N-2705 
  23-10-2024 08:23 AM   
ದೈವ ಕೃಪೆ ಮತ್ತು ಮಾನವ ಪ್ರಯತ್ನದಿಂದ ಗಂಗಾವತರಣ : ಶ್ರೀ ತರಳಬಾಳು ಜಗದ್ಗುರುಗಳವರು
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,
ಏಡಿಸಿ ಕಾಡಿತ್ತು ಶಿವನ ಡಂಗುರ,
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ,
ಮಾಡಿದೆನೆಂಬುದು ಮನದಲಿಲದಿದ್ದಡೆ,
ಬೇಡಿತ್ತನೀವನು ಕೂಡಲಸಂಗಮದೇವ.
ಮೇಲಿನ ವಚನದಂತೆ,ಕೆರೆಗಳಿಗೆ ನೀರು ತರುವುದರ ಹಿಂದೆ ತಮ್ಮದೇ ಪ್ರಯತ್ನ ಇದ್ದರೂ,ಗುರುಗಳು ದೈವದ ಮೇಲೆ ಹಾಕಿದ್ದಾರೆ.ದೈವ ಕೃಪೆಯಿಂದ ಆಗಿದೆ ಎಂದು ಹೇಳಿದ್ದಾರೆ.
ಮಾಡುವ ಕೆಲಸದಲ್ಲಿ ಮಾನವನ ಪ್ರಯತ್ನ 99% ಇಟ್ಟುಕೊಂಡು 1% ಅನ್ನು ದೈವ ಕೃಪೆಗೆ ಬಿಡಬೇಕು. ಅಂದರೆ ಮಾಡುವ ಕೆಲಸದಲ್ಲಿ ನಾವು ಮುಂದೆ ಇದ್ದರೆ ದೈವವನ್ನು ಹಿಂದೆ ಇಟ್ಟುಕೊಂಡು ಮುನ್ನುಗ್ಗಬೇಕು.ಆಗ ದೈವ ಹಿಂದಿನಿಂದ ಸಹಾಯ ಮಾಡುತ್ತದೆ.
ಆದರೆ ಈಗಿನ ಜನರು ದೈವದಮೇಲೆಯೇ 99% ಭಾರ ಹಾಕಿ 1% ಪ್ರಯತ್ನ ಮಾಡುತ್ತಾರೆ.ಅಂದರೆ ದೈವವನ್ನೇ ಮುಂದೆ ಬಿಟ್ಟು ತಾವು ಹಿಂದಿನಿಂದ ಪ್ರಯತ್ನ ಮಾಡುತ್ತಾರೆ.ಅಂತವರ ಕೆಲಸ ಆಗಲ್ಲ.ಆಗ ದೈವವನ್ನು ದೂರುತ್ತಾರೆ.
ಆದರೆ ಇಲ್ಲಿ ಗುರುಗಳು ಆಸಕ್ತಿ ವಹಿಸಿ ಕೆಲಸ ಆಗುವ ಹಾಗೆ ನೋಡಿಕೊಂಡಿದ್ದರೂ ಎಲ್ಲವನ್ನೂ ದೈವ ಕೃಪೆ ಎಂದು ಹೇಳಿದ್ದಾರೆ.ಇದು ಗುರುಗಳ ದೊಡ್ಡ ಗುಣ.🙏
ಮಲ್ಲಿಕಾರ್ಜುನ.
India