ಕೂಡ್ಲೂರು : ಶ್ರೀ ಮಹೇಶ್ವರ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕೂಡ್ಲೂರು ಶ್ರೀ ಮಹೇಶ್ವರ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಸಂಭ್ರಮ, ಸಡಗರಗಳಿಂದ ಆಚರಿಸಲಾಯಿತು. ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಬ್ಯಾಂಡ್ ವಾದ್ಯ ಸಹಿತ ಪ್ರಭಾತಪೇರಿ ಮಾಡಲಾಯಿತು. ಆನಂತರ ಕೆ.ಎಂ.ಶೇಖರಪ್ಪನವರು ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಉಚಿತ ಸಮವಸ್ತ್ರ ವಿತರಣೆ ಮಾಡಲಾಯಿತು.
ಶಾಲಾ ಸ್ಥಳೀಯ ಸಲಹಾ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರೂ.55 ಸಾವಿರ ಮೌಲ್ಯದ ಸಿದ್ಧ ಸಮವಸ್ತ್ರಗಳನ್ನು ಕೊಡುಗೆಯಾಗಿ ನೀಡಿದರು. ಸಮಾರಂಭದಲ್ಲಿ ಎಲ್ಲಾ ದಾನಿಗಳನ್ನು ಶಾಲು ಹೊದಿಸಿ ಅಭಿನಂದನೆ ಸಲ್ಲಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಕೆ.ಎಂ.ಶೇಖರಪ್ಪ ವಹಿಸಿದ್ದರು. ಉಪಾಧ್ಯಕ್ಷ ಶ್ರೀ ನೀಲಕಂಠಪ್ಪ, ಸದಸ್ಯರಾದ ಶ್ರೀ ಹಾಲಪ್ಪ, ಶ್ರೀ ಜಯಪ್ರಕಾಶ್ ಕೆ.ಬಿ, ಶ್ರೀ ಚಂದ್ರಮೌಳಿ ಎಂ.ವಿ, ಶ್ರೀಮತಿ ಪಾರ್ವತಮ್ಮ ಡಿ.ವಿ, ಶ್ರೀ ಧರಣಿ ಎನ್.ಎಂ, ಧನಂಜಯಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಮ್ಮ, ಗ್ರಾಮಸ್ಥರಾದ ಶ್ರೀ ಪರಮೇಶ್ವರಪ್ಪ, ಶ್ರೀ ಜಯಣ್ಣ ಎಸ್.ಓ ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀ ನಾಗರಾಜಪ್ಪ ಬಿ.ಆರ್ ಭಾಗವಹಿಸಿದ್ದರು.
ಪ್ರಾಸ್ತಾವಿಕ ಮಾತುಗಳನ್ನು ಶ್ರೀ ಗಿರೀಶ್ ಜಿ.ಎನ್ ನುಡಿದರು. ಶಾಲಾ ನೌಕರರಾದ ಶ್ರೀಮತಿ ಎ.ರೇಖಾ, ಶ್ರೀಮತಿ ಸಾವಿತ್ರಮ್ಮ ಬಿ, ಶ್ರೀಮತಿ ಆಶಾ ಯು.ಎಸ್, ಶ್ರೀ ಎಸ್.ಎಂ ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.