ಎಂ.ಬಸವಯ್ಯ ವಸತಿ ಪದವಿ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳಿಂದ ಅಧ್ಯಾಪಕರಿಗೆ ಗುರುವಂದನೆ

  •  
  •  
  •  
  •  
  •    Views  

ದಾವಣಗೆರೆ :  ದಿನಾಂಕ 2.7.2022 ರ ಶನಿವಾರ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಎಂ.ಬಸವಯ್ಯ ವಸತಿ ಪದವಿ ಮಹಾವಿದ್ಯಾಲಯದ ಹಳೆಯ ವಾಣಿಜ್ಯ ವಿದ್ಯಾರ್ಥಿ (1996 ರಿಂದ 2004 ರ ಶೈಕ್ಷಣಿಕ ಸಾಲಿನ ವಾಣಿಜ್ಯ ವಿಭಾಗ ವಿದ್ಯಾರ್ಥಿಗಳು) ವೃಂದದವರು  ದಾವಣಗೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರ ಅಪೂರ್ವ ರೆಸಾರ್ಟ್ ಸಭಾಂಗಣದಲ್ಲಿ ವಾಣಿಜ್ಯ ವಿಭಾಗದ ಅಧ್ಯಾಪಕರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಗೌರವಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಬಿ.ಜಿ.ಬಂದೋಜಿ ಉದ್ಘಾಟಿಸಿ ಮಾತನಾಡಿ,“ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಸಮಾಜದ ಗೌರವಕ್ಕೆ ಪಾತ್ರರಾಗುವುದೇ ವಿದ್ಯಾರ್ಥಿಗಳು ಶಿಕ್ಷಕರಿಗೆ ನೀಡುವ ಬಹುದೊಡ್ಡ ಕೊಡುಗೆ”. ಅಕ್ಷರ ಕಲಿಸಿದ ಗುರುಗಳ ಕುರಿತು ವಿದ್ಯಾರ್ಥಿಗಳು ಹೊಂದಿದ ಗೌರವ, ಪ್ರೀತಿ, ವಿಶ್ವಾಸ ಪ್ರಚುರ ಪಡಿಸಲು ಹಾಗೂ ಹಳೆ ವಿದ್ಯಾರ್ಥಿಗಳು ಒಂದೆಡೆ ಸೇರಿ ವಿದ್ಯಾರ್ಥಿ ಜೀವನದ ನೆನೆಪುಗಳನ್ನು ಮೆಲುಕು ಹಾಕಲು ಇದೊಂದು ಒಳ್ಳೆಯ ಸಂದರ್ಭ ಎಂದರು.

ಕಾರ್ಯಕ್ರಮ ಯಶಸ್ಸಿಗೆ ಕಾರಣರಾಗಿರತಕ್ಕಂತಹ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸುವುದರ ಜೊತೆಗೆ ಇನ್ನೂ ಉನ್ನತ ಸ್ಥಾನವನ್ನು ಪಡೆದು ನಿಮ್ಮ ತಂದೆ ತಾಯಿಗೂ ಚೆನ್ನಾಗಿ ನೋಡಿಕೊಳ್ಳಿ ಹಾಗೂ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಿ ಅವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಎಂದು ಕರೆಕೊಟ್ಟರು.

ಪ್ರೊ. ಬಿ.ಎಂ.ಶಿವಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಈ ಗುರುವಂದನಾ ಕಾರ್ಯಕ್ರಮ ಮಾಡಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ನಿಮ್ಮ ಉಜ್ವಲ ಭವಿಷ್ಯ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ನಮ್ಮ ಸಿರಿಗೆರೆಯ ವಿದ್ಯಾರ್ಥಿ ಶೇಖಪ್ಪ ಪವರ್  ಯೋಧರು. ಇವರ ದೇಶ ಸೇವೆ ಶ್ಲಾಘನೀಯವಾದುದು ಮತ್ತು ಇನ್ನೊಬ್ಬ ವಿದ್ಯಾರ್ಥಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುವುದು ನಮಗೆ ಹೆಮ್ಮೆ ವಿಷಯವಾಗಿದೆ. ಇನ್ನು ಅನೇಕ ವಿದ್ಯಾರ್ಥಿಗಳು ಚಾರ್ಟರ್ಡ್ ಅಕೌಂಟೆಂಟ್ಗಳಾಗಿ ಮತ್ತು ವಿವಿಧ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಮ್ಮ ಶ್ರೀ ಸಂಸ್ಥೆಗೆ ಹೆಸರು ತರುವುದಕ್ಕೆ ಕಾರಣೀಭೂತರಾಗಿದ್ದಾರೆ.

ಪ್ರೊ.ಚಂದ್ರಶೇಖರ್ ತೆಂಗ್ಳಿ  ಮಾತನಾಡಿ, ಮನುಷ್ಯ ಒಂದು ಹಂತಕ್ಕೆ ಬಂದ ನಂತರ ಆದಾಯ ಗಳಿಸುವುದಕ್ಕಿಂತ ಹೆಚ್ಚಾಗಿ ಆರೋಗ್ಯದ ಬಗ್ಗೆಯೂ ಸಹ ಗಮನವಿರಿಸಬೇಕು ಎಂದು ಕಿವಿಮಾತು ಹೇಳಿದರು.

ವಿಶ್ರಾಂತ ಪ್ರಾಚಾರ್ಯರಾದ ಡಾ. ಬಿ.ಆರ್.ಮರುಳಸಿದ್ದಪ್ಪ ಮಾತನಾಡಿ ಇಂದಿನ ದಿನಮಾನದಲ್ಲಿ ಗುರು-ಶಿಷ್ಯರ ಸಂಬಂಧಗಳು ಬಹಳಷ್ಟು ಹಾಳಾಗಿರುವ ಈ ಸಂದರ್ಭದಲ್ಲಿ ನಮ್ಮ ಸಿರಿಗೆರೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದರೂ ಕೂಡ ತಮ್ಮ ಗುರು ಭಕ್ತಿ ನೀಡುತ್ತಿರುವುದು ನಮಗೆ ಹರ್ಷ ಪಡುವಂತಾಗಿದೆ ಮತ್ತು ಈ ಒಂದು ಭಾವನಾತ್ಮಕ ಕ್ಷಣಗಳನ್ನು ನಾನೆಂದು ಮರೆಯಲಾರೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಶುಭಹಾರೈಕೆಗಳನ್ನು ತಿಳಿಸುತ್ತಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಕುಮಾರಿ ಪರಿಣಿತ ಪ್ರಾರ್ಥಿಸಿದರು, ಉಪನ್ಯಸಕ ಕೆ.ಬಿ.ರವೀಂದ್ರ ಪ್ರಾಸ್ತಾವಿಕವಾಗಿ  ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದರು. ವಿಜಯ್ ಕಾರ್ಯಕ್ರಮ ನಿರೂಪಿಸಿದರು, ಜಿ.ಕೆ.ಹರೀಶ್ ವಂದಿಸಿದರು.  ಕಾರ್ಯಕ್ರಮ ಸಂಯೋಜಕ  ತಿಪ್ಪೇಶ್, ದೇವರಾಜ್, ಹಾಲಪ್ಪ, ಬಸವರಾಜು,  ಹರೀಶ್, ಪ್ರಸನ್ನ, ಸಾಗರ್, ಶೈಲಜಾ ಇತರರು ಇದ್ದರು.