ಯುಗಾದಿಯ ಸಿಹಿ-ಕಹಿ ಕೋರ್ಟ್ ಸುದ್ದಿ !

ಮಠ, ಸಮಾಜ ಮತ್ತು ಸಂಸ್ಥೆಯ ವಿರುದ್ಧವಾಗಿ ಹಿರೇಕೆರೂರು ಎಸ್.ಎಸ್. ಪಾಟೀಲರು ಮತ್ತು ಅವರ ಸಂಗಡಿಗರು (ಒಟ್ಟು 9 ಜನ) ಮೂರು ವರ್ಷಗಳ ಹಿಂದೆ ಚಿತ್ರದುರ್ಗ ಕೋರ್ಟಿನಲ್ಲಿ ಕೇಸು ದಾಖಲಿಸಿದ್ದ ಸಂಗತಿ ಸರ್ವ ವಿದಿತ. ಇದರಿಂದ ತೀವ್ರ ಅಸಮಾಧಾನಗೊಂಡ ನೂರಾರು ಜನ ಶಿಷ್ಯರು ಮಠದ ಪರವಾಗಿ ನಿಂತು ಮಠದ ಜೊತೆಗೆ ತಮ್ಮನ್ನೂ ಪ್ರತಿವಾದಿಗಳನ್ನಾಗಿ ಮಾಡಿಕೊಳ್ಳಬೇಕೆಂದು ನ್ಯಾಯಾಲಯದಲ್ಲಿ ‘ಸೇರ್ಪಡೆ ಅರ್ಜಿ’ (Implead Application) ಸಲ್ಲಿಸಿದ್ದರು. ಚಿತ್ರದುರ್ಗ ನ್ಯಾಯಾಲಯವು ಅದನ್ನು ಮನ್ನಿಸಿ ಅವರೆಲ್ಲರನ್ನೂ ಈ ಕೇಸಿನಲ್ಲಿ ಸೇರ್ಪಡೆ ಮಾಡಿಕೊಂಡು ಆದೇಶ ಹೊರಡಿಸಿತ್ತು. ಆದರೆ ಇದರ ವಿರುದ್ಧವಾಗಿ ಎಸ್.ಎಸ್. ಪಾಟೀಲರು ಮತ್ತು ಅವರ ಸಂಗಡಿಗರು ಕಳೆದ ವರ್ಷ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿರುತ್ತಾರೆ. ಅದು ಹೈಕೋರ್ಟಿನಲ್ಲಿ ಇನ್ನೂ ವಿಚಾರಣೆಯ ಹಂತದಲ್ಲಿದೆ.
ಈ ಮಧ್ಯೆ ಎಸ್.ಎಸ್. ಪಾಟೀಲರು ಮತ್ತು ಅವರ ಸಂಗಡಿಗರು ಅನೇಕ ಮಧ್ಯಂತರ ಅರ್ಜಿಗಳನ್ನು (IA) ನ್ಯಾಯಾಲಯಕ್ಕೆ ಸಲ್ಲಿಸಿ ಪ್ರಮುಖವಾಗಿ ಈಗಿನ ಶ್ರೀ ಜಗದ್ಗುರುಗಳವರು ಯಾರಿಗೂ ಗೊತ್ತಿಲ್ಲದಂತೆ ಮಠದ ಟ್ರಸ್ಟ್ ಡೀಡ್ ಮಾಡಿಕೊಂಡಿದ್ದಾರೆ, ಅದರ ಆಧಾರದ ಮೇಲೆ ಮಠದ ಯಾವುದೇ ಕಾರ್ಯನಿರ್ವಹಣೆಯನ್ನು ಮಾಡಬಾರದು, ಶಿಷ್ಯರ ಯಾವುದೇ ಮೀಟಿಂಗ್ ನಡೆಸಬಾರದು ಎಂದು ತಾತ್ಕಾಲಿಕ ತಡೆಯಾಜ್ಞೆ ಕೋರಿದ್ದರು. ಇವುಗಳಲ್ಲಿ ಇದುವರೆಗೂ17 ಅರ್ಜಿಗಳು ವಿಲೇವರಿಯಾಗಿ 5 ಬಾಕಿ ಉಳಿದಿದ್ದವು. ಈ ಪೈಕಿ ಇತ್ತೀಚೆಗೆ 4 ಮಧ್ಯಂತರ ಅರ್ಜಿಗಳ ವಿಚಾರಣೆ ನಡೆದು ಚಿತ್ರದುರ್ಗ ನ್ಯಾಯಾಲಯವು ನಾಲ್ಕೂ ಮಧ್ಯಂತರ ಅರ್ಜಿಗಳನ್ನು ಖರ್ಚು ಸಮೇತ ನಿನ್ನೆ ವಜಾಗೊಳಿಸಿರುತ್ತದೆ (Dismissed with costs) ಎಂದು ಶಿಷ್ಯರ ಮತ್ತು ಸಾರ್ವಜನಿಕರ ಗಮನಕ್ಕೆ ತರಲಾಗಿದೆ.
ಕಾರ್ಯದರ್ಶಿ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ