ಕೈಗಾರಿಕೋದ್ಯಮಿ ಶಿವಗಂಗ ಶ್ರೀನಿವಾಸ ಇವರಿಂದ ಉಚಿತ ಕೆಂಪು ವಸ್ತ್ರ ವಿತರಣೆ
ಸಿರಿಗೆರೆ: ದಿನಾಂಕ 11-7-2022ರ ಸೋಮವಾರದಂದು ಸಿರಿಗೆರೆಯ ವಸತಿ ನಿಲಯದಲ್ಲಿ ಪ್ರೈಮರಿಯಿಂದ ಹಂತದಿಂದ ಪದವಿಯವರೆಗೆ ವ್ಯಾಸಂಗ ಮಾಡುತ್ತಿರುವ 2500 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕೆಂಪು ವಸ್ತ್ರಗಳನ್ನು ಉಚಿತವಾಗಿ ವಿತರಿಸಲಾಯಿತು.
ದಾವಣಗೆರೆಯ ಕೈಗಾರಿಕೋದ್ಯಮಿಗಳಾದ ಶರಣ ಶಿವಗಂಗ ಶ್ರೀನಿವಾಸ ದಂಪತಿಗಳು 1,25,000 ರೂ ವೆಚ್ಚದ ಕೆಂಪು ವಸ್ತ್ರಗಳನ್ನು ಉಚಿತವಾಗಿ ನೀಡಿದರು.
ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸದ್ಧರ್ಮ ನ್ಯಾಯಪೀಠದಲ್ಲಿ ನೆರೆದಿದ್ದ ಸದ್ಭಕ್ತರ ಸಮ್ಮುಖದಲ್ಲಿ ದಾನಿಗಳಿಗೆ ಗೌರವ ಸಮರ್ಪಸಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ಧಯ್ಯ, ಉಪಾಧ್ಯಕ್ಷ ಯು.ಚಂದ್ರಪ್ಪ, ಶಿವಸೈನ್ಯದ ಅಧ್ಯಕ್ಷರಾದ ಶಶಿಧರ ಹೆಮ್ಮನಬೇತೂರು, ಕುಮಾರ್, ನಿಲಯ ಪಾಲಕರಾದ ಕೆ.ಎಸ್. ನಟರಾಜ್, ಸಂಸ್ಕೃತ ಶಿಕ್ಷರಾದ ನಾಗರಾಜ್, ನಿಲಯ ಶಿಕ್ಷಕರು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.