ಶಿಕ್ಷಕರ ಶಿಕ್ಷಣದ ರಾಜ್ಯಮಟ್ಟದ ಪಠ್ಯಕ್ರಮ ರಚನೆ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ಎಚ್.ವಿ.ವಾಮದೇವಪ್ಪನವರು

  •  
  •  
  •  
  •  
  •    Views  

ಬೆಂಗಳೂರು :  ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಹಿನ್ನಲೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ, ಶಾಲಾ ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣವನ್ನು ಜಾರಿಗೊಳಲಸು ನಿಲುವು ಲೇಖನಗಳನ್ನು ರಾಜ್ಯಮಟ್ಟದಲ್ಲಿ ಸಿದ್ಧಪಡಿಸಲು ಸಮಿತಿಗಳನ್ನು ರಚಿಸಲಾಗಿತ್ತು. ಶಿಕ್ಷಕರ ಶಿಕ್ಷಣದ ಪೊಸಿಷನ್ ಪೇಪರ್ ಸಿದ್ಧಿಗೊಳಿಸಲು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳವರಾದ ಡಾ.ಎಚ್.ವಿ.ವಾಮದೇವಪ್ಪ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. 

ಕರ್ನಾಟಕ ರಾಜ್ಯದಲ್ಲಿ ಶಿಕ್ಷಕರ ಶಿಕ್ಷಣವನ್ನು ಬುನಾದಿ ಹಂತ, ಪ್ರಾಥಮಿಕ ಹಂತ, ಮಾಧ್ಯಮಿಕ ಹಂತ, ಹಾಗೂ ಸೆಕೆಂಡರಿ ಹಂತಗಳಲ್ಲಿ ಹೇಗೆ ಜಾರಿಗೊಳಿಸಬೇಕೆಂಬುದರ ಬಗ್ಗೆ ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಹಾಗೂ ಎನ್.ಸಿ.ಇ.ಆರ್.ಟಿ  ಇವರಿಗೆ ಸಲ್ಲಿಸಿರುತ್ತಾರೆ. 

ರಾಷ್ಟ್ರೀಯ ಶಿಕ್ಷಣ  ನೀತಿಯು ವಿವಿಧ ವಿಭಾಗಗಳಿಗೆ ಪೊಸಿಷನ್ ಪೇಪರ್ ಸಿದ್ಧಗೊಳಿಸಿದ ಮುಖ್ಯಸ್ಥರನ್ನು ಹಾಗೂ ಸದಸ್ಯರನ್ನು ಅಭಿನಂದಿಸಲು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಅಭಿನಂದನೆ ಸಮಾರಂಭವನ್ನು ದಿನಾಂಕ:3-6-2022ರಂದು ಹಮ್ಮಿಕೊಳ್ಳಲಾಗಿತ್ತು. 

ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ರವರು, ರಾಜ್ಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಸೆಲ್ವಕುಮಾರ್ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಕಾರ್ಯಪಡೆಯ ಮುಖ್ಯಸ್ಥರಾದ ಶ್ರೀ ಮದನಗೋಪಾಲ್ ರವರು ಹಾಗೂ ಡಿ.ಎಸ್.ಇ.ಆರ್.ಟಿ ನಿರ್ದೇಶಕರಾದ ಶ್ರೀಮತಿ ಸುಮಂಗಲಾರವರು ಶಿಕ್ಷಕರ ಶಿಕ್ಷಣ ವರದಿ ಸಿದ್ಧಗೊಳಿಸಿದ ಡಾ.ಎಚ್.ವಿ.ವಾಮದೇವಪ್ಪನವರು ಹಾಗೂ ಸಮಿತಿಯ ಸದಸ್ಯರಿಗೆ ಅಭಿನಂದಿಸಿರುತ್ತಾರೆ. 

ಇದರೊಂದಿಗೆ ಡಾ.ಎಚ್.ವಿ.ವಾಮದೇವಪ್ಪನವರು ಶಿಕ್ಷಕರ ಶಿಕ್ಷಣದ ರಾಜ್ಯಮಟ್ಟದ ಪಠ್ಯಕ್ರಮ ರಚನೆಯ ಚಾಲನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.