31-08-2022 05:48 AM
ಶಾಂತಿವನ
ಹಸಿರಾಯಿತು ಉಸಿರ ಬನ
ಕಾಣದಾಯ್ತು ಸಣ್ಣತನ
ಕನಸಕಟ್ಟಿ ನಿಂತ ಮನ
ಮೆರೆಯಿತಲ್ಲ ದೊಡ್ಡ ತನ||
ಕಾಯಕಾಂತಿ ಮೊಗದಿ ಸೂಸಿ
ಚಂದಿರನ ನಗುವನಾಸಿ
ಕರುಣೆ ಪ್ರೀತಿ ಮನದಿ ಜಾಸ್ತಿ
ತರಳಬಾಳು ಜಗದಿ ಆಸ್ತಿ||
ಮುಸುಕು ಮೊಡ ಮಂಜು ಕರಗಿ
ಧರೆಯ ದಾಹ ಅಡಗಿ ಮರುಗಿ
ಕಾಲಚಕ್ರ ಜರುಗಿ ತಿರುಗಿ
ಜಲರಾಶಿಯ ಕಣ್ಣು ಕೊರಗಿ||
ವರ್ಷಧಾರೆ ಶಾಂತಿ ಬಿಟ್ಟು
ಹಳೆಯ ಸಿರಿಗೆ ಗೆರೆಯ ಬೊಟ್ಟು
ಕನವರಿಕೆಯ ಕಣ್ಬನ
ಮಿಂದೊಯ್ತು ಶಾಂತಿವನ||
ರಮೇಶ್ ಕೆ ಎಮ್
Ramesh k m