N-2863 
  10-04-2025 08:43 AM   
ಮಾನವೀಯ ಭಾವನೆ v/s ವೈಚಾರಿಕ ಚಿಂತನೆ
ಪೂಜ್ಯ ಸ್ವಾಮಿಜೀಯವರ ಇಂದಿನ ಚಿಂತನ ಮನನೀಯವಾದದ್ದು. ಸನ್ಯಾಸಿ ಮತ್ತು ಚೇಳಿನ ದೃಷ್ಟಾಂತ ನಮ್ಮ ಸಮಾಜದ ನೈಜ ರೂಪವನ್ನು ಅನಾವರಣ
ಗೊಳಿಸುತ್ತದೆ.ಚೇಳಿನಂಥ ದುಷ್ಟ ಪ್ರವೃತ್ತಿಯ ಜನರಿಂದ
ಈ ಪ್ರಪಂಚ ಇಡಿಕಿರಿದಾಗ ಸನ್ಯಾಸಿಯಂಥ ಸತ್ಪುರುಷರ
ಸಂಖ್ಯೆ ತೀರ ಕಡಿಮೆ. ದುಷ್ಟರು ಸತತವಾಗಿ ಒಳ್ಳೆಯವರ
ಮೇಲೆ ಆಕ್ರಮಣ ಮಾಡುವುದು ಅವರ ಜನ್ಮ ಸಿದ್ಧಾಂತ
ಹಕ್ಕಾಗಿ ಹೋಗಿಬಿಟ್ಟಿದೆ.
ಎರಡನೆಯ ದೃಷ್ಟಾಂತವೂ ಗಮನಾರ್ಹವಾದದ್ದು.
ಸೋಗಲಾಡಿತನದ ದಂಪತಿಗಳು ವಿದ್ಯಾರ್ಥಿಗಳನ್ನು
ವಂಚಿಸುವ ದುರುದ್ದೇಶದಿಂದ ತಾವು ಯೋಜಿಸಿಕೊಂಡು
ಬಂದಿದ್ದ ಯೋಜನೆಯನ್ನು ಸ್ವಾಮಿಜೀಯವರು
ಬುಡಮೇಲು ಮಾಡಿದ್ದರಿಂದಲೇ ಹಣ ಕಳೆದುಕೊಳ್ಳುವ
ಹುನ್ನಾರ ವಿಫಲಗೊಂಡಿತು. ಅಪಾತ್ರರು ದಾನಕ್ಕೆ
ಯೋಗ್ಯರಲ್ಲ ಎಂಬುದು ಮತ್ತೊಮ್ಮೆ ಸ್ಥಾಪಿತವಾಯಿತು.
H S Harishankar
Mysuru