ಕ್ಲಿಷ್ಟ ಗಣಿತದ ಲೆಕ್ಕಗಳಿಗೆ ಥಟ್ ಎಂದು ಉತ್ತರ ಕೊಡುವ ಮಾನವ ಕಂಪ್ಯೂಟರ್ ಅಥಣಿಯ ಬಸವರಾಜ್

  •  
  •  
  •  
  •  
  •    Views  

ಸಿರಿಗೆರೆ: ಕಣ್ಣು ಕಾಣದಿದ್ದರೂ ಯಾವುದೇ ಲೆಕ್ಕವನ್ನು ಬಿಡಿಸಿ ಥಟ್ ಅಂತ ಉತ್ತರ ಹೇಳುವ ಅಭಿರುಚಿ ಬೆಳಸಿಕೊಂಡು ಸಾಧನೆಗೈದಿದ್ದಾರೆ ಅಥಣಿಯ ಬಸವರಾಜ್ ಎಂದು ಪ್ರಾಚಾರ್ಯ ಡಿ.ಎಂ.ನಾಗರಾಜು ತಿಳಿಸಿದರು.

ಇಲ್ಲಿನ ಎಂ.ಬಸವಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಥಣಿ ಬಸವರಾಜ್ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುಣಾಕಾರ, ಭಾಗಾಕಾರ, ಸಂಕಲನ, ವ್ಯವಕಲನ ಜೊತೆಗೆ ಗಣಿತದ ಅನೇಕ ಲೆಕ್ಕಗಳನ್ನು ಕ್ಷಣಾರ್ಧದಲ್ಲಿ ತಿಳಿಸುವ, ಯಾವುದೇ ಸಮಯದಲ್ಲಿ ಟೈಮ್ ಕೇಳಿದ್ರೆ ನಿಖರವಾಗಿ ಹೇಳುವ, ಕ್ರಿಕೆಟ್ ಕಾಮೆಂಟ್ರಿ ನೀಡಬಲ್ಲ ಹಾಗೂ ಕಂಪ್ಯೂಟರ್ ನಂತೆ ಗಣಿತದ ಎಲ್ಲ ಲೆಕ್ಕಗಳನ್ನು ಕ್ಷಣಾರ್ಧದಲ್ಲಿ ಮಾಡಿ ನೀರು ಕುಡಿದಷ್ಟು ಸರಳವಾಗಿ ಮಾಡಿ ಉತ್ತರವನ್ನು ಹೇಳಬಲ್ಲ ಅಗಾಧ ಶಕ್ತಿ ಅವರಲ್ಲಿದೆ. ನಮ್ಮ ವಿದ್ಯಾರ್ಥಿಗಳು ಅವರ ಸಾಧನೆಯ ತುಣುಕುಗಳನ್ನು ನಿಮ್ಮ ಜೀವನದಲ್ಲಿ ಬೆಳಸಿಕೊಳ್ಳಿ ಎಂದು ತಿಳಿಸಿದರು.

ಕುಟುಂಬದ ನಿರ್ವಹಣೆಗಾಗಿ ಬೇರೆ-ಬೇರೆ ಶಾಲಾ ಕಾಲೇಜುಗಳಿಗೆ ತೆರಳಿ ಉಪನ್ಯಾಸ ನೀಡಿದ ಅವರ ಈ ಅದಮ್ಯ ಶಕ್ತಿಗೆ ಪ್ರತಿಷ್ಠಿತ ಅಬ್ದುಲ್ ಕಲಾಂ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಸಂದಿವೆ. ಪ್ರಧಾನಿ ಮೋದಿ ಸಹ ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.

ಬಸವರಾಜ್ ತನ್ನಂತೆಯೇ ಇರುವ ಲಕ್ಷಾಂತರ ಜನರ ಬದುಕಿಗೆ ಪ್ರೋತ್ಸಾಹ ಆಗಬೇಕು ಎಂಬ ಉತ್ಕಟ ಇಚ್ಛೆ ಇಟ್ಟುಕೊಂಡು ಮಾರ್ಗದರ್ಶನ ಮಾಡಿದ್ದಾರೆ. 

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಸಾಧನೆ ಬೇಕಾದ ಅಂಶಗಳನ್ನು ಅಥಣಿ ಬಸವರಾಜ್ ಹತ್ತಿರ ತಿಳಿದುಕೊಂಡರು. ನೌಕರವರ್ಗದವರು ಭಾಗವಹಿಸಿದ್ದರು.