯ್ಯಾಲೆ
ಪೂಜ್ಯ ಗುರುಗಳವರ ಶ್ರೀ ಪಾದಗಳಿಗೆ ನಮಸ್ಕರಿಸುತ್ತಾ..
*ಜೀವನವೂ ಸಿಹಿ- ಕಹಿಗಳ ಉಯ್ಯಾಲೆ* ಅತ್ಯಂತ ಸೊಗಸಾದ ಶೀರ್ಷಿಕೆಯ ಅಂಕಣ ಬುದ್ದಿ ಅವರೇ..
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು” ಎಂಬ ವಚನದ ಆಶಯಕ್ಕೆ ಅನುಗುಣವಾಗಿ ಮನುಷ್ಯನು ತನ್ನ ಆತ್ಮ ಒಪ್ಪುವಂತೆ ನಡೆದುಕೊಂಡರೆ ಅದೇ ಸಾರ್ಥಕ ಜೀವನವೆಂದು ಹೇಳಿದ್ದೀರಿ ಬುದ್ದಿ..
ಯಾರನ್ನೋ ಮೆಚ್ಚಿಸಲು ತಮ್ಮತನವನ್ನು ಅಡಮಾನ ಇಡುವ ಇಂದಿನ ಕಾಲಘಟ್ಟದಲ್ಲಿ , ಪ್ರಾಮಾಣಿಕರು ಸಿಗುವುದೇ ಅಪರೂಪವಾಗಿದೆ..
ನಿಮ್ಮ ಲೇಖನದಲ್ಲಿ
ಆ ತಾಯಿಯ ಅನ್ನದ ಋಣವನ್ನು ಅದೆಷ್ಟು ಮನಮುಟ್ಟುವಂತೆ ಬರೆದಿದ್ದೀರಿ ಎಂದರೆ , *ಹಸಿದವರಿಗೆ ಯಾರೇ ಆದರೂ ಅನ್ನವಿಟ್ಟರೆ ಮರೆಯಬಾರದು ಅನ್ನೋ ನೀತಿಯನ್ನು ತಿಳಿಸಿದ್ದೀರಿ..*
ನಿಜವಾಗಿಯೂ ನಮ್ಮನ್ನು ಪ್ರೀತಿಸುವವರು ಯಾವುದೇ ದಿಕ್ಕಿನಲ್ಲಿ ಇರಲಿ ಅವರ ಅಂತರಂಗದ
ಕೂಗು ಹೃದಯಕ್ಕೆ ಮುಟ್ಟುತ್ತದೆ...
ನಿಮ್ಮೊಗಳೊಂದಿಗೆ ನಾವು ಒಬ್ಬರಾಗಿ ಇರುತ್ತೇವೆಂದು ಮನವರಿಕೆ ಮಾಡುತ್ತದೆ.. ನಿಜವಾದ ಬಾಂಧವ್ಯ
ಮರೆತ ತಾಯಿ ಹೃದಯದ ಹಾಡನ್ನು ಮತ್ತೆ ನೆನಪು ಮಾಡುವವರೇ ನಿಜವಾದ ಆತ್ಮೀಯರು!!
ಜಲಕ್ಕೆಲ್ಲಿದೆ ಮೈಲಿಗೆ..? ಶಾಂತವಾದ ತಾಯಿ ಮನಸ್ಸು ಸಿರಿಗೆರೆ ಜಲದಲ್ಲಿ ಒಂದಾಗಿದ್ದು ನೆಮ್ಮದಿ
ಇಂಥ ಸನ್ನಿವೇಶಗಳು ಅದೆಷ್ಟು ನಿಮ್ಮ ಮನದ ಮೂಲೆಯಲ್ಲಿ ಅಡಗಿರಬಹುದು ..
ಬೆಳದಿಂಗಳನ್ನು ಹೊತ್ತ ಬಿಸಿಲೋ ,
ಬಿಸಿಲ ಹೊತ್ತ ಬೆಳದಿಂಗಳೋ ..
ಓದುಗರ ಮುಂದಿಟ್ಟಾಗ ಅದೇನೋ ನೆಮ್ಮದಿ ನಿಮಗೂ ನಮಗೂ..
ಧನ್ಯವಾದಗಳು ಬುದ್ಧಿಯವರೆ..
ಶ್ರೀ ಮಠದ ಭಕ್ತಳು
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ..
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ . ಚನ್ನಗಿರಿ ತಾಲ್ಲೂಕು