ವಿದ್ಯಾರ್ಥಿ ಸಾಧನೆಯು ತನ್ನ ಗುರುವಿನಿಂದ ಪ್ರಭಾವಿಸಲ್ಪಟ್ಟಿರುತ್ತದೆ : ಪ್ರಾಚಾರ್ಯ ಡಿ.ಎಂ.ನಾಗರಾಜ್

  •  
  •  
  •  
  •  
  •    Views  

ಸಿರಿಗೆರೆ: ಶೈಕ್ಷಣಿಕವಾಗಿ ತೊಡಗಿರುವ ವಿದ್ಯಾರ್ಥಿಗಳಿಗೆ ಪ್ರಬುದ್ಧತೆ ವಿಕಾಸಗೊಳಿಸಿಕೊಳ್ಳಲು ಸಾಕಷ್ಟು ಅವಕಾಶವಿದ್ದು,ನಿರಂತರ ಅಧ್ಯಯನದಿಂದ ಅಂದುಕೊಂಡ ಗುರಿಯನ್ನು ಮುಟ್ಟುವುದಕ್ಕೆ ಶ್ರಮಿಸಬೇಕು ಎಂದು ಕಾಲೇಜಿನ ಪ್ರಾಚಾರ್ಯ ಡಿ.ಎಂ.ನಾಗರಾಜ್ ಕರೆನೀಡಿದರು.

ಸ್ಥಳೀಯ ಎಂ.ಬಸವಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೋಷಕರ ಸಂಪೂರ್ಣ ಸಹಕಾರ ಹಾಗೂ ಶಿಕ್ಷಕರ ಬೋಧನಾ ಕ್ರಮ ಮತ್ತು ಮಕ್ಕಳ ಪರಿಶ್ರಮ ಪ್ರಮುಖ ಕಾರಣವಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತರಿದ್ದಾರೆ ಅವರಿಗೆ ಪ್ರೋತ್ಸಾಹ ದೊರೆತರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಲು ಅವಕಾಶವಾಗುತ್ತದೆ. ಯಾರು ಅಧ್ಯಯನದಲ್ಲಿ ತಮ್ಮ ಗುರಿ ತಲುಪಲು ಸಾಧ್ಯಾವಾಗುವುದಿಲ್ಲವೋ ಅವರು ಅವಕಾಶ ವಂಚಿತರಾಗದೆ ಪ್ರಯತ್ನಕ್ಕೆ ಬಹಳಷ್ಟು ಮಾರ್ಗಗಳಿವೆ ಅವುಗಳನ್ನು ಹುಡುಕಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದರು.

ಅರ್ಥಶಾಸ್ತ್ರ ಉಪನ್ಯಾಸಕ ಉಮೇಶ್ ಮಾತನಾಡಿ ಹೆಚ್ಚು ಅಂಕಗಳನ್ನು ಪಡೆದ  ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿದ್ಯಾರ್ಥಿಗಳು ಸಾಧಕರ ಸಾಧನೆಗಳನ್ನು ಗಮನಿಸಿ ಮುಂದುವರೆಯಲು ಶ್ರಮಿಸಿ ಎಂದು ತಿಳಿಸಿದರು.

ವಾಣಿಜ್ಯ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿನಿ ಪಿ.ಎಸ್.ರಕ್ಷಿತ ಮಾತನಾಡಿ, ಉಪನ್ಯಾಸಕರುಗಳು ತಮ್ಮ ವೃತ್ತಿಜೀವನದಲ್ಲಿ ಅರ್ಪಣಾ ಮನೋಭಾವದಿಂದ ವಿದ್ಯಾರ್ಥಿಗಳ ಯಶಸ್ಸಿಗಾಗಿ ಶ್ರಮಿಸಿದ್ದಾರೆ. ಮಾನವೀನ ಮೌಲ್ಯಗಳನ್ನು ಬಿತ್ತಿದ್ದಾರೆ. ನಾವುಗಳು ಅವುಗಳನ್ನು ಪಾಲಿಸುವುದು ನಮ್ಮ ಧರ್ಮವಾಗಿದೆ.

ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಕೆ.ಎಲ್.ವಂದನಾ, ಎಸ್.ಎ.ಶಾಂತಲಾ, ಗಾದ್ರೇಶ್, ವಂದನಾ ಮತ್ತು ಲಾವಣ್ಯ ಮಾತನಾಡಿದರು. 

ಕನ್ನಡ ಉಪನ್ಯಾಸಕಿ ರಮ್ಯಾ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಭೌತಶಾಸ್ತ್ರ ಉಪನ್ಯಾಸಕಿ ಎಂ.ರಂಜಿತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಸಿಕೊಟ್ಟರು.

ಅಧ್ಯಾಪಕ ಕಾರ್ಯದರ್ಶಿ ಎಸ್.ರವಿ, ವಿದ್ಯಾರ್ಥಿ ಕಾರ್ಯದರ್ಶಿ ಮಹೇಶ್, ಸಹಕಾರ್ಯದರ್ಶಿ ಪ್ರೀತಿ, ಯಶಸ್ವಿನಿ ಪ್ರಾರ್ಥಿಸಿದರು,  ಮನೋಜ್ ಸ್ವಾಗತಿಸಿದರು, ಅಪೂರ್ವ ವಂದಿಸಿದರು.  ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.