N-2495 
  04-04-2024 07:41 AM   
ಜೀವನ: ಸಿಹಿ ಕಹಿ ನೆನಪುಗಳ ತೂಗುಯ್ಯಾಲೆ
ಪರಮಪೂಜ್ಯರಿಗೆ ಭಕ್ತಿಯ ಪ್ರಣಾಮಗಳು....
ಪರಮಪೂಜ್ಯರ ಅಂಕಣವು ಭಾರತೀಯ ಸಂಸ್ಕೃತಿ ವಿಶ್ವಮನ್ನಣೆಯನ್ನು ಪಡೆಯಲು ಕಾರಣವೇನೆಂಬುದನ್ನು ಸಾಧ್ಯವಾಗಿಸಿದೆ ಎಂಬುದು ನನ್ನ ಅಭಿಮತ, ವಸುದೈವ ಕುಟುಂಬಕಂ ಎಂಬ ಈ ಮಣ್ಣಿನ ಧ್ಯೆಯವಾಕ್ಯ ಇಲ್ಲಿನ ಸಂಸ್ಕೃತಿಯ ಬಿಂಬಕವೆಂದರೆ ಅತಿಶಯೋಕ್ತಿ ಎಂದೆನಿಸದು.
ನಮ್ಮತನ, ನಮ್ಮವರು ಎಂಬುದು ನಾವು ಪರ ಸ್ಥಳಗಳಲ್ಲಿ ಇದ್ದಾಗ ಹೊದಾಗ ಹೆಚ್ಚು ಅವಗಾಹನೆಗೆ ಬರುತ್ತದೆ,ಪರಿಚಯವಾದ ತರುವಾಯ ನಮ್ಮವರೇ ಎಂಬ ಮನೋಭಾವನೆ ನಮ್ಮಲ್ಲಿ ಮೂಡುತ್ತದೆ. ಎಂದೂ ಪರಿಚಯವಿರದವರು ಆಕಸ್ಮಿಕವಾಗಿ ಪರಿಚಿತರಾದಾಗ ಅವರೊಂದಿಗಿನ ಬಾಂಧವ್ಯ ಶಾಶ್ವತ, ಆರತಿ ಮಖರ್ಜಿಯವರ ಜೀವನದ ಅಂತ್ಯಕಾಲದಲ್ಲಿ ಪರಮಪೂಜ್ಯರ ಕನವರಿಕೆ ಶ್ರೀಗಳ ಮೇಲಿನ ನಿಷ್ಕಲ್ಮಶ ಭಕ್ತಿಯ ದ್ಯೋತಕವೇ ಸರಿ.
ಬಹುತೇಕ ಉತ್ತರ ಭಾರತೀಯರು ಚಿತಾಭಸ್ಮವನ್ನು ಪವಿತ್ರ ಗಂಗಾನದಿಯಲ್ಲಿ ವಿಸರ್ಜಿಸುವುದು ವಾಡಿಕೆ. ಆದರೆ ಆರತಿ ಮುಖರ್ಜಿರವರ ಅಸ್ತಿಯನ್ನು ಸಿರಿಗೆರೆಯ ಶಾಂತಿವನದ ಜಲಾಶಯದಲ್ಲಿ ಅರ್ಪಿಸಬೇಕೆಂಬ ಮೃತರ ಕುಟುಂಬ ಸದಸ್ಯರ ನಿರ್ಣಯ ನವ ಸಂಕಲ್ಪಕ್ಕೆ ನಾಂದಿಯಾಗಿದೆ. ಈ ಕೋರಿಕೆಗೆ ಪರಮಪೂಜ್ಯರ ಸಹಮತ ಸ್ತುತ್ಯರ್ಹ,
ಇವನಾರವ, ಇವನಾರವ,
ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ,
ಇವನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.
ಎಂಬ ಅಣ್ಣ ಬಸವಣ್ಣನವರ ವಚನ ಇಲ್ಲಿ ಪ್ರಸ್ತುತವೆನಿಸುವುದು.
ಪ್ರದೀಪ ಎಂ
ತೂಲಹಳ್ಳಿ, ಕೊಟ್ಟೂರು (ತಾ)