ಗುರುಪರಂಪರೆ ಶಾಶ್ವತವಾಗಿ ಉಳಿಸಲು ಶ್ರಮಿಸಿ : ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ಹೊಳೆಹೊನ್ನೂರು :  ಗುರುಗಳಿಗೆ ಅಂಜಿ ಶಿಷ್ಟ ವರ್ಗ, ಶಿಷ್ಯವರ್ಗಕ್ಕೆ ಅಂಜಿ ಗುರುಗಳು ನಡೆದರೆ ಗುರುಪರಂಪರೆ ಶಾಶ್ವತವಾಗಿ ಉಳಿಯುವಲ್ಲಿ ಎರಡು ಮಾತಿಲ್ಲ ಎಂದು ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. 

ಪಟ್ಟಣ ಸಮೀಪದ ಹಾಡೋನಹಳ್ಳಿಯಲ್ಲಿ ಬುಧವಾರ ಹಮ್ಮಿಕೊಳಲಾಗಿದೆ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ30 ನೇ ಶ್ರದ್ದಾಂಜಲಿ ಸಮಾರಂಭದ ದಾಸೋಹಕ್ಕೆ ಭಕ್ತಿ ಸಮರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. 

ಕಷ್ಟ ಎದುರಾದಾಗ ದೃಡ ಹೆಜ್ಜೆಯ ಸಂಕಲ್ಪ ಅತಿ ಮುಖ್ಯ. ಪ್ರತಿಯೊಬ್ಬರಿಗೂ ದೇವರು ನೀಡಬೇಕಾಗಿರುವುದನ್ನು ಅನುಗ್ರಹಿಸುತ್ತಾನೆ. ಮಾನವ ದೇವರಲ್ಲಿ ಬೇಡಿಕೆಯ ಪಟ್ಟಿಯನ್ನು ಸಲ್ಲಿಸುವುದನ್ನು ಕೈ ಬಿಟ್ಟು ಕಷ್ಟ ಎದುರಿಸುವ ಶಕ್ತಿ ದಯಪಾಲಿಸುವಂತೆ ಕೇಳಿಕೊಂಡರೆ ಶ್ರದ್ಧಾಭಕ್ತಿ ಹೆಚ್ಚಾಗುವುದರಲ್ಲಿ ಮನಸಿನ ಸಮಾಧಾನದ ಸ್ಥಿತಿಯೇ ಸಂಪತ್ತು. ಹಣದಿಂದ ಶಾಂತಿ ಸಂಪತ್ತು ಸಿಗುತ್ತದೆ ಎನ್ನುವುದು ಮೂರ್ಖವಾದ, ಸತ್ಯಮಾರ್ಗ ನಿಷ್ಠೂರವಾಗಿದ್ದರೂ ನಿಸ್ಪಕ್ಷವಾಗಿರುತ್ತದೆ. ಸತ್ಯ ಸಂಕಲ್ಪದಿಂದ ಎಲ್ಲವೂ ಸುಲಭವಾಗಿ ಸಿಗುವುದಿಲ್ಲ, ಸತ್ಯ ಮಾರ್ಗದಲ್ಲಿ ನಡೆದರೆ ಒಮ್ಮೊಮ್ಮೆ ಮಾಡದ ಪ್ರಮಾದಗಳಿಗೂ ಶಿಕ್ಷೆ ಅನುಭವಿಸಬೇಕಾದ ಅನಿವಾರ್ಯತೆ  ಎದುರಾಗುತ್ತದೆ. ಸಮಾಜದ ಸತ್ಯ ಸಂಗತಿಗಳ ಈ ಬಗ್ಗೆ ಜನತೆಯಲ್ಲಿ ನಿರ್ದಿಷ್ಟ ಆಲೋಚನೆಗಳು ಮೂಡದೆ ಇರುವುದು ಸಮಾಜದ ದುರಂತ. ಅನ್ಯರ ಅಗತ್ಯತೆಗಳನ್ನು ತಿಳಿದು ಅದನ್ನು ನೀಡುವ ತ್ಯಾಗದ ಮನೋಧರ್ಮ ಬೆಳೆಸಿಕೊಳ್ಳಬೇಕಾಗಿರುವುದು ಅತ್ಯವಶ್ಯಕ ಎಂದರು. 

ಸಂಸದ ಬಿ.ವೈರಾಘವೇಂದ್ರ ಮಾತನಾಡಿ ಗುರು ಮುಟ್ಟಿದ ಕಡ್ಡಿ ಗುಡ್ಡವಾಗುತ್ತದೆ ಎಂಬ ನಾಣ್ಣುಡಿ ಅಕಾಲಿಕ ಸತ್ಯ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ತರಳಬಾಳು ಶ್ರೀಗಳು ತಿಳಿಯದ ಕ್ಷೇತ್ರಗಳಿಲ್ಲ. ತಂತ್ರಾಂಶಗಳನ್ನು ಬಳಸಿಕೊಂಡು ಶಿವಶರಣರ ಸಾವಿರಾರು ವಚನಗಳನ್ನು ಕೈಬೆರಳಿನ ತುದಿಗೆ ತಂದು ನಿಲ್ಲಿಸಿ ಗಣಕ ಋಷಿಯಾಗಿದ್ದಾರೆ. ಬೂದಿಗೆರೆ ಏತನೀರಾವರಿಯ ಕೆಲಸ ಸಂಪೂರ್ಣವಾಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಮಾಜಿ ಶಾಸಕಿ ಶಾರಾದ ಪರ್ಯಾನಾಯ್ಕ, ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಸೂಡಾ ಅಧ್ಯಕ್ಷ ಬಾನುಪ್ರಕಾಶ್, ಗ್ರಾಪಂ ಅಧ್ಯಕ್ಷೆ ಇಂದಿರಾ ಶೇಖರ್, ಗ್ರಾಮಮುಖಂಡ ಶಿವನಗೌಡ, ವೈದ್ಯ ಧನಂಜಯ್ ಸರ್ಜಿ, ಶ್ರೀನಿವಾಸ್ ಕರಿಯಣ್ಣ ಇದ್ದರು.