ಉತ್ತಂಗಿ ಜಮೀನು ಕಬಳಿಸಲು ವಿಫಲ ಪ್ರಯತ್ನ!!! ನ್ಯಾಯಾಲಯದಲ್ಲಿ ಡಾ. ಎಸ್ ಸಿದ್ದಯ್ಯ ಸಲ್ಲಿಸಿದ್ದ ಅರ್ಜಿ ವಜಾ
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಉತ್ತಂಗಿ ಗ್ರಾಮದ ರೇವಣ್ಣಗೌಡ ತಂದೆ ಬೆಟ್ಟನಗೌಡ ಹಾಗೂ ಇವರ ಧರ್ಮಪತ್ನಿ ಶ್ರೀಮತಿ ಕೊಟ್ರಮ್ಮಳಿಗೆ ಸಂತಾನ ಭಾಗ್ಯವಿರಲಿಲ್ಲ. ಈ ದಂಪತಿಗಳಿಗೆ ಉತ್ತಂಗಿ ಗ್ರಾಮದಲ್ಲಿ ಸುಮಾರು 15 ಎಕರೆ ಜಮೀನು ಹಾಗೂ ಎರಡು ವಾಸದ ಮನೆಗಳಿದ್ದವು. ರೇವಣ್ಣಗೌಡರ ಮರಣಾನಂತರ, ಕೊಟ್ರಮ್ಮ 2012 ನೇ ಇಸ್ವಿಯಲ್ಲಿ ಈ 15 ಎಕರೆ ಜಮೀನನ್ನು ನಮ್ಮ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಮಾರಾಟ ಮಾಡಿರುತ್ತಾಳೆ. ಅಲ್ಲದೆ ಎರಡು ವಾಸದ ಮನೆಗಳನ್ನು ಮಠಕ್ಕೆ ದಾನವಾಗಿ ಕೊಟ್ಟಿರುತ್ತಾಳೆ.
ಈ ಜಮೀನು ಮತ್ತು ಮನೆಗಳನ್ನು ನಮ್ಮ ಮಠದ ಇತಿಹಾಸದಲ್ಲಿ ಪ್ರಸಿದ್ಧವಾದ ಉತ್ತಂಗಿಯಲ್ಲಿ ಈಗಿನ ಜಗದ್ಗುರುಗಳವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತಮ್ಮ ಗುರುಪಿತಾಮಹರಾದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರ ಹೆಸರಿನಲ್ಲಿ ಸ್ಥಾಪಿಸಿರುವ ಶಾಲೆಯ ಉಪಯೋಗಕ್ಕಾಗಿ ದಿವಂಗತೆ ಕೊಟ್ರಮ್ಮ ಅತ್ಯಂತ ಶ್ರದ್ಧಾ ಭಕ್ತಿಯಿಂದ ಕೊಟ್ಟಿರುತ್ತಾಳೆ.
ಕೊಟ್ರಮ್ಮಳ ಮರಣಾನಂತರ, ಈಕೆಯ ತಂಗಿ ಮಕ್ಕಳು ಹೂವಿನಹಡಗಲಿ ಹಿರಿಯ ಶ್ರೇಣಿ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಕೊಟ್ರಮ್ಮಳಿಗೆ ಸೇರಿದ್ದ 15 ಎಕರೆ ಜಮೀನು ಹಾಗೂ ಎರಡು ಮನೆಗಳು ತಮಗೆ ಸೇರಬೇಕೆಂದು 2019 ರಲ್ಲಿ ದಾವೆ ಹೂಡಿದ್ದರು.
ಆ ಸಮಯದಲ್ಲಿ ಡಾ. ಎಸ್ ಸಿದ್ದಯ್ಯನು ಮಠದ ಕಾರ್ಯದರ್ಶಿಯಾಗಿದ್ದನು. ಇತ್ತೀಚೆಗೆ ಮಠದ ಕಾರ್ಯದರ್ಶಿ ಸ್ಥಾನದಿಂದ ತೆಗೆದು ಹಾಕಿದ ಮೇಲೆ ದಿವಂಗತೆ ಕೊಟ್ರಮ್ಮಳಿಂದ ಈ 15 ಎಕರೆ ಜಮೀನನ್ನು ತಾನು ಖರೀದಿಸಿದ್ದೆನೆಂದೂ ಮತ್ತು ಎರಡು ಮನೆಗಳನ್ನು ದಾನವಾಗಿ ಪಡೆದಿದ್ದೆನೆಂದೂ, ಇದಾವುದೂ ಮಠಕ್ಕೆ ಸೇರಿದ ಆಸ್ತಿಗಳಲ್ಲ ತನಗೆ ಸೇರಿದ್ದೆಂದು ಡಾ. ಸಿದ್ದಯ್ಯನು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದನು.
ನ್ಯಾಯಾಲಯವು ಸುದೀರ್ಘ ವಿಚಾರಣೆ ನಡೆಸಿ ಡಾ. ಸಿದ್ದಯ್ಯನು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನಿನ್ನೆ ದಿನಾಂಕ 31-8-2024 ರಂದು ವಜಾಗೊಳಿಸಿರುತ್ತದೆ.
ಕಾರ್ಯದರ್ಶಿ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ