ಗೌರಿಬಿದನೂರಿನಲ್ಲಿ ಏಕತೆಗಾಗಿ ಸದ್ಭಾವನಾ ಪಾದಯಾತ್ರೆ
ಗೌರಿಬಿದನೂರು: ಪಕ್ಷಾತೀತವಾಗಿ ಜಾತ್ಯಾತೀತವಾಗಿ ಸನ್ಮಾರ್ಗವಾಗಿ ನಡೆದರೆ ಅಂತಹ ಯಾತ್ರೆಯನ್ನು ಸಾವನಾ ಯಾತ್ರೆ ಎನ್ನುತ್ತಾರೆ ಎಂದು ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ನ್ಯಾಷನಲ್ ಕಾಲೇಜಿನಿಂದ ವಿಧುರಾಶ್ವತ್ಯದವರೆಗೆ ಬೃಹತ್ ಸದ್ಭಾವನಾ ಪಾದಯಾತ್ರೆ ನಡೆಸಿ ವಿಧುರಾಶ್ವತ್ಯದಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯಕ್ರಮದಲ್ಲಿ ಮಾತನಾಡಿ ಸ್ವಾತಂತ್ರ್ಯ ಚಳವಳಿ ಎಂದಿಗೂ ಮರೆಯುವಂತಿಲ್ಲ.
ಅಂದು ಬಲಿದಾನ ಮಾಡಿದ ಜನರ ನೆನಪಿನಲ್ಲಿ ಆ ಸ್ಥಳದಲ್ಲಿ ವೀರಸೌಧ, ವೀರಗಲ್ಲು. ಸ್ಥೂಪವನ್ನು ನಿರ್ಮಿಸಿರುವುದು ಒಳ್ಳೆಯ ಬೆಳವಣಿಗೆ. ಸ್ವಾತಂತ್ರ ಸಂಗ್ರಾಮದ ಹೊರತಾಗಿ ವಿಧುರಾಶ್ವತ್ಯಕ್ಕೆ ಪುರಾಣದ ಕಥೆಯೂ ಇದೆ ಎಂದರು. ನಂತರ ಈ ಸ್ಥಳ ಮಹಿಮೆಗೆ ಸರಿಸಾಟಿ ಇನ್ನೊಂದಿಲ್ಲ. ಸ್ವಾತಂತ್ರ ಸಂಗ್ರಾಮದಲ್ಲಿ ಅದೆಷ್ಟೋ ಮಹಾನೀಯರು ಜಾತಿ ಮತ ಧರ್ಮ ಎಂಬ ಭೇದವಿಲ್ಲದೆ ರಾಷ್ಟ್ರೀಯತೆಗೆ ಹಾಗೂ ರಾಷ್ಟ್ರಕ್ಕಾಗಿ ತಮ್ಮನ್ನು ತಾವೇ ಸಮರ್ಪಿಸಿಕೊಂಡಿದ್ಯಾರೆ.
ಆದರೆ ಕಾಣದ ಕೈಗಳು ನಮ್ಮ ನಮ್ಮಲ್ಲೇ ದ್ವೇಷ ಬೀಜವನ್ನು ಬಿತ್ತಿ ಜಾತಿ, ಮತ, ಧರ್ಮ ಪಂಗಡ ಎಂದು ವಿಂಗಡಿಸಿ ರಾಷ್ಟ್ರೀಯತೆ ದೇಶ ಪ್ರೇಮದಂತಹ ವಿಚಾರಗಳು ಹಿನ್ನೆಡೆಗೆ ಸರಿಯುವ ಸ್ಥಿತಿಗೆ ಬಂದಿದೆ. ಆದ್ದರಿಂದ ನಾವೆಲ್ಲರೂ ಒಂದೇ ಭಾರತೀಯರು ಎಂಬ ಏಕ ಮಂತ್ರದಡಿ ನಮ್ಮನ್ನು ನಾವೇ ತೊಡಗಿಸಿಕೊಳ್ಳಬೇಕು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಶಯ ಅಂದು ಪ್ರಾಣ ತ್ಯಾಗ ಮಾಡಿದ ಆ ವೀರ ಚೇತನಗಳನ್ನು ನೆನೆಯುತ್ತ ಮತ್ತೆ ರಾಷ್ಟ್ರ ಕಟ್ಟುವಲ್ಲಿ ಸಕ್ರಿಯರಾಗಬೇಕಾಗಿದೆ ಎಂದು ಹೇಳಿದರು.
ಮಹಾಸಭಾದ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಮಾತನಾಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯು ರಾಜ್ಯದಲ್ಲಿ ಏಕೈಕ ವಿವ ಸಂಘಟನೆಯಾಗಿದೆ. ಎಂದು ಹೇಳಿದರು. ಈ ಸಂಘಟನೆ ಸಮಾಜದ ಶಕ್ತಿ ಕೇಂದ್ರವಾಗಿ ಬೆಳೆದು ನಿಂತಿದೆ ಈ ಸುದೀರ್ಘ ಸೇವಾ ಅವಧಿಯಲ್ಲಿ ಇಂದಿನ ಜನಾಂಗ ಸನಾತನ ಧರ್ಮವನ್ನು ರೂಪಿಸಿಕೊಳ್ಳುವ ಜೊತೆಗೆ ರಾಷ್ಟ್ರೀಯತೆ ರಾಷ್ಟ್ರ ಪ್ರೇಮವನ್ನು ಬೆಳಸಿಕೊಳ್ಳಬೇಕು. ರಾಷ್ಟ್ರೀಯ ಮನೋಭಾವದಿಂದ ಜಾತಿ ಮತ ಭೇದವಿಲ್ಲದೆ ಹೋರಾಡಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ವಿಧುರಾಶ್ವತ ಭಾರತೀಯರ ಪಾಲಿಗೆ ಸದಾ ಸ್ಮರಣೀಯ ಪವಿತ್ರ ಸ್ಥಳ.
ಸನ್ಮಾರ್ಗವಾಗಿ ನಡೆಯುವವರು ಎಲ್ಲರೂ ಬ್ರಾಹ್ಮಣರೇ. ಇದು ಬ್ರಾಹ್ಮಣರ ಒಗ್ಗಟ್ಟಿನ ಸಂದೇಶವಾಗಿದೆ. ನಮ್ಮ ರಾಷ್ಟ್ರವನ್ನು ಬಲಪಡಿಸಬೇಕೆಂದರೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಇಲ್ಲಿರುವ ಎಲ್ಲಾ ಸ್ವಾಮಿಜಿಗಳು ತ್ಯಾಗಮೂರ್ತಿಗಳು, ಪ್ರತಿಯೊಬ್ಬರ ಆತ್ಮದಲೂ ಪರಮಾತ್ಮನ ಅಂಶವಿರಬೇಕು ನಮ್ಮ ರಾಷ್ಟ್ರ ಅಭಿವೃದ್ಧಿಯಾಗಬೇಕಾದರೆ ಜಾತಿ ಮತ ಪಂಗಡದಿಂದ ಹೊರಗೆ ಬರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಣ್ಯ ಮಠದ ಸ್ವಾಮೀಜಿ.ತಂಬಿಹಳ್ಳಿ ವಿದ್ಯಾವಲ್ಲಭ ಸ್ವಾಮೀಜಿ. ಯಾದವ ತೀರ್ಥ ಸ್ವಾಮೀಜಿ. ಮಾಜಿ ಶಾಸಕಿ ಎನ್. ಜೋತಿರೆಡ್ಡಿ.ಪೌರಾಯುಕ್ತ ಗೀತಾ. ಸುದರ್ಶನ್, ಪಾವಗಡ ಪ್ರಕಾಶ್, ಲಕ್ಷ್ಮೀಕಾಂತ್, ಕೃಷ್ಯ. ಹೆಚ್. ವಿ.ಮಂಜುನಾಥ್, ಪ್ರಸಾದ್, ವೆಂಕಟೇಶ, ದೊಡ್ಡನರಸಪ್ಪ, ಬಿ.ಆರ್.ಶ್ರೀನಿವಾಸ ಮೂರ್ತಿ, ಸೂರ್ಯನಾರಾಯಣ ಗುಪ್ತ, ಎಸ್.ರಮೇಶ. ವೆಂಕಟರಾಮರೆಡ್ಡಿ. ರಂಗ ರಾಜು, ಶಶಿಭೂಷಣ್ ಹೆಗಡೆ. ನಾಗಭೂಷಣರಾವ್. ರಾಜೇಂದ್ರ ಪ್ರಸಾದ್, ಎನ್.ವಿ.ರಾವ್, ಸಾಮಾಜಿಕ ಕಾರ್ಯಕರ್ತರು ಹಾಗೂ ಅನೇಕ ಮುಖಂಡರು ಹಾಜರಿದ್ದರು.