ಸಮಾಜ ಬದಲಾವಣೆ ಪರಿವರ್ತನೆಗೆ ಬೇಕು ನಾಟಕಗಳ ಪ್ರಯೋಗ : ಎಸ್.ಬಿ.ರಂಗನಾಥ್

  •  
  •  
  •  
  •  
  •    Views  

ಸಿರಿಗೆರೆ :  ಸುಮಾರು 60 ದಶಕಗಳಿಂದ ನಾಟಕಗಳನ್ನು ತಾವೇ ರಚಿಸಿ ನಿರ್ದೇಶಿಸಿ ಸಿರಿಗೆರೆಯನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದವರು ಹಿರಿಯ ತರಳಬಾಳು ಜಗದ್ಗುರು ಲಿಂ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ಎಂದು ತರಳಬಾಳು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಬಿ. ರಂಗನಾಥ್ ಅಭಿಪ್ರಾಯಪಟ್ಟರು.

ಬೃಹನ್ಮಠದ ಸಿದ್ಧಲಿಂಗೇಶ್ವರ ದೀಕ್ಷಾಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಜರುಗಿದ ರಂಗ ತರಬೇತಿ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಿರಿಗೆರೆಯಲ್ಲಿ ಮೊದಲಿನಿಂದಲೂ ನಾಟಕ, ಸಂಗೀತ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಾದಾನ್ಯತೆಯನ್ನು ನೀಡುತ್ತಾ ಬಂದಿದ್ದಾರೆ. ನಾಟಕಗಳ ಪ್ರಯೋಗಿದಂದ ಸಮಾಜ ಬದಲಾವಣೆ ಪರಿವರ್ತನೆ ಮಾಡಬಹುದು. ಇಂದಿನ ದಿನಗಳಲ್ಲಿ ಶಿಕ್ಷಕರಿಗೂ ರಂಗ ತರಬೇತಿ ಬೇಕು. ಮಹಾತ್ಮಾ ಗಾಂಧೀಜಿ ಅವರೂ ಸತ್ಯ ಹರಿಶ್ಚಂದ್ರ ನಾಟಕದಿಂದ ಪರಿವರ್ತನೆಗೊಂಡರು ಎಂಬುದು ಇಲ್ಲಿ ಗಮನಾರ್ಹವಾದುದು.

ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಹೆಚ್.ವಿ.ವಾಮದೇವಪ್ಪ ಮಾತನಾಡಿ ಇಂತಹ ರಂಗ ತರಬೇತಿ ಶಿಬಿರಗಳಲ್ಲಿ ಉತ್ತಮ ಶಿಕ್ಷಕರಾಗಿ ರೂಪುಗೊಳ್ಳಲು ಸಹಕಾರಿಯಾಗುವುದರೊಂದಿಗೆ ಅವರಲ್ಲಿನ ಪ್ರತಿಭೆ ಹೊರಹಾಕಲು ಅನುಕೂಲವಾಗುತ್ತದೆ. ಇಂತಹ ಅವಕಾಶಗಳನ್ನು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ನೌಕರವರ್ಗದವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಒದಗಿಸಿಕೊಟ್ಟಿದ್ದಾರೆ ಎಂದರು.

ರಂಗ ತರಬೇತಿ ಶಿಬಿರದ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್,  ನಾಡಿನ ಹಲವಾರು ಮಠಗಳಲ್ಲಿ ತರಳಬಾಳು ಜಗದ್ಗುರು ಬೃಹನ್ಮಠ ಜನಗಳಿಗೆ ಹತ್ತಿರವಾದ ಮಠ. ಧರ್ಮ ಜಾತಿ-ಪಂಥಗಳನ್ನು ಮೀರಿ ನಡೆದ ಮಠವಾಗಿ ರೂಪುಗೊಂಡಿದೆ. ಇದಕ್ಕೆ ತರಳಬಾಳು ಮಠದ ಗುರುಪರಂಪರೆ ನಡೆದುಬಂದ ಹಾದಿಯೇ ಇದಕ್ಕೆ ಕಾರಣ. ಮಠಗಳು ಸಾಂಸ್ಕೃತಿಕವಾಗಿ ಬೆಳೆದು ಜನಗಳಿಗೆ ಹತ್ತಿರವಾಗಬೇಕು ಎಂದು ಅಭಿಪ್ರಾಯಪಟ್ಟರು.

ರಂಗಭೂಮಿ ಮನಸ್ಸಿನ ಕಸವನ್ನು ತೆಗೆದು ಶುದ್ದಿಗೊಳಿಸುವ ಕೆಲಸವನ್ನು ಮಾಡುತ್ತದೆ. ಇಂತಹ ಶಿಬಿರಗಳು ಸಮಾಜದ ಪರಿವರ್ತನೆಗೆ ಕಾರಣವಾಗುತ್ತದೆ ಹೃದಯವಂತರು ಮಾತ್ರ ಸಮಾಜವನ್ನು ಒಪ್ಪಿಕೊಂಡು ಗೌರವಿಸುತ್ತಾರೆ,

ತರಳಬಾಳು ಗುರುಪರಂಪರೆಯ ಗುರುವರ್ಯರು ಸಾಹಿತ್ಯ, ಸಂಗೀತ, ಜಾನಪದ ಕಲೆ ಮುಂತಾದ ಸಾಂಸ್ಕೃತಿಕ ಕ್ಷೇತ್ರಗಳಿಗೆ ಮಹತ್ವ ನೀಡಿದವರು. ಸ್ವತಃ ಗುರುಗಳು ಕೂಡ ವಯಲಿನ್ ವಾದಕರು ಎಂಬುದನ್ನು ತಿಳಿದು ನನಗೆ ಸಂತೋಷವಾಗುತ್ತದೆ. ಮನುಷ್ಯ ಮನುಷ್ಯರ ನಡುವಿನ ಸಂಬಂಧವೇ ಹಾಳಾಗುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಶಿಬಿರಗಳು ಮನುಷ್ಯರನ್ನು ಬೆಸೆಯುವಂತಹ ಕೆಲಸವನ್ನು ಮಾಡುತ್ತವೆ. ನಾಟಕ ಅನ್ನೋದು ಒಂದು ಅಂತರಂಗದ ವ್ಯಾಪಾರ, ನಟನೆಯನ್ನು ಅನುಭವಿಸುತ್ತಾ ಕಲಿಯುತ್ತಾ ವಿಶ್ವಬಂಧು ಮರಳಸಿದ್ಧರ ಚರಿತ್ರೆಯನ್ನು ಅಭಿನಯಿಸುತ್ತಾ ತಿಳಿಯೋಣ ಎಂದರು.

ಕಾರ್ಯಕ್ರಮದಲ್ಲಿ ಶಿಬಿರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ರೊಟ್ಟಿ ಚನ್ನಕೇಶವ ಸ್ವಾಗತಿಸಿದರು, ತರಳಬಾಳು ಕಲಾಸಂಘದ ಅಧ್ಯಕ್ಷ ರಾಜಶೇಖರಯ್ಯ ಅಧ್ಯಕ್ಷೀಯ ಮಾತುಗಳನ್ನಾಡಿದರು, ಸಹಕಾರ್ಯದರ್ಶಿ ಕೆ.ವಿ.ಕಾಶಿನಾಥ ವಂದಿಸಿದರು, ಎ.ಎಲ್.ರಶ್ಮಿ ನಿರೂಪಿಸಿದರು. ಸಂಚಾಲಕರಾದ ಈ.ದೇವರಾಜು ಹಾಗೂ 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.