ಪಂಚ ಭೂತಗಳಲ್ಲಿ ಲೀನನಾದ ಪಂಚಣ್ಣ “You saw him. But he could not see you” lamented Pratima!

  •  
  •  
  •  
  •  
  •    Views  


ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದ ವೈದ್ಯ ಪಂಚಣ್ಣನವರನ್ನು  ವಿಚಾರಿಸಲು ಶ್ರೀ ತರಳಬಾಳು ಜಗದ್ಗುರುಗಳವರು ಗುರುವಾರ (ದಿ.13-10-2022) ಬೆಳಗ್ಗೆ 10:30 ಕ್ಕೆ ಆಸ್ಪತ್ರೆಗೆ ಭೇಟಿನೀಡಲು ನಿರ್ಧಾರಿಸಿದ್ದರು. ಆದರೆ ಅವರು ಬೆಳಗಿನ ಜಾವ ಶಿವೈಕ್ಯರಾಗಿದ್ದಾರೆಂಬ ಸುದ್ದಿ ಕೇಳಿ ಗುರುಗಳ ಮನಸ್ಸಿಗೆ ತುಂಬಾ ನೋವುಂಟಾಗಿತು. ಶಿಷ್ಯನನ್ನು ನೋಡಿ ಆರೋಗ್ಯವನ್ನು ವಿಚಾರಿಸಲಾಗಲಿಲ್ಲವೆಂಬ ಕೊರಗು ಗುರುವಿನದಾದರೆ, ಗುರುವಿನ ದರ್ಶನ ವಿಲ್ಲದೆ ಪ್ರಾಣಬೆಟ್ಟೆನಲ್ಲವೆಂಬ ಕೊರಗು ಶಿಷ್ಯನದ್ದು.

ಬೆಂಗಳೂರಿನ ಆಸ್ಪತ್ರೆಯಿಂದ ದಾವಣಗೆರೆಗೆ ಬರುವ ರಸ್ತೆಯ ಬದಿಯಲ್ಲಿ ಆಂಬುಲೆನ್ಸ್ ಗುರುಗಳ ಬರುವಿಕೆಗಾಗಿ ಕಾದಿತ್ತು. ಶ್ರೀ ಜಗದ್ಗುರುಗಳವರು ಪಂಚಣ್ಣನ ಪಾರ್ಥೀವ ಶರೀರಕ್ಕೆ ಪತ್ರೆ-ಪುಷ್ಪಗಳನ್ನು ಹಾಕುವ ಮೂಲಕ ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.

ಇದೇ ಸಂದರ್ಭದಲ್ಲಿ ಎದುರಿಗಿದ್ದ ಅವರ ಮಗಳು ಶ್ರೀಮತಿ ಪ್ರತಿಮಾ - “ಈ ಸಮಯಕ್ಕೆ 10:30ಕ್ಕೆ ನಿಮ್ಮ ದರ್ಶನವಾಗಬೇಕಿತ್ತು ಆದರೆ ಅವರು ಕಣ್ಣುಬಿಟ್ಟು ನೋಡಲಿಲ್ಲ ಬುದ್ದಿ  ಎಂದು ದುಃಖದಿಂದ ಶ್ರೀ ಗುರುಗಳ ಹತ್ತಿರ ಮಾತನಾಡಿದರು.



ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಸೇವೆಯನ್ನು ಮಾಡಿದ ಡಾಕ್ಟರ್ ಪಂಚಣ್ಣ ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಇವರ ಕುಟುಂಬ ವರ್ಗಕ್ಕೆ ದುಃಖವನ್ನು ಬರಿಸುವ ಶಕ್ತಿ ಭಗವಂತ ನೀಡಲೆಂದು  ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಂತಾಪ ಸೂಚಿಸಿರುತ್ತಾರೆ.