ಕೊಟ್ಟೂರು : ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಮಾಜದ ನೂತನ ಅಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ
ಕೊಟ್ಟೂರು:ಕೊಟ್ಟೂರಿನಲ್ಲಿ ನಡೆದ ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಮಾಜದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಟ್ಟೂರು ತಾಲೂಕ್ ಘಟಕದ ಅಧ್ಯಕ್ಷರು ಹಾಗೂ ಸಮಾಜದ ಉಪಾಧ್ಯಕ್ಷರುಗಳಾದ ಡಾ.ಬಿ.ಸಿ.ಮೂಗಪ್ಪನವರು ವಹಿಸಿದ್ದರು.
ಸನ್ಮಾನ ಸ್ವೀಕರಿಸಿದ ಸಾಧು ಸದ್ಧರ್ಮ ವೀರಶೈವ ಸಮಾಜದ ಅಧ್ಯಕ್ಷರಾದ ಎಚ್.ಬಸವರಾಜಪ್ಪನವರು ಮಾತನಾಡಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ 1989ರ ಮಧ್ಯಪಾನ ನಿಷೇಧ ಕಾರ್ಯಕ್ರಮದ ಬಗ್ಗೆ ಮಾತನಾಡಿ ಅಂದಿನಿಂದ ಇಂದಿನವರೆಗೆ ತಮ್ಮ ಹಾಗೂ ಗುರುಗಳ ಒಡನಾಟವನ್ನು ತಿಳಿಸಿ ಗುರುಗಳ ಮಾರ್ಗದರ್ಶನದಿಂದ ಬರೆದ ತಮ್ಮ ಹಸಿರು ಶಾಲಿನ ಕಥನ ಪುಸ್ತಕದ ಬಗ್ಗೆ ಮಾತನಾಡುತ್ತಾ ತಮ್ಮ ರೈತ ಸಂಘದ ಬಗ್ಗೆ ತಿಳಿಸಿ ರೈತ ಸಂಘಕ್ಕೂ ಸಮಾಜದ ಸಂಘಕ್ಕೂ ಅವಿನಾಭವ ಸಂಬಂಧವಿದೆ ಎಂದರು.
ಗುರುಗಳ ರೈತ ಕಾಳಜಿಯ ಬಗ್ಗೆ ಗುಣಗಾನ ಮಾಡುತ್ತಾ,1992 ರಲ್ಲಿನ ಜಾನುವಾರುಗಳಿಗೆ ಮೇವು ವಿತರಣೆ ಬಗ್ಗೆ ನೆನಪಿಸಿದರು. ಗುರುಗಳ ಆಶಯದಂತೆ ತಯಾರಾದ ಫಸಲ್ ಭೀಮಾ ಯೋಜನೆಗೆ 2016 ರಲ್ಲಿ ನಡೆದ ಆನ್ ಲೈನ್ ಬರ ಪರಿಹಾರ, ಸಾಫ್ಟ್ವೇರ್ ತಯಾರಿಯ ಬಗ್ಗೆ ಗುರುಗಳ ಜಾಣ್ಮೆಯನ್ನು ಕೊಂಡಾಡಿದರು.
ಆಗಿನ ಯಶಸ್ವಿನಿ ಯೋಜನೆಯನ್ನು ಮರು ಕಾರ್ಯರೂಪಗೊಳಿಸಲು ತರಳಬಾಳು ಹುಣ್ಣಿಮೆಯಂದು ನಡೆದ ಮುಖ್ಯಮಂತ್ರಿಗಳೊಂದಿಗಿನ ಮಾತುಕತೆ ಹಾಗೂ ಅದರ ಯಶಸ್ವಿಗೆ ಗುರುಗಳ ಕೊಡುಗೆ ಅಪಾರ ಹಾಗೂ ಅದ್ವಿತಿಯವಾದದ್ದು ರಾಜ್ಯದಲ್ಲಿ ಸಂಪೂರ್ಣ ಹಳ್ಳಿ ಹಾಗೂ ರೈತರ ಪರವಾಗಿರುವ ಯಾವುದಾದರೂ ಮಠ ಇದ್ದರೆ ಅದು “ತರಳಬಾಳು ಮಠ” ಎಂದು ತಿಳಿಸಿದರು. ಹಿರಿಯ ಗುರುಗಳ “ದಿಟ್ಟ ಹೆಜ್ಜೆ ಧೀರಕ್ರಮ” ಹಾಗೂ ಈಗಿನ ಗುರುಗಳ ದೂರದೃಷ್ಟಿ ಹಾಗೂ ವೈಜ್ಞಾನಿಕ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಧು ಸದ್ಧರ್ಮ ವೀರಶೈವ ಸಮಾಜದ ಕಾರ್ಯದರ್ಶಿಗಳಾದ ಮಾಗನೂರು ಸಂಗಮೇಶಗೌಡ್ರು ಕೊಟ್ಟೂರ್ ತಾಲೂಕ್ ಘಟಕದ ಕಾರ್ಯದರ್ಶಿಗಳಾದ ಬಿ.ಭೋಜನಗೌಡ್ರು, ಉಪಾಧ್ಯಕ್ಷರುಗಳಾದ ಟಿ.ಮಂಜುನಾಥ, ಸಾವಜ್ಜಿ ರಾಜಣ್ಣ, ಟಿ.ಮಂಜನಗೌಡ್ರು, ಜಿ.ಈಶ್ವರಪ್ಪ ಹಾಗೂ ಹಲವು ತಾಲೂಕುಗಳ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿನ ಸಮಾಜದ ಮುಖಂಡರು ಮತ್ತು ಬಾಂಧವರು ಹಾಜರಿದ್ದರು.