ಕೆರೆಗಳಿಗೆ ನೀರು ತುಂಬಿಸಲು ಒತ್ತಾಯ : ಶ್ರೀ ತರಳಬಾಳು ಜಗದ್ಗುರುಗಳವರು
ಕೊಟ್ಟೂರು: "ಸರ್ಕಾರ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿ, ಬೆಳೆಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಲು ಮುಂದಾಗಬೇಕು" ಎಂದು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿಪ್ರಾಯಟ್ಟರು.
ತಾಲ್ಲೂಕಿನ ತೂಲಹಳ್ಳಿ ಗ್ರಾಮ ದಲ್ಲಿ ಬೀಜ ಸಂಸ್ಕರಣಾ ಘಟಕವನ್ನು ಭಾನು ವಾರ ಉದ್ಘಾಟಿಸಿ ಮಾತನಾಡಿದರು.
"ಚನ್ನಗಿರಿ, ಭರಮಸಾಗರ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ಕಾರ್ಯರೂಪ ಪಡೆದ ಫಲವಾಗಿ ರೈತರು ಸಮೃದ್ಧ ಬೆಳೆ ಬೆಳೆಯಲು ಸಾಧ್ಯವಾಯಿತು. ಸರ್ಕಾರ ಅನವಶ್ಯ ಯೋಜನೆಗಳಿಗೆ ಅನುದಾನ ನೀಡುವುದನ್ನು ಬಿಟ್ಟು, ಮಧ್ಯ ಕರ್ನಾಟಕದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಂದಾಗಲಿ" ಎಂದು ಹೇಳಿದರು.
ರಾಜ್ಯ ಬೀಜ ನಿಗಮದ ನಿರ್ದೇಶಕ ಎಸ್. ರಾಜೇಂದ್ರ ಪ್ರಸಾದ್ , ನಿರ್ದೇಶಕರಾದ ನಿಂಗಪ್ಪ ಎಸ್. ಹಾವೇರಿ, ಶಿವಬಸಪ್ಪ ಎಸ್. ಬೆಲ್ಲದ, ಡಿ.ಎಸ್. ನಾಗರಾಜ, ಬಿ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಕೆ.ತಿಪ್ಪೇಸ್ವಾಮಿ, ನಿರ್ದೇಶಕ ಎಂ.ಗುರುಸಿದ್ದನಗೌಡ, ವಿ.ಎಸ್.ಎಸ್.ಎನ್ ಅಧ್ಯಕ್ಷ ಎಂ. ವೀರೇಶ್ ಮಾತನಾಡಿದರು.