ನಾಟಕದ ಜೊತೆ ನಿರ್ದೇಶನ ನೀಡುತ್ತಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ: ಸುಮಾರು 1960ರಿಂದ ನಾಟಕಗಳನ್ನು ತಾವೇ ರಚಿಸಿ ನಿರ್ದೇಶಿಸಿ ಸಿರಿಗೆರೆಯನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದವರು ಹಿರಿಯ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಎಂದು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್.ಬಿ. ರಂಗನಾಥ್ ಅಭಿಪ್ರಾಯಪಟ್ಟರು.
ಸಿರಿಗೆರೆಯಲ್ಲಿ ಜುಲೈ 30 ರಿಂದ ಆ.15 ರವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ರಂಗ ತರಬೇತಿ ಶಿಬಿರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಸಿರಿಗೆರೆಯಲ್ಲಿ ಮೊದಲಿನಿಂದಲೂ ನಾಟಕ, ಸಂಗೀತ, ನೃತ್ಯ ಮುಂತಾದ ಪ್ರಯೋಗದಿಂದ ಸಮಾಜ ಬದಲಾವಣೆ, ಪರಿವರ್ತನೆ ಮಾಡಬಹುದು. ಇಂದಿನ ದಿನಗಳಲ್ಲಿ ಶಿಕ್ಷಕರಿಗೂ ರಂಗ ತರಬೇತಿ ಬೇಕು. ಮಹಾತ್ಮಾ ಗಾಂಧೀಜಿ ಅವರೂ ಸತ್ಯಹರಿಶ್ಚಂದ್ರ ನಾಟಕದಿಂದ ಪರಿವರ್ತನೆಗೊಂಡರು ಎಂಬುದು ಇಲ್ಲಿ ಗಮನಾರ್ಹವಾಗಿದೆ ಎಂದರು.
ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಹೆಚ್.ವಿ.ವಾಮದೇವಪ್ಪ ರಂಗ ತರಬೇತಿ ಶಿಬಿರದ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಮಾತನಾಡಿದರು.
ಶಿಬಿರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ರೊಟ್ಟಿ ಚನ್ನಕೇಶವ ಸ್ವಾಗತಿಸಿದರು, ತರಳಬಾಳು ಕಲಾಸಂಘದ ಅಧ್ಯಕ್ಷ ರಾಜಶೇಖರಯ್ಯ ಅಧ್ಯಕ್ಷೀಯ ಮಾತುಗಳನ್ನಾಡಿದರು.
ರೊಟ್ಟಿ ಚನ್ನಕೇಶವ ಸ್ವಾಗತಿಸಿದರು, ಸಹಕಾರ್ಯದರ್ಶಿ ಕೆ.ವಿ.ಕಾಶಿನಾಥ ವಂದಿಸಿದರು, ಎ.ಎಲ್.ರಶ್ಮಿ ನಿರೂಪಿಸಿದರು. ಸಂಚಾಲಕರಾದ ಈ.ದೇವರಾಜು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.