N-2710 

  02-11-2024 01:07 PM   

ಹರಪನಹಳ್ಳಿ ತಾ. : ಚಟ್ನಿಹಳ್ಳಿ ಕೆರೆ ವೀಕ್ಷಣೆ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮ

 ಜೈ ತರಳಬಾಳು ಜೈ ಆದುನಿಕ ಭಗೀರಥ dr ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಗಳು 🙏ರೈತರ ಕಣ್ಣಮಣಿ
ಸಿದ್ದೇಶ N
ಕರ್ನಾಟಕ

N-2710 

  02-11-2024 11:09 AM   

ಹರಪನಹಳ್ಳಿ ತಾ. : ಚಟ್ನಿಹಳ್ಳಿ ಕೆರೆ ವೀಕ್ಷಣೆ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮ

 Good program
Viswanathappa
Chatnihalli karnataka India

N-2709 

  01-11-2024 09:36 PM   

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತರಳಬಾಳು ನುಡಿಹಬ್ಬ - 2024 ಕಾರ್ಯಕ್ರಮದ ಆಹ್ವಾನ ಪತ್ರಿಕೆ

 ತುಂಬಾ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೀರಿ. ನಾಡು, ನುಡಿ ಮತ್ತು ಜಲದ ವಿಚಾರದಲ್ಲಿ ಮಠವು ಅತ್ಯುತ್ತಮ ಕೆಲಸ ಮಾಡುತ್ತಿದೆ.

ಈ ಕೆಲಸ ಹೀಗೇ ಮುಂದುವರೆಯಲಿ.
Chandrashekhar, T.S.
Harihara, Davangere

N-2709 

  01-11-2024 05:17 PM   

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತರಳಬಾಳು ನುಡಿಹಬ್ಬ - 2024 ಕಾರ್ಯಕ್ರಮದ ಆಹ್ವಾನ ಪತ್ರಿಕೆ

 ಶ್ರೀ ಮಠದ ಕಾರ್ಯಗಳು ಈ ನಾಡು ಹೆಮ್ಮೆ ಪಡಬೇಕಾದ ಸಂಗತಿ. ನಾಡಿನ ಹೃದಯ ಭಾಗದಲ್ಲಿ ಇರುವ ಶ್ರೀ ಮಠ ಬಸವ ತತ್ವದ ಜೀವಂತಿಕೆಯ ಸ್ವರೂಪ ಹೀಗಾಗಿಯೇ ಮಠ ಸಮಾಜಕ್ಕೆ ತನ್ನದೇ ಆದಂತಹ ದಾಸೋಹವನ್ನು ಮಾಡುತ್ತಾ ಜನ ಮನ್ನಣೆ ಪಡೆದುಕೊಂಡಿದೆ. ಈ ರೀತಿಯ ಕಾರ್ಯಗಳು ಇನ್ನೂ ಹೆಚ್ಚು ನಡೆಯಲಿ ಎಂದು ಆಶಿಸುತ್ತೇನೆ.
ಡಾ. ಪಾಪಯ್ಯ ಬಿ
Chitradurga

N-1472 

  01-11-2024 03:56 PM   

ಹಂಪಿಯಲ್ಲಿತ್ತು ಕರ್ನಾಟಕ ಸಾಮ್ರಾಜ್ಯ!

 ಪರಮಪೂಜ್ಯರ ಪಾದಾರವಿಂದ್ಯೆಗಳಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ ನಮಸ್ಕರಿಸಿ,
ಕರ್ನಾಟಕ ಆದದ್ದು ಪ್ರತಿ ವೇದಿಕೆ ಭಾಷಣ ಕಾರು ,ಕನ್ನಡದ ಕಟ್ಟಾ ಅಭಿಮಾನಿಗಳು ಎಂಬ ಸ್ವಯಂ ಕ್ರತವಾಗಿ ಘೋಶಿಸಿಕೊಂಡವರಾದಿಯಾಗಿ ಇತಿಹಾಸ ಅರಿಯರು ,ಕನ್ನಡಮ್ಮನ ಅಭಿಮಾನಿ ವಿದೇಶದಿಂದ ಬಂದು ಸಂಶೋಧನೆ ಸಹ ವಿರಳಾತಿ ವಿರಳ ಇರಬಹುದೇನೊ, ಗೊತ್ತಿಲ್ಲ ಬುದ್ದಿ. ಹಾಗೆಯೇ ಸರ್ಕಾರದ ಪ್ರಶಸ್ತಿಗೆ ಹಿಂದೆ ಬೀಳುವ ಪ್ರವ್ರತ್ತಿ ಪ್ರಸ್ತುತವಾಗಿ ಅದೊಂದು ಹಿರಿಮೆ ಗರಿಮೆ ಎನಿಸಿದೆ .ತಮ್ಮ ಆಶೀರ್ವಾದ ಹಿತನುಡಿ ಗಳು ಸಮಾಜದ ಸನ್ನಿವೇಶ ಅಚ್ಚೊತ್ತಿದ ಚಿತ್ರಣ ಕನ್ನಡಿಯಲ್ಲಿ ನಿಮ್ಮಗಳ ಬಿಂಬವು ನೋಡಿಕೊಳ್ಳುವಂತೆ ಇವೆ .
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2696 

  01-11-2024 02:29 PM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 Best wishesTaralubalu hummime fuction
K Thippeswamy
Manangi

N-2709 

  01-11-2024 02:26 PM   

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತರಳಬಾಳು ನುಡಿಹಬ್ಬ - 2024 ಕಾರ್ಯಕ್ರಮದ ಆಹ್ವಾನ ಪತ್ರಿಕೆ

 Really good arrange function sir, and you will be arrange next as , Anubhav Mantap, model in sirigere mat and a please arrange to invite to Adunika vachanakarara literature poets sir,I am also written nearly 1000 Adunika vachanagalu ,by swamyji support will be available me definitely I will publish for publics at large please help me swamyji
H.M.Karibadaiah
Jagalur ward no 1 jiddikere extension Davangere district India

N-2708 

  01-11-2024 11:43 AM   

ದೀಪಾವಳಿಯೋ ಪಟಾಕಿಗಳ ಹಾವಳಿಯೋ?

 ಪೂಜ್ಯರ ಇಂದಿನ ಅಂಕಣವು ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ವೈಶಿಷ್ಟ್ಯಗಳನ್ನು ಒಳಗೊಂಡು ಉತ್ತಮ ಸಂದೇಶವನ್ನು ಅಭಿವ್ಯಕ್ತಿಸಿದೆ. Baa baa black sheep ಎಂಬ ಇಂಗ್ಲಿಷ್ ಭಾಷೆಯ ರೈಮ್ಸ್ ಹೇಳುವ ಮಕ್ಕಳು ಇಂಗ್ಲೀಷ್ ಕಲಿಯುವ ಅವಸರದಲ್ಲಿ ಕನ್ನಡ ಮರೆತು ಕುರಿಗಳಂತೆ ಆಗಬಾರದು ಎಂಬ ಕನ್ನಡಪರ ಕಳಕಳಿ ಈ ಅಂಕಣದಲ್ಲಿ ವಿಶೇಷವಾಗಿ ಪ್ರಸ್ತಾಪವಾಗಿದೆ. ವ್ಯಾವಹಾರಿಕವಾಗಿ ಯಾವ ಭಾಷೆ ಕಲಿತರೂ ತಪ್ಪಲ್ಲ. ಆದರೆ ಮಾತೃಭಾಷೆಯನ್ನು ಮಾತ್ರ ಮರೆಯದೇ ಬಳಸಬೇಕು ಎಂಬ ಸಂದೇಶ ಪರೋಕ್ಷವಾಗಿ ವ್ಯಕ್ತವಾಗಿದೆ.

ಹಾಗೆಯೇ ದೀಪಾವಳಿಯ ವೈಶಿಷ್ಟ್ಯವೇ ಬೆಳಕನ್ನು ಹರಿಸುವುದು ಎಂಬುದನ್ನು ಪೂಜ್ಯರು ಸಾಂದರ್ಭಿಕ ಉದಾಹರಣೆಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಬೆಳಕು ಚೆಲ್ಲಲು ದೀಪ ಹಚ್ಚಬೇಕು. ಆ ದೀಪವನ್ನು ಮಣ್ಣಿನಿಂದ ಮಾಡುವವನು ಕುಂಬಾರ. ಅದಕ್ಕೆ ಬೇಕಾದ ಎಣ್ಣೆಯನ್ನು ಗಾಣದ ಮೂಲಕ ತೆಗೆಯುವವನು ಗಾಣಿಗ. ದೀಪಕ್ಕೆ ಹಾಕುವ ಬತ್ತಿಯನ್ನು ಮಾಡಲು ಬಳಸುವ ಹತ್ತಿಯನ್ನು ಬೆಳೆಯುವವನು ರೈತ. ಬೆಂಕಿ ಕಡ್ಡಿ ತಯಾರು ಮಾಡುವವನು ಉದ್ಯಮಿ. ಆದರೆ ಇವನ್ನೆಲ್ಲ ಬಳಸಿ ದೀಪ ಹಚ್ಚುವ ಕೈಗಳು ಯಾವ ಜಾತಿಯವರಾದರೇನು? ಯಾವ ವರ್ಗದವರಾದರೇನು? ಆದರೆ ಆತ ದೀಪದಿಂದ ಚೆಲ್ಲುವ ಬೆಳಕು ಮಾತ್ರ ಯಾವ ಜಾತಿಯೂ ಅಲ್ಲ, ಧರ್ಮವೂ ಅಲ್ಲ. ಎಲ್ಲಾ ಜಾತಿ ಧರ್ಮದವರ ಕಾಯಕದ ಫಲವನ್ನು ತನ್ನೊಳಗೆ ಒಳಗೊಂಡು ಹೊರಹೊಮ್ಮುವ ಬೆಳಕು ಮಾತ್ರ ವಿಶ್ವಮಾನ್ಯವಾದುದು. ಬೆಳಕು ನಿರಂತರ. ದೀಪವು ಕಾಲಾನಂತರ ಸವೆದು ಹೋಗುತ್ತದೆ. ಬತ್ತಿಯು ಸುಟ್ಟು ಹೋಗುತ್ತದೆ. ದೀಪ ಉರಿದಂತೆ ಎಣ್ಣೆಯು ಕರಗಿ ಹೋಗುತ್ತದೆ. ಎಲ್ಲವೂ ಉಳಿದರೆ ಬೆಳಕು ಉಳಿಯುವುದು. ಬರೀ ದೀಪ ಮತ್ತು ಬತ್ತಿಯಿಂದ ಬೆಳಕು ಬರುವುದಿಲ್ಲ, ಎಣ್ಣೆ ಬೇಕೇ ಬೇಕು. ಬರೀ ದೀಪ ಮತ್ತು ಎಣ್ಣೆಯಿಂದ ಬೆಳಕು ಬರುವುದಿಲ್ಲ, ಅದಕ್ಕೆ ಬತ್ತಿ ಬೇಕೇ ಬೇಕು. ಬರೀ ಎಣ್ಣೆ ಮತ್ತು ಬತ್ತಿಯಿಂದ ಬೆಳಕು ಬರುವುದಿಲ್ಲ, ಅದಕ್ಕೆ ದೀಪ ಇರಲೇಬೇಕು. ಹೀಗೆ ವ್ಯವಸ್ಥೆಯೊಳಗೆ ಒಬ್ಬರನ್ನು ಬಿಟ್ಟು ಮತ್ತೊಬ್ಬರು ಬೆಳಕು ಹರಿಸಲು ಅಸಾಧ್ಯ. ಸಾಮರಸ್ಯ ಎಂಬುದು ಬಹಳ ಮುಖ್ಯ. ಅಂತಹ ಸಾಮರಸ್ಯವನ್ನು ಕದಡುವ ವ್ಯವಸ್ಥೆಯೊಳಗೆ ಇರುವ ಮತ್ಸರದ ರಾಯಭಾರಿಗಳಿಗೆ ಎಚ್ಚರಿಸುವ ತಮ್ಮ ಕವನವನ್ನು ಉಲ್ಲೇಖಿಸಿರುವ ಪೂಜ್ಯರಿಗೆ ಪ್ರಣಾಮಗಳು. ಇಂತಹ ಮತ್ಸರದ ರಾಯಭಾರಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಎಲ್ಲೆಲ್ಲಿ ಬೆಂಕಿ ಹಚ್ಚುತ್ತಾರೆ ಎಂಬುದು ಮಾತ್ರ ಸುಲಭವಾಗಿ ಅರ್ಥವಾಗುವುದಿಲ್ಲ. ವ್ಯವಸ್ಥೆಯೊಳಗೆ ಸಾಮರಸ್ಯ ಇರಲೇಬೇಕು ಎನ್ನುವುದಾದರೆ ಮತ್ಸರದ ರಾಯಭಾರಿಗಳ ಬೆನ್ನಿನ ಮೇಲೆ ಬಾರಿಸಬೇಕು. ತಮ್ಮ ಜೀವನ ಸುಸೂತ್ರವಾಗಿ ನಡೆಯಲಿ ಎಂಬ ಏಕೈಕ ಉದ್ದೇಶಕ್ಕಾಗಿ ಕೆಲವು ಸಮಸ್ಯೆಗಳನ್ನು ಜೀವಂತವಾಗಿ ಇಡುವ ಇಂತವರು ಮುಂದೊಮ್ಮೆ ಅನುಭವಿಸುವ ನರಕ ಊಹಿಸಲು ಅಸಾಧ್ಯ. ಇಂತವರು ಯಾರೊಂದಿಗೆ ಇರುತ್ತಾರೋ ಅವರಿಗೂ ಸಹ ವೇದನೆಗಳು ನಿರಂತರ.

ಇನ್ನು ದೀಪಾವಳಿಯಂದು ಸುಡುವ ಪಟಾಕಿಗಳ ಬಗ್ಗೆ ಅಂಕಣದಲ್ಲಿ ಸ್ವಾರಸ್ಯಕರವಾಗಿ ಪೂಜ್ಯರು ಉಲ್ಲೇಖ ಮಾಡಿದ್ದಾರೆ. ಪಟಾಕಿಗಳು ಈ ಪ್ರಪಂಚಕ್ಕೆ ಹೇಗೆ ಪರಿಚಿತವಾದವು ಎಂಬುದು ಈಗಲೂ ಸರಿಯಾಗಿ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಹಿಂದೂ ‌‌‌‌‌‌‌‌ಸಂಪ್ರದಾಯದ ಪ್ರಮುಖ ಹಬ್ಬವಾದ ದೀಪಾವಳಿಯ ದಿನ ಪಟಾಕಿಗಳನ್ನು ಏಕೆ ಸುಡುತ್ತಾರೆ ಎಂಬುದು ಇಂದಿಗೂ ಅಸ್ಪಷ್ಟ. ಆದರೆ ಈ ಪಟಾಕಿಗಳನ್ನು ಸುಡುವಾಗ ಮೂಡುವ ಬಣ್ಣಬಣ್ಣದ ಚಿತ್ತಾರಗಳು ಮತ್ತು ಬೆಳಕು ಮನಸ್ಸಿನೊಳಗೆ ಉಲ್ಲಾಸ ಮೂಡಿಸುತ್ತವೆ. ಆ ಕ್ಷಣಕ್ಕೆ ಮನಸ್ಸಿನ ಒಳಗೆ ಆವರಿಸಿರುವ ದುಗುಡ ಸ್ವಲ್ಪ ಹೊತ್ತಾದರೂ ಮಾಯವಾಗುತ್ತದೆ. ಪಟಾಕಿಗಳು ಸೃಷ್ಟಿಸುವ ಬೆಳಕು ಮನಸ್ಸನ್ನು ಅರಳಿಸುತ್ತದೆ. ಹಿಂದೂ ಸಂಪ್ರದಾಯದ ಈ ಆಚರಣೆ ಧನಾತ್ಮಕವಾಗಿ ಉತ್ತಮ ಸಂದೇಶವನ್ನು ಸಾರುತ್ತದೆ ಎಂಬುದನ್ನು ತುಂಬಾ ಚೆನ್ನಾಗಿ ಪೂಜ್ಯರು ಈ ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ.

ದೀಪಾವಳಿ ಎಂದಾಕ್ಷಣ ನೆನಪಾಗುವುದು ಅಲ್ಲಮ ಪ್ರಭು ದೇವರ ಈ ವಚನ:

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು
ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ !
ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ ?
ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು ಬದುಕಿದೆನು ಕಾಣಾ ಸಿದ್ಧರಾಮಯ್ಯಾ.

ಬಸವಣ್ಣನೆಂಬ ಜ್ಯೋತಿ ಮನೆಗಳನ್ನು ಮನಗಳನ್ನು ಬೆಳಗಲಿ.

ಶರಣು ಶರಣಾರ್ಥಿಗಳು. 🙏🙏
ಪ್ರಸನ್ನ ಯು.
ಸಿರಿಗೆರೆ

N-2709 

  01-11-2024 11:10 AM   

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತರಳಬಾಳು ನುಡಿಹಬ್ಬ - 2024 ಕಾರ್ಯಕ್ರಮದ ಆಹ್ವಾನ ಪತ್ರಿಕೆ

 ತರಳಬಾಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಳಿ ಸಂತೋಷ ತಂದಿದೆ
Sareena A
Chitradurga

N-2709 

  01-11-2024 09:31 AM   

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತರಳಬಾಳು ನುಡಿಹಬ್ಬ - 2024 ಕಾರ್ಯಕ್ರಮದ ಆಹ್ವಾನ ಪತ್ರಿಕೆ

 ಸಿರಿಗೆರೆ ತರಳಬಾಳು ಬೃಹನ್ಮಠದಲ್ಲಿ ನೆಡೆಯುವ ಪ್ರತಿಯೊಂದು ಕಾರ್ಯಕ್ರಮವೂ ನಿಜಕ್ಕೂ ಅದ್ಭುತ. ತುಂಬಾ ಶಿಸ್ತು ಸಂಯಮದಿಂದ ನಡೆಯುತ್ತವೆ. ಇಲ್ಲಿ ಭಾಗವಹಿಸುವುದೇ ಒಂದು ಸುದೈವ
H S T SWAMY ಚಿತ್ರದುರ್ಗ
ಚಿತ್ರದುರ್ಗ ಕರ್ನಾಟಕ ಭಾರತ

N-2708 

  31-10-2024 09:18 PM   

ದೀಪಾವಳಿಯೋ ಪಟಾಕಿಗಳ ಹಾವಳಿಯೋ?

 ಸರಿಯಾದ ಸ್ಪಷ್ಟತೆಯಲ್ಲದೆ, ನೀವು ಯಾವುದೇ ಕೆಲಸವನ್ನು ಮಾಡಿದರೂ ಸಹ ಅದು ಅನಾಹುತಕ್ಕೆ ಕಾರಣವಾಗುತ್ತದೆ. ಬೆಳಕು ನಿಮ್ಮ ದೃಷ್ಟಿಗೆ ಸ್ಪಷ್ಟತೆಯನ್ನು ತರುತ್ತದೆ - ಇದು ಕೇವಲ ಭೌತಿಕ ಅರ್ಥದಲ್ಲಷ್ಟೇ ಅಲ್ಲ. ನಿಮ್ಮ ಜೀವನವನ್ನು ನೀವು ಎಷ್ಟು ವಿವೇಚನಾಯುಕ್ತವಾಗಿ ನಡೆಸುವಿರಿ ಎಂಬುದು ನೀವು ಜೀವನವನ್ನು ಎಷ್ಟು ಸ್ಪಷ್ಟವಾಗಿ ನೋಡುತ್ತೀರಿ ಮತ್ತು ನಿಮ್ಮ ಸುತ್ತಲಿನ ಎಲ್ಲವನ್ನೂ ಎಷ್ಟರ ಮಟ್ಟಿಗೆ ಗ್ರಹಿಸುತ್ತೀರಿ ಎಂಬದರ ಮೇಲೆ ಅವಲಂಬಿತವಾಗಿರುತ್ತದೆ. ದೀಪಾವಳಿ ಎಂದರೆ ಕರಾಳ ಶಕ್ತಿಗಳನ್ನು ನಾಶಮಾಡಿ ಬೆಳಕನ್ನು ತಂದ ದಿನ. ಇಂತಹ ಕರಾಳ ಶಕ್ತಿಗಳಲ್ಲಿ ಮಾನವ ಜೀವನದ ಸಂಕಟವೂ ಒಂದಾಗಿದೆ. ಕಾರ್ಮೋಡಗಳು ತಾವೇ ಸೂರ್ಯನನ್ನು ಅಡ್ಡಹಾಕಿರುವುದನ್ನು ಅರಿತುಕೊಳ್ಳದೆ, ಕತ್ತಲೆಯ ವಾತಾವರಣದಲ್ಲಿ ಸಂಚರಿಸುವಂತೆ, ಮನುಷ್ಯರು ಕೂಡಾ. ನೀವು ಬೇರೆಡೆಯಿಂದ ಯಾವುದೇ ಬೆಳಕನ್ನು ತರಬೇಕಾಗಿಲ್ಲ. ಬದಲಾಗಿ ನಿಮ್ಮೊಳಗೆ ಸಂಗ್ರಹಿಸಿಟ್ಟರುವ ಕಾರ್ಮೋಡಗಳನ್ನು ಹೊರಹಾಕಿದರೆ, ಬೆಳಕು ತಾನಾಗಿಯೇ ಸಂಭವಿಸುತ್ತದೆ. ದೀಪಗಳಿಂದ ತುಂಬಿರುವ ಈ ಹಬ್ಬವು ಇದರ ನೆನಪಾಗಿದೆ.
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ .ಚನ್ನಗಿರಿ ತಾಲ್ಲೂಕು..

N-2708 

  31-10-2024 09:01 PM   

ದೀಪಾವಳಿಯೋ ಪಟಾಕಿಗಳ ಹಾವಳಿಯೋ?

 ..Very beautiful vachana ....... ಈಗಲೂ ನಮ್ಮ ಜೀವನದಲ್ಲಿ ಬತ್ತಿ ಇಡುವ ಜನರಿದ್ದಾರೆ ಬತ್ತಿಯನ್ನು ಇಟ್ಟವರು ಯುಕ್ತಿ ನಮಗೆ ಗೊತ್ತಿರುತ್ತದೆ ಆದರೆ ಏನು ಮಾಡುವ ಪರಿಸ್ಥಿತಿ ಇರುವುದಿಲ್ಲ
Sudha gp
Sirigeri

N-2708 

  31-10-2024 01:06 PM   

ದೀಪಾವಳಿಯೋ ಪಟಾಕಿಗಳ ಹಾವಳಿಯೋ?

 Very beautifully explained about Deepavali festival.
Shivadeepa G M Bathi
Davangere, karnataka DVG

N-2708 

  31-10-2024 12:35 PM   

ದೀಪಾವಳಿಯೋ ಪಟಾಕಿಗಳ ಹಾವಳಿಯೋ?

 ಪೂಜ್ಯ ಶ್ರೀ ಗುರುಗಳ ಪಾದಕಮಲಗಳಲ್ಲಿ ಪಣವಿಟ್ಟು ನಮಸ್ಕರಿಸುತ್ತಾ
ನಾಡಿನಾದ್ಯಂತ ಬೆಳಕಿನ ಹಬ್ಬದ ಸಂಭ್ರಮ ಬೆಳಗುತ್ತಿದೆ
ದೇಶದೆಲ್ಲೆಡೆ ದೀಪಗಳಿಂದ ರಾತ್ರಿ ನಕ್ಷತ್ರದಂತೆ ಭೂಮಿ ಕಾಣಿಸುತ್ತದೆ.
ಪಟಾಕಿಸದ್ದು ಕಿವಿಗೆ ಎರಚುತ್ತಿದೆ
ವಿದೇಶಗಳಲ್ಲಿ ಭಾರತೀಯರ ದೀಪಾಲಂಕಾರ ರಾರಾಜಿಸುತ್ತಿದೆ
ಏತ ನೀರಾವರಿ ಇಂದ ಕೆರೆಗಳು ತುಂಬಿ ಕಂಗೋಳಿಸುತ್ತಾ ಭಕ್ತರಲ್ಲಿ ಹರ್ಷ ಬಂದಿದೆ.

ಯದಿರು ಸತ್ತಂತಿಹ ಪಟಾಕಿಗಳಿದ್ದೆಡೆಯಲ್ಲಿ
ಸಿಡಿಯುವುದು ಜೋಕೆ ನಿನ್ನ ಕಣ್ಣಾಲಿ!
ಮತ್ತೆಂದೂ ಕಾಣಲಾರೆ ಮುಂದಿನ ದೀಪಾವಳಿ!
ಪೂಜ್ಯರ ಈ ಪಾಲನೆ ಅವಶ್ಯವಾಗಿದೆ
ಜೈತರಳಬಾಳು ಶ್ರೀ🙏🙏🙏🚩🚩🚩
ಮಹೇಶ್ BR
ಸೂಗೂರು ಶಿವಮೊಗ್ಗ ತಾ

N-2708 

  31-10-2024 12:28 PM   

ದೀಪಾವಳಿಯೋ ಪಟಾಕಿಗಳ ಹಾವಳಿಯೋ?

 "ಹತ್ತಿ ಉರಿಯುತಿದೆ ಸುತ್ತಲೂ
ಮತ್ಸರದ ಸುರುಸುರು ಬತ್ತಿ.."
ಬಸವಾದಿ ಶಿವಶರಣರು 12ನೇ ಶತಮಾನದಲ್ಲಿ ಅಂದಿನ ಸಮಾಜದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ಕಂಡು ಮತ್ತು ತಾವು ಕೂಡ ಅನುಭವಿಸಿದ ಸತ್ಯ ಸಂಗತಿಗಳನ್ನು ವಚನ ರೂಪದಲ್ಲಿ ಕೊಟ್ಟಿದ್ದರು .
ಅದೇ ರೀತಿ ಪರಮಪೂಜ್ಯರು 21ನೇ ಶತಮಾನದಲ್ಲಿ ಕಂಡ ಹಾಗೂ ಅನುಭವಿಸಿದ ಕಟು ಸತ್ಯವನ್ನು ವಚನ ರೂಪದಲ್ಲಿ ನಮ್ಮ ಮುಂದೆ ಇಟ್ಟಿದ್ದಾರೆ.

"ಮತ್ಸರದ ಸುರುಸುರು ಬತ್ತಿ.." ಬಿಸಿ ಇಂದು ಜಗತ್ತನ್ನೇ ತಲ್ಲಣ ಗೊಳಿಸಿದೆ, ಪರಮಪೂಜ್ಯರ ಮಾತಿನಿಂದ ಎಚ್ಚರಗೊಳ್ಳದಿದ್ದರೆ - "ಸುಳಿಯದಿರು ಸತ್ತಂತಿಹ ಪಟಾಕಿಗಳಿದ್ದೆಡೆಯಲ್ಲಿ 
ಸಿಡಿಯುವುದು ಜೋಕೆ ನಿನ್ನ ಕಣ್ಣಾಲಿ!
ಮತ್ತೆಂದೂ ಕಾಣಲಾರೆ ಮುಂದಿನ ದೀಪಾವಳಿ!"

ಪೂಜ್ಯರ ಈ ವಚನವನ್ನು ಇತ್ತೀಚಿಗೆ ನಡೆದ ಹಿರಿಯ ಜಗದ್ಗುರುಗಳ ಶ್ರದ್ಧಾಂಜಲಿ ಸಮಯದಲ್ಲಿ, ಒಬ್ಬ ಗಾಯಕರು ಕಂಚಿನ ಕಂಠದಲ್ಲಿ ಮನಮುಟ್ಟುವಂತೆ ಹಾಡಿದ್ದರು, ಆ ಧ್ವನಿ ಮುದ್ರಿಕೆ ಸಿಗಬಹುದೇ. ಆಗಾಗ ಪರಮಪೂಜ್ಯರು ಸಮಾಜಕ್ಕೆ ಕೊಟ್ಟಿರುವ ಈ ಸಂದೇಶ ಕಿವಿ ಮೇಲೆ ಬಿದ್ದಾಗ, ನಮ್ಮಗಳ ಒಳ ಮನಸ್ಸು ಎಚ್ಚೆತ್ತು- ಹಣತೆಯಂತೆ ಬೆಳಗುವ ದೀಪವಾಗಬಹುದಲ್ಲವೇ!

Dr. KP. Basavaraj
Banglore

N-2708 

  31-10-2024 10:36 AM   

ದೀಪಾವಳಿಯೋ ಪಟಾಕಿಗಳ ಹಾವಳಿಯೋ?

 ಎಲ್ಲಾ ಅಸುರರ ಸುರ್ ಸುರ್ ಬತ್ತಿಗಳು ನಮ್ಮೂಳಗಿನ ಬುತ್ತಿ ಹಾಗೂ ಕೆಟ್ಟ ಭಾವನೆ ಗಳು ಸ್ಥುತಿಯ ಸ್ಥಿತಿಯಲ್ಲಿ ನಮ್ಮನಸಿನ ಭದ್ರನೆಲೆ.ಇದನ್ನು ಬದಲಾವಣೆ ತರಲು ನಮ್ಮಿಂದಲೇ ಸಾಧ್ಯ ಮನೋಭಾವ,ಮನೋಭಿಲಾಷೆಗಳ ಬದಲಾವಣೆ ತರಲು ಗುರುವಿನ ಗರಡಿಯಲ್ಲಿ ಮನ ಕಸರತ್ತಾದರೆ ಸಾಧ್ಯ.ಮನೆ,ಮನಗಳ `why` ದಾಟಗಳ ದಾಟಿದ ನಮ್ಮ ಸದ್ಧರ್ಮ ಮನವಾಗಬೇಕು...ಮನೆ, ಮನೆಗಳಿಗೆ ಕಿಚ್ಚು ಹಚ್ಚುವುದ ಬಿಟ್ಟು ಬೆಳಗಿಸೋಣ ಎನ್ನುವ ಸಂಕಲ್ಪದ ಬೆಳಕು ಮನಗಳಲಿ ಮೂಡಲಿ.
ಪ್ರಣಾಮಗಳೂಂದಿಗೆ.
ಸಿದ್ದಲಿಂಗ ಮೂರ್ತಿ ಸಿರಿಗೆರೆ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2708 

  31-10-2024 10:21 AM   

ದೀಪಾವಳಿಯೋ ಪಟಾಕಿಗಳ ಹಾವಳಿಯೋ?

 ಎಲ್ಲಾ ಅಸುರರ ಸುರ್ ಸುರ್ ಬತ್ತಿಗಳು ನಮ್ಮೂಳಗಿನ ಬುತ್ತಿ ಹಾಗೂಕೆಟ್ಟ ಸ್ಥುತಿಯ ಸ್ಥಿತಿಯಲ್ಲಿ ನಮ್ಮನಸಿನ ಭದ್ರನೆಲೆ.ಇದನ್ನು ಬದಲಾವಣೆ ತರಲು ನಮ್ಮಿಂದಲೇ ಸಾಧ್ಯ ಮನೋಭಾವ,ಮನೋಭಿಲಾಷೆಗಳ ಬದಲಾವಣೆ ತರಲು ಗುರುವಿನ ಗರಡಿಯಲ್ಲಿ ಮನ ಕಸರತ್ತಾದರೆ ಸಾಧ್ಯ.ಮನೆ,ಮನಗಳ `why` ದಾಟಗಳ ದಾಟಿದ ನಮ್ಮ ಸದ್ಧರ್ಮ ಮನವಾಗಬೇಕು...ಮನೆ, ಮನೆಗಳಿಗೆ ಕಿಚ್ಚು ಹಚ್ಚುವುದ ಬಿಟ್ಟು ಬೆಳಗಿಸೋಣ ಎನ್ನುವ ಸಂಕಲ್ಪದ ಬೆಳಕು ಮನಗಳಲಿ ಮೂಡಲಿ.
ಪ್ರಣಾಮಗಳೂಂದಿಗೆ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2708 

  31-10-2024 09:28 AM   

ದೀಪಾವಳಿಯೋ ಪಟಾಕಿಗಳ ಹಾವಳಿಯೋ?

 ಪರಮಪೂಜ್ಯರ ಪಾದಾರವಿಂದಗಳಿಗೆ ದೀಪಾವಳಿ ಹಬ್ಬದಂದು ನಮ್ರತೆಯಿಂದ ನಮಸ್ಕರಿಸುತ್ತಾ,

ದೀಪಾವಳಿಯ ಹಬ್ಬದ ಆಚರಣೆ ಭಕ್ತರಲ್ಲಿ ಹೃದಯದಲ್ಲಿ, ಮನೊಭಾವನೆಯಲ್ಲಿಯ ವಾಸ್ತವಾಂಶ ಹಲವು ಅಂತರಾಷ್ಟ್ರೀಯ ಜನರುಗಳಲ್ಲಿರುವ ಅಭಿಪ್ರಾಯ ಆಶೀರ್ವಾದ ಮೂಲಕ, ಅಲ್ಲದೆ ಸ್ವರಚಿತ ಕವನದ ಮೂಲಕ ಉಣಬಡಿಸಿರುವುದು ಅರಿತು ಇಂದು ನಾಳೆಯ ಹಬ್ಬದ ಆಚರಣೆಗೆ ಮುಂದಾಗೋಣಲ್ಲದೆ, ಪಟಾಕಿ ಸಿಡಿಸುವಿಕೆಯನ್ನು ಮನೋ ಖುಷಿಗಾಗಿ ಸಿಡಿಸದೆ ಇಂದಿನ ಯುವ ಸಮೂಹವು ಪ್ರತಿಷ್ಠಿತೆಗೆ ಸಿರಿವಂತಿಕೆಯ ಪ್ರತೀಕವೆಂದು ಭಾವಿಸಿದಂತೆ ನೋಡುಗರು ಅಂದುಕೊಳ್ಳುವುದುಂಟು. ನಾನು ಕಂಡಂತೆ, ಕೆಲ ಪ್ರಾಂತಕ್ಕೆ ಸೀಮಿತವಾಗಿ ಶವ ಸಂಸ್ಕಾರಕ್ಕೆ , ಶವವನ್ನು ಕೊಂಡೊಯ್ಯುವಾಗ ಕಿವಿಯ ಕರ್ಣಪಟಲ ಹರಿಯುವ ಶಬ್ದದ ಆಡಂಬರ ಪಟಾಕಿ ಸಿಡಿಸುವುದರಲ್ಲಿ ದುಃಖ ಬದಿಗೆ ಸರಿದಿರುತ್ತದೆ. ಒಣ ಶ್ರೀಮಂತಿಕೆ ಸಾಕ್ಷೀಕರಿಸುವತ್ತ ಸಮೂಹ ವಾಲಿದೆ. ತಮ್ಮ ಆಶೀರ್ವಾದ ಮೂಲಕ ಭಕ್ತಾದಿಗಳಿಗೆ ಸಂದರ್ಭೋಚಿತವಾಗಿ ಹೋಗಲಾಡಿಸುವ ತಿಳಿವಳಿಕೆಯತ್ತ ನೀಡುವಂತಾಗಲೆಂದು ನಮ್ರತೆಯ ಕೋರಿಕೆಯನ್ನು ಪಾದ ಕಮಲಗಳಿಗೆ ಅರ್ಪಿಸುವೆನು.
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2698 

  28-10-2024 07:22 PM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 ಪರಮಪೂಜ್ಯ ಶ್ರೀ ಗುರುಗಳವರು ಈ ಸಲದ ಅಂಕಣದಲ್ಲಿ ಮಧ್ಯೆ ಕರ್ನಾಟಕದ ಏತ ನೀರಾವರಿ ಯೋಜನೆಯ ಯಶಸ್ಸನ್ನು ತಿಳಿಸುತ್ತಾ ಜಾಣ ಕಳ್ಳನ ನಾಟಕದಲ್ಲಿ ಅವನ ಚಾಕಚಕ್ಯತೆ ಹಾಗೂ ರಾಜನ ಆತ್ಮ ನಿರೀಕ್ಷಣೆ ಅದ್ಭುತವಾಗಿದೆ. ಎಲ್ಲ ಕಾಲದಲ್ಲೂ ಬಡತನಕ್ಕೆ ಒಂದು ಗಡಿಯುಂಟು ಆದರೆ ಶ್ರೀಮಂತಿಕೆಗೆ ಯಾವ ಗಡಿಯೂ ಇರಲಾರದು. ಈಗಿನ ರಾಜಕಾರಣಿಗಳಿಗೆ ರಾಜ ಪದವಿಯ ಸ್ಪರ್ಧೆ ಇಟ್ಟು ಅಭ್ಯರ್ಥಿಯ ಅರ್ಹತೆ ಅವರು ವೇತನ ಬಿಟ್ಟು ಬೇರೆ ಯಾವ ರೀತಿಯ ಹಣವನ್ನೂ ತಮ್ಮ ಸ್ವಂತಕ್ಕೆ ಬಳಸಿರಬಾರದು ಅಂಥವರು ಸ್ಪರ್ಧಿಸಿ ಎಂದು ಪ್ರಕಟಿಸಿದರೆ ಬೆರಳೆಣಿಕೆಯಷ್ಟು ಅಭ್ಯರ್ಥಿಗಳು ಸಿಗಬಹುದು..

ದೇಶ ವಿದೇಶಗಳ ಭಾಷೆಗಳು ಮೇಲ್ನೋಟಕ್ಕೆ ಬೇರೆಯಾಗಿ ಕಂಡರೂ ಅವುಗಳ ಬೇರು ಭಾರತೀಯ ಭಾಷೆಗಳಲ್ಲಿ ಬೆಸೆದುಕೊಂಡಿದೆ. ಪಂಚಭೂತಗಳಿಂದ ಆದ ಮಾನವನ ದೇಹದ ಪ್ರಾಣ ಅಥವಾ ವಾಯುವನ್ನು ಬಳಸಿ ಉಚ್ಚರಿಸುವ ಭಾಷೆಗಳು ಅವನು ವಾಸಿಸುವ ಪ್ರಾಂತ್ಯ ಹಾಗೂ ಸಮಾಜದ ಜೊತೆ ಗಾಢವಾದ ಬೆಸುಗೆ ಇರುತ್ತದೆ. ಪ್ರಾದೇಶಿಕ ಭಾಷೆಗಳ ಬಳಕೆ ಹಾಗೂ ಬೆಳವಣಿಗೆಗೆ ಹೆಚ್ಚು ಪ್ರಾಶಸ್ತ್ಯ ಸಿಗಲೆಂದು ಆಶಿಸುತ್ತೇನೆ.
Shiva Kumar K M
Bangalore

N-2693 

  26-10-2024 04:08 PM   

ತರಳಬಾಳು ಜಗದ್ಗುರುಗಳವರಿಂದ ಇಂದು ಜಗಳೂರು ಹಾಗೂ ಭರಮಸಾಗರ ಕೆರೆ ವೀಕ್ಷಣೆ

 ನಮ್ಮ ಶ್ರೀಗಳು ನಮ್ಮ Hemme
Jnanamurthy
Karnataka