ಕೊಟ್ಟೂರು ತಾಲೂಕು 22 ಕೆರೆಗಳ ತುಂಬಿಸುವ ಯೋಜನೆಗೆ ಶ್ರೀ ತರಳಬಾಳು ಜಗದ್ಗುರುಗಳವರ ಸಂಕಲ್ಪ

  •  
  •  
  •  
  •  
  •    Views  

ಮುಂದಿನ ತರಳಬಾಳು ಹುಣ್ಣಿಮೆಗೆ ಗಂಗಾವತರಣ ವಾಗಲಿ : ತರಳಬಾಳು ಶ್ರೀ ಜಗದ್ಗುರುಗಳವರು

ಕೊಟ್ಟೂರು : ಕೆರೆಗಳು ತುಂಬಿದರೆ ಸಂಪತ್ತು ವೃದ್ಧಿಯಾಗುತ್ತದೆ. ಈ ಮರ್ಮವನ್ನು ಸರ್ಕಾರ ಅರಿತುಕೊಂಡು ಕೂಡಲೇ ಕೊಟ್ಟೂರು ಕೆರೆ ಸೇರಿದಂತೆ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸುವ ಮೂಲಕ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು ಎಂದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ  ಮಹಾಸ್ವಾಮಿಗಳವರು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾನುವಾರ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕು  ಸಂಗಮೆಶ್ವರ ಗ್ರಾಮದಲ್ಲಿ ಸಂಗಮನಾಥ ಸ್ವಾಮಿ ನೂತನ ದೇವಸ್ಥಾನ ಉದ್ಭಾಟನೆ, ಕಳಸಾರೋಹಣ ಹಾಗೂ ಲಿಂಗಪ್ರತಿಷ್ಠಾಪನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು ಹಗರಿಬೊಮ್ಮನಹಳ್ಳಿ ಕ್ಷೇತ್ರದ 22 ಕೆರೆಗಳಿಗೆ ನೀರು. ತುಂಬಿಸುವ ಯೊಜನೆ ಜಾರಿಗೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಪಕ್ಷಾತೀತವಾಗಿ ಒತ್ತಡ ಹೇರಬೇಕು  ಸಲಹೆ ನೀಡಿದರು.

2023 ರಲ್ಲಿ ಕೂಟ್ಟೂರಿನಲ್ಲಿ ಜರುಗಲಿರುವ ತರಳ ಬಾಳು ಹುಣ್ಣಿಮೆ ಕಾರ್ಯಕ್ರಮಕ್ಕೂ ಮೊದಲು ಕೊಟ್ಟೂರು ಕೆರೆ ಸೇರಿದಂತೆ ಹಗರಿಬೊಮ್ಮನಹಳ್ಳಿ. ಕ್ಷೇತ್ರದ ಎಲ್ಲಾ ಕೆರೆಗಳಲ್ಲಿನೀರು ತುಂಬಿರಬೇಕು.ಯೋಜನೆಯ ಅನುಷ್ಠಾನಕ್ಕೆ ಎಲ್ಲಾ ಪಕ್ಷದವರು ಸಹಕರಿಸಿ. ಬೆಂಬಲಿಸಬೇಕೆಂದು ಪೂಜ್ಯರು ಕರೆ ನೀಡಿದರು.

ಬೆಂಗಳೂರಿನ  ತರಳಬಾಳು ಕೇಂದ್ರಕ್ಕೆ ಈ ಭಾಗದ ಶಾಸಕರು, ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರು ಆಗಮಿಸಿದರೆ, ಈ ಕೆರೆಗಳ ತುಂಬಿಸುವ ಯೋಜನೆಗೆ ಶೀಘ್ರ ಆನುದಾನ ಬಿಡುಗಡೆಗಾಗಿ ನೀರಾವರಿ ಅಧಿಕಾರಿ, ಸಚಿವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸೋಣವೆಂದರು.ಸಂಗಮೇಶ್ವರದ ಈ ಕಾರ್ಯಕ್ರಮದ ಬೃಹತ್ ಜನಸ್ತೋಮ ಮುಂದಿನ ತರಳುಬಾಳು ಹುಣ್ಣಿಮೆಯ ಪೂರ್ವಭಾವಿ ಕಾರ್ಯಕ್ರಮವಿದ್ದಂದೆ ಎಂದರು.

ಕೆರೆಗಳು ತುಂಬಿದರೆ ಸಂಪತ್ತು ವೃದ್ಧಿಯಾಗುತ್ತದೆ. ಈ ಮರ್ಮವನ್ನು ಸರ್ಕಾರ ಅರಿತುಕೊಂಡು ಕೂಡಲೇ ಕೊಟ್ಟೂರು ಕೆರೆ ಸೇರಿದಂತೆ 22 ಕರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸುವ ಮೂಲಕ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು. ಈ ಹಿಂದೆ ಜಗಳೂರನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಣೆಯ ವೇಳೆ ಭರಮಸಾಗರ, ಜಗಳೂರು ತಾಲೂಕು ಕೆರೆ ತುಂಬಿಸುವ ಯೋಜನೆ ಜಾರಿಗಾಗಿ ಸರ್ಕಾರವನ್ನು ಒತ್ತಾಯಿಸಿದೆ ಇದಕ್ಕೆ ಪೂರಕವಾಗಿ ಈ ಹಿಂದಿನ  ಮೂವರು ಮುಖ್ಯಮಂತ್ರಿಗಳು ಸ್ವಂದಿಸಿ ಅನುದಾನ  ದೊರಕಿಸಿಕೊಟ್ಟ ಕಾರಣಕ್ಕಾಗಿ ಈ ಬೃಹತ್ ಯೋಜನೆ ಈಗ ಜಾರಿಗೊಂಡಿದೆ. ಭರಮಸಾಗರ ಮತ್ತು ಜಗಳೂರು ತಾಲೂಕಿನ ರೈತರ ಬದುಕು ಈ ಯೋಜನೆಯಿಂದ ಹಸನುಗೊಳ್ಳುವಂತಾಗಿದೆ ಎಂದರು.

ಶಾಸಕ ಎಸ್.ಭೀಮಾನಾಯ್ಕ ಮಾತನಾಡಿ, 22 ಕೆರೆಗಳಿಗೆ ನೀರುತುಂಬಿಸುವ ಯೋಜನೆಗೆ ಹಿಂದಿನ ಸರ್ಕಾರದಲ್ಲಿ ಅನುದಾನ ದೊರಕುವ ಪ್ರಯತ್ನ ನಡೆದಿತ್ತು. ತಾಲೂಕಿನ ಅಲಬೂರು ಗ್ರಾಮದಲ್ಲಿ ತರಳಬಾಳು ಜಗದ್ಗುರುಗಳ ಸೂಚನೆ ಮೇರೆಗೆ “ಸಮುದಾಯ ಭವನ" ನಿರ್ಮಿ ಸಲು ಶಾಸಕರ ಅನುದಾನದ ₹15 ಲಕ್ಷ ಮೀಸಲಿರಿಸಿದ ಪತ್ರವನ್ನು. ತರಳಬಾಳು. ಜಗದ್ಗುರುಗಳಿಗೆ ನೀಡಿದರು.

ಸಂಸದ ವೈ.ದೇವೇಂದ್ರಪ್ಪ ಮಾತನಾಡಿ ತರಳಬಾಳು ಜಗದ್ಗುರುಗಳು ನಮ್ಮ ನಾಲ್ಕು ತಾಲೂಕುಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರದ ಮಂಜೂರಾತಿ ದೊರಕಲು ಬೆಂಬಲವಾಗಿ ನಮಗೆ ಆಶೀರ್ವದಿಸಬೇಕು ಎಂದರು. 

ವಿಧಾನಪರಿಷಸ್ ಸದಸ್ಯ ವೈ.ಎಂ.ಸತೀಶ ಮಾತನಾಡಿ, ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ನೀಡುವಂತೆ ತರಳಬಾಳು. ಜಗದ್ಗುರುಗಳು ಒತ್ತಾಸೆಯಾಗಿ ನಿಲ್ಲುವ ಮೂಲಕ ಬಯಲುನಾಡಿನ ಈ ಭಾಗದ ಕೆರೆಗಳು ನೀರು ಕಾಣುವಂತಾಗಲಿ ಎಂದರು.

ರಾಜ್ಯ ಬೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ್ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಪಿ. ಚನ್ನಬಸವನಗೌಡ, ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಎನ್.ಸಿದ್ಧಲಿಂಗನಗೌಡ, ಜಿ. ನಂಜನಗೌಡ, ಸಾಸ್ಟಿಹಳ್ಳಿ ಚನ್ನೆಬಸವನಗೌಡ, ಎಸ್. ರಾಜೇಂದ್ರ ಪ್ರಸಾದ್, ಬಿ.ಕೊಟ್ರೇಶಪ್ಪ ನಾಗರಕಟ್ಟೆ ಕೆ.ಎನ್. ಕೊಟ್ರೇಶ, ಹೆಚ್. ನೀಲಕಹಪ್ಪ ಬಂದೋಳ್ ಮಂಜುನಾಥ, ಭರಮರೆಡ್ಡಿ, ಜೆಡಿಎಸ್ ಮುಖಂಡ ಡಾ.ಸ್ವಾಮಿ ವೆಂಕಟೇಶ, ಬಿ.ಆರ್. ವಿಕ್ರಮ್, ಸಂಗಮೇಶ್ವರ ಗ್ರಾಮ ಪಂಚಾಯಿತಿ ಸದಸ್ಯೆ ಟಿ.ಕೊಟ್ರಮ್ಮ ಮಾರುತಿ, ಹನುಮಂತಪ್ಪ ಮತ್ತಿತರರು ವೇದಿಕೆಯಲ್ಲಿದ್ದರು.  ಎಂ. ರಾಘವೇಂದ್ರ ಸ್ವಾಗತಿಸಿದರು.