ಆಲೂರು ಮಂಜುನಾಥ್ ಮಾತೃಶ್ರೀ ಶರಣೆ ಸುನಂದಮ್ಮ ಆಲೂರು ಇವರ ನಿಧನಕ್ಕೆ ಶ್ರೀ ತರಳಬಾಳು ಜಗದ್ಗುರುಗಳವರು ಸಂತಾಪ ಸೂಚಿಸಿದ್ದಾರೆ.

  •  
  •  
  •  
  •  
  •    Views  

ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬ ಬೀಜವಂಕುರಿಸಿ, 
ಲಿಂಗವೆಂಬ ಎಲೆಯಾಯಿತ್ತು. 
ಲಿಂಗವೆಂಬ ಎಲೆಯ ಮೇಲೆ ವಿಚಾರವೆಂಬ ಹೂವಾಯಿತ್ತು,
 ಆಚಾರವೆಂಬ ಕಾಯಾಯಿತ್ತು. ನಿಷ್ಪತ್ತಿಯೆಂಬ ಹಣ್ಣಾಯಿತ್ತು. 
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ!

ಗುರು-ಲಿಂಗ-ಜಂಗಮ ತತ್ತ್ವದಲ್ಲಿ ಅಪಾರ ಶ್ರದ್ಧೆ ಹೊಂದಿದ್ದ ಶರಣೆ ಸುನಂದಮ್ಮ ಈ ದಿನ ಬೆಳಿಗ್ಗೆ ಶಿವೈಕ್ಯರಾಗಿದ್ದಾರೆ ಎಂಬ ಸುದ್ದಿ ತಿಳಿದು ತುಂಬಾ ವಿಷಾದವೆನಿಸುತ್ತಿದೆ. ಸುನಂದಮ್ಮನವರು ದಾವಣಗೆರೆ ಬಾಪೂಜಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಖ್ಯಾತ ಸಕ್ಕರೆ ಕಾಯಿಲೆ ತಜ್ಞರಾದ ಡಾ. ಆಲೂರು ಮಂಜುನಾಥ್ ಇವರ ಮಾತೃಶ್ರೀ. ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅವರ ಸಮಾಜ ಸೇವೆಯನ್ನು ಸ್ಮರಿಸಿ, ಮೃತರ  ಆತ್ಮಕ್ಕೆ ಶಾಂತಿ ದೊರೆಯಲಿ ಮತ್ತು ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲೆಂದು ಆಶಿಸಿರುತ್ತಾರೆ.

ಕಳೆದ ವಾರ ಸುನಂದಮ್ಮನವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿಯನ್ನು ಅವರ ಮಗ ಡಾ. ಆಲೂರು ಮಂಜುನಾಥ್ ತಿಳಿಸಿದಾಗ ಬಿಡುವಿಲ್ಲದ ಕಾರ್ಯಭಾರದ ಒತ್ತಡದಲ್ಲೂ ಶ್ರೀ ಜಗದ್ಗುರುಗಳವರು ಅವರ ಸಮಾಜ ಸೇವೆಯನ್ನು ಸ್ಮರಿಸಿ ಆರೋಗ್ಯ ವಿಚಾರಿಸಲು ಬಾಪೂಜಿ ಆಸ್ಪತ್ರೆಗೆ ಹೋಗಿ ಬಂದರು. 

2009 ನೆಯ ಸವಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಶ್ರೀ ತರಳಬಾಳು ಜಗದ್ಗುರುಗಳವರ ಬಿಡಾರ ನಮ್ಮ ಮನೆಯಲ್ಲೇ ಆಗಬೇಕು ಗುರುವಿನ ಸೇವೆ ಮಾಡಬೇಕೆಂಬ ಹಂಬಲ ಸುನಂದಮ್ಮನವರದ್ದು. ಅವರ ಆಸೆಯಂತೆ ಒಂಭತ್ತು ದಿನಗಳಕಾಲ ಶ್ರೀ ಜಗದ್ಗುರುಗಳವರ ಬಿಡಾರ ಅವರ ಮನೆಯಲ್ಲಿ ಮಾಡಲಾಯಿತು.  ಈ ಸಂದರ್ಭದಲ್ಲಿ ಸುನಂದಮ್ಮನವರು ಮಾಡಿದ ಗುರು ಸೇವೆ ಮತ್ತು ದಾಸೋಹ ವ್ಯವಸ್ಥೆಯನ್ನು ಸ್ಮರಿಸಬಹುದು.

ಮೃತರ  ಅಂತ್ಯಕ್ರಿಯೆ ಜೂನ್ 28 ರಂದು ಮಂಗಳವಾರ ಶಾಮನೂರು ಸಮಾಧಿ ಅಂಗಳದಲ್ಲಿ (ಗಾಜಿನ ಮನೆಯ ಹಿಂದೆ) ನಡೆಯಲಿದೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.