ಸದೃಢ ವ್ಯಕ್ತಿಗಳೇ ದೇಶದ ಸಂಪತ್ತು: ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ

  •  
  •  
  •  
  •  
  •    Views  

ಸಿರಿಗೆರೆ : ದೈಹಿಕ ಕಾಳಜಿಗೆ ಗಮನ ನೀಡದೆ ಬದುಕನ್ನು ಯಾಂತ್ರಿಕ ಬದುಕನ್ನಾಗಿಸಿಕೊಳ್ಳುತ್ತಿದ್ಧೇವೆ ಹಾಗೂ ಒತ್ತಡದ ಬದುಕು, ಕಲುಷಿತ ವಾತಾವರಣದಿಂದ ಸಹಜವಾದ ಸಿಗಬಹುದಾದ ವ್ಯಾಯಮ ನಮಗೆ ಸಿಗದೇ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ ಎಂದು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಗುರುಶಾಂತೇಶ್ವರ ಭವನದಲ್ಲಿ ಚಿತ್ರದುರ್ಗ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಒಳಾಂಗಣ ಕ್ರೀಡಾಕೂಟದ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಮಾನಸಿಕ ಮತ್ತು ದೈಹಿಕ ಸ್ಥಿತಿಗತಿ ಚೆನ್ನಾಗಿ ಇದ್ದಾರೆ ಮಾತ್ರ ಮನುಷ್ಯ ಉತ್ತಮ ಜೀವನ ನಡೆಸಲು ಸಾಧ್ಯ. ಉತ್ತಮ ಆಲೋಚನೆವುಳ್ಳ ವ್ಯಕ್ತಿಗಳು ಮಾತ್ರ ಜೀವನದಲ್ಲಿ ಏನಾನ್ನಾದರೂ ಸಾಧಿಸ ಬಹುದು. ಕರಾಟೆ ರಕ್ಷಣಾತ್ಮಕ ಕಲೆಯನ್ನು ಮತ್ತು ಚೆಸ್ ಬೌದ್ಧಿಕ ಶಕ್ತಿಯನ್ನು ಬೆಳೆಸುತ್ತದೆ ಎಂದರು. 

ತರಳಬಾಳು ಪ್ರೌಢಶಾಲೆಯ ಮುಖ್ಯಶಿಕ್ಷಕಿ ಎಂ.ಎನ್.ಶಾಂತಾ ಮಾತನಾಡಿ ಕ್ರೀಡೆ ಮನುಷ್ಯನ ಮೂಲಭೂತ ಆಸಕ್ತಿಗಳಲ್ಲಿ ಒಂದಾಗಿದ್ದು, ಪಠ್ಯ ಚಟುವಟಿಕೆಗಳು ಬೌದ್ಧಿಕವಾಗಿ ಉತ್ತೇಜಿಸಿದರೆ ಪಠ್ಯೇತರ ಚಟುವಟಿಕೆಗಳು ದೈಹಿಕವಾಗಿ ಉತ್ತೇಜಿಸುತ್ತದೆ ಎಂದು ತಿಳಿಸಿದರು.

ಯೋಗಾಸನ, ಚದುರಂಗ, ಕರಾಟೆ ಸ್ಪರ್ಧೆಗಳು ಜರುಗಿದವು.

 

ಪ್ರಾಥಮಿಕ ಶಾಲೆಯ ಬಾಲಕಿಯರ ವಿಭಾಗದಲ್ಲಿ  ಕೃತಿಕಾ.ಎಂ.ಬಿ, ಸಿಂಧೂ.ಎನ್.ಎಂ ಪ್ರೌಢಶಾಲೆ ಬಾಲಕರ ವಿಭಾಗದಲ್ಲಿ ಜಯಂತ್.ಕೆ.ಏನ್ ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಕ ಪರುಶುರಾಮಪ್ಪ, ತಾಲ್ಲೂಕು ದೈಹಿಕ ಶಿಕ್ಷಕ ನೀಲಕಂಠಾಚಾರ್ ಇತರೆ ಗಣ್ಯರು ಇದ್ದರು.