22-07-2022 05:51 AM
ಗುರುಗಳಿಗೆ ಪ್ರಣಾಮಗಳು,
ಹಿಂದೆ, ವೇದಿಕೆಯೊಂದರಲ್ಲಿ ಮಾತನಾಡುತ್ತಾ ನಿಮ್ಮ ಪಕ್ಕದಲ್ಲಿ ಆಸೀನರಾಗಿದ್ದ ಸಾಣೇಹಳ್ಳಿ ಗುರುಗಳು, ನಾವು ಲಿಂಗವಂತರೆಂದು, ಲಿಂಗಾಯತ ನಮ್ಮ ಧರ್ಮವೆಂದೂ ಹೇಳಿದ್ದರು ಇದಕ್ಕೆ ನೀವು ಸಾಕ್ಷಿಯಾಗಿದ್ದಿರಿ. ವಿಜಯ ಕರ್ನಾಟದ "ಬಿಸಿಲು ಬೆಳದಿಂಗಳು" ಲೇಖನದಲ್ಲಿ ಸರ್ಕಾರ ಕೊಡಲಿ ಬಿಡಲಿ ಲಿಂಗಾಯತ ಎಂದೆಂದಿಗೂ ಸ್ವತಂತ್ರ ಧರ್ಮ ಎಂದು ದಾಖಲಿಸಿದ್ದಿರಿ.
ಆದರೆ ನಮ್ಮ ಪ್ರಶ್ನೆ,
೧. ನಮಗೂ ವೀರಶೈವರಿಗೂ ಇರುವ ವ್ಯತ್ಯಾಸವೇನು ?
೨. ಉಜ್ಜಯಿನಿಯ ಗುರುಗಳ ವೀರಶೈವ ಪೀಠಕ್ಕೂ ನಮಗೂ ಇರುವ ಸಂಬಂಧಾಂತರಗಳೇನು?
೩. ಉಜ್ಜಯಿನಿ ಪೀಠದ ಅನುಯಾಯಿಗಳಿಗೂ ನಮಗೂ ಇರುವ ವ್ಯತ್ಯಾಸ ಏನು?
ಸಾಷ್ಟಾಂಗ ಪ್ರಣಾಮಗಳು
ಚೇತನ್