ಎಲ್ಲ ತಾಲ್ಲೂಕಿನಲ್ಲೂ ತರಳಬಾಳು ಯುವ ವೇದಿಕೆ : ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ಮುತ್ತುಗದೂರು : ರಾಜ್ಯದ ಎಲ್ಲಾ ತಾಲ್ಲೂಕುಗಳ ತರಳಬಾಳು ಯುವ ವೇದಿಕೆ ಹಾಗೂ ತರಳಬಾಳು ಮಹಿಳಾ ವೇದಿಕೆಗಳನ್ನು ಆರಂಭಿಸಲಾಗುವುದು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ತಿಳಿಸಿದರು. 


ಸಮೀಪದ ತರಳಬಾಳು ನಗರದ ಕೊಳವೆ ಬಾವಿಗೆ ಗಂಗಾಪೂಜೆಯನ್ನು ನೆರವೇರಿಸಿ ಮಾತನಾಡಿದರು. ಈ ವೇದಿಕೆಗಳ ಮೂಲಕ ರಾಜ್ಯದಾದ್ಯಂತ ಸಾಧು ವಿರಶೈವ ಸಮಾಜವನ್ನು ಸಂಘಟಿಸಿ, ಆ ಮೂಲಕ ಸಾಧು ವೀರಶೈವ ಸಮಾಜದ ಅಭಿವೃದ್ಧಿಗೆ ಹಾಗೂ ಮಠದ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸಲು ಪ್ರೇರಣೆ ಯಾಗುತ್ತದೆ ಎಂದರು. 

ಡಿಸೆಂಬರ್ 30ರೊಳಗೆ ಸಾಸ್ಟೆಹಳ್ಳಿ ಏತನೀರಾವರಿ ನೀರನ್ನು ಮುತ್ತುಗದೂರು ಹಾಗೂ ಭೀಮಸಮುದ್ರ ಕರೆಗಳಿಗೆ ಪ್ರಾಯೋಗಿಕವಾಗಿ ನೀರನ್ನು ಹರಿಸಲಾಗುವುದು ಎಂದರು.

ಲಿಂಗಕ್ಕೆ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಪುಣ್ಯಸ್ಮರಣೆ ಅಂಗವಾಗಿ ಸೆ. 22ರಂದು ಇಲ್ಲಿನ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ವಿಶ್ರಾಂತಿ ಧಾಮದಲ್ಲಿ ಸಭೆ ನಡೆಸಲಾಗುವುದು.

ಸಮೀಪದ – ಡಿ.ಮದಕರಿಪುರದ ಬಳಿಯ ಶಿವಕುಮಾರ ವನದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. 

24ರಂದು ಸಿರಿಗೆರೆಯಲ್ಲಿ ನಡೆಯುವ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆಗೆ ತರಳಬಾಳು ನಗರ ಹಾಗೂ ಸುತ್ತಲಿನ ಗ್ರಾಮಸ್ಥರು 2.32 ಲಕ್ಷ ದೇಣಿಗೆ ನೀಡಿದರು. 

ತಾಲ್ಲೂಕು ಪಂಚಾಯಿತಿ ಮಾಜಿ - ಉಪಾಧ್ಯಕ್ಷ ಜಿ. ಓಂಕರಸ್ವಾಮಿ, ಎಂ.ಕೆ. ರುದ್ರಪ್ಪ, ಎಂ. ದೇವರಾಜ್, ಜಿ. - ಬಸವರಾಜಪ್ಪ, ಎಂ.ಎಸ್ ರವಿಕುಮಾರ್ ಮತ್ತಿತರ ಸಮಾಜದ ಮುಖಂಡರು ಇದ್ದರು.