ಸಾಧಕನ ಬದುಕಿನ ಸಾರ್ಥಕತೆ ಕಂಡ ಚಿಕ್ಕಮಗಳೂರು L.V. ಬಸವರಾಜ್ ಶಿವೈಕ್ಯರಾಗಿದ್ದಾರೆ.

  •  
  •  
  •  
  •  
  •    Views  

ಸಮಾಜದ ಬದುಕಿಗಾಗಿ ಅಹರ್ನಿಶಿ ದುಡಿದ ಮಹಾನ್ ಸಾಧಕರೂ, ಹಿರಿಯರೂ ಆದ ಶ್ರೀಯುತ L V ಬಸವರಾಜು ಅವರು ಈ ದಿನ ದಿನಾಂಕ : 28-07-22ರ ಗುರುವಾರ ಬೆಳಗಿನಜಾವ 1.00 ಗಂಟೆಗೆ  ಶಿವೈಕ್ಯರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಬರಲಿ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಆಶೀರ್ವದಿಸಿದ್ದಾರೆ.

ಚಿಕ್ಕಮಗಳೂರಿನ ಸುತ್ತ- ಮುತ್ತಲಿನವರ ಸಮಾಜ ಬಾಂಧವರ ಹೃದಯದಲ್ಲಿ ಅವರಿಗೊಂದು ಸ್ಥಾನವಿದೆ ಅಂತಾದರೆ ಅದಕ್ಕಿಂತ ದೊಡ್ಡ ಮೌಲ್ಯದ ಆಸ್ತಿ ಇನ್ನಾವುದೂ ಇಲ್ಲ ಎಂಬಂತೆ ಸಮಾಜದ ಹತ್ತು- ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದವರಿವರು LV ಬಸವರಾಜ್ ರವರು.

ಶ್ರೀಯುತರು ಚಿಕ್ಕಮಗಳೂರಿನ ನಗರಸಭೆ ಮಾಜಿ ಅಧ್ಯಕ್ಷರಾಗಿ, ಗಣಪತಿ ಸೇವಾ ಸಮಿತಿಯ ಮಾಜಿ ಅಧ್ಧ್ಯಕ್ಷರಾಗಿ, ಭಾರತೀಯ ಸೇವಾದಳದ ಉಪಾಧ್ಯಕ್ಷರಾಗಿ, ಚಿಕ್ಕಮಗಳೂರು ತಾಲೂಕು ಸಾಧು ಸಧ್ಧರ್ಮ ವೀರಶೈವ ಸಮಾಜದ ಅಧ್ಯಕ್ಷರಾಗಿ  ತಮ್ಮಶಕ್ತಿ ಮೀರಿ ಹಲವು ವರ್ಷಗಳ ಕಾಲ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ ಕೀರ್ತಿಗೆ ಪಾತ್ರರಾಗುತ್ತಾರೆ. ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಮೆಚ್ಚಿನ ಶಿಷ್ಯರಾಗಿ ಮಠ ಮತ್ತು ಸಂಸ್ಥೆಯ ಹಲವು ಕಾರ್ಯಭಾರಗಳನ್ನು ನಿರ್ವಹಿಸಿದ ಹೆಗ್ಗಳಿಕೆ ಇವರದು.

2003ರಲ್ಲಿ  ಚಿಕ್ಕಮಂಗಳೂರಿನಲ್ಲಿ ನಡೆದ ನಮ್ಮ ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವದ ಕಾರ್ಯದರ್ಶಿಗಳಾಗಿ 9 ದಿನಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದವರಲ್ಲಿ ಇವರು ಒಬ್ಬರು.

ಶಿವಚಿಂತೆ ಶಿವ ಜ್ಞಾನ ವಿಲ್ಲದ ಮನುಜರು

ಸಗಣಕ್ಕೆ ಸಾಸಿರ ಹುಳು, ಹುಟ್ಟವೆ ದೇವಾ?

ಕಾಡಮೃಗಮೊಂದಾಗಿರಲಾಗದೆ, ದೇವಾ ?

ಊರ ಮೃಗಮೊಂದಾಗಿರಲಾಗದೆ, ಹರನೆ?

ನಮ್ಮ ಕೂಡಲಸಂಗನ ಶರಣರಿಲ್ಲದ ಊರು, ದೇಶ

ವನವಾಸ ನರವಿಂಧ್ಯ  ಕಾಣಿರಣ್ಣಾ.

ಹೋರಾಟ, ಹಾರಾಟ ಬೇಡವಾಗಿದ್ದರೆ ಜಗತ್ತಿನಲ್ಲಿ ಯಾವ ಸಾಧನೆಯೂ ಆಗುತ್ತಿರಲಿಲ್ಲ, ಹೀಗೆ ಸಮಾಜದ ಒಳಿತಿಗಾಗಿ ಹೋರಾಟ ಮಾಡಿ ತಾನೂ ಬದುಕಿ, ಇನ್ನೊಬ್ಬರನ್ನು ಬದುಕಿಸಬೇಕು, ತಾನೂ ಬೆಳೆದು ಇನ್ನೊಬ್ಬರನ್ನೂ ಬೆಳೆಸಬೇಕು ಎಂದುಕೊಂಡು ಶಿವಚಿಂತೆ, ಶಿವ ಜ್ಞಾನ ದಲ್ಲಿಯೆ ಅಂತಿಮ ದಿನಗಳನ್ನು ಕಳೆದರು. ಮೂಲತಃ ಲಕ್ಯ ಊರಿನವರಾದರು ತಮ್ಮ 72 ವರ್ಷ ವಯಸ್ಸಿನ ಬಹುತೇಕ ಅವಧಿಯನ್ನು

ಚಿಕ್ಕಮಗಳೂರಿನಲ್ಲಿಯೆ ಬಾಳಿ ಬದುಕಿದವರು.

ಸಿರಿಗೆರೆಯ ಕೇಂದ್ರಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಚಿಕ್ಕಮಗಳೂರಿನ ಎಸ್.ಟಿ.ಜೆ.ಮಹಿಳಾ ಕಾಲೇಜಿನ LAC ಅಧ್ಯಕ್ಷರಾಗಿ  ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಮಾರ್ಗದರ್ಶನವನ್ನು ನೀಡಿದರು.

ಮನೆಗೆ ಬರುವ ಅತಿಥಿಗಳನ್ನು ಸತ್ಕರಿಸುವಲ್ಲಿ ದಂಪತಿಗಳೀರ್ವರು ಆದರ್ಶನೀಯರು. ನುಡಿದಂತೆ ನಡೆದ, ನಡೆದಂತೆ ನುಡಿದಸಾ ಧನೆಯ ಮೂಲಕ ಮಾತಾಗಿರುವ‌ ಇವರ ಬದುಕು ಕಿರಿಯರಿಗಲ್ಲದೆ ಎಲ್ಲರಿಗೂ ಅನುಕರಣೀಯ.

ಸಮಾಜಕ್ಕಾಗಿ ಮಿಡಿದ - ದುಡಿದ  ಜೀವ ಚಿರಸ್ಮರಣೀಯ!