67 ನೆಯ ಕನ್ನಡ ರಾಜ್ಯೋತ್ಸವದ ಶುಭಾಶಯಗಳು : ಕವಿತೆ - ಕನ್ನಡದ ಕಾವ್ಯ ಕನ್ನಿಕೆ
ಇರುವ ಒಬ್ಬ ದೇವರಿಗೆ
ಗುಡಿ-ಚರ್ಚು-ಮಸೀದಿಯ ಕಟ್ಟಿ ಬಡಿದಾಡುವಿರೇತಕೆ?
ಸ್ವಾಮಿ-ಪಾದ್ರಿ-ಮೌಲ್ವಿಯ ನಿಂದನೆ ಏತಕೆ?
ಜಾತಿ-ಮತ-ಪಂಥಗಳ ಹೀಗಳೆದು
ಹೋಗುವೆ ಎಲ್ಲಿಗೆ?
ಬಿಡಿಸಲಾಗದ ಬವಣೆ ಇದು
ಈಗಿರುವ ಹಳೆಯ ಹಣೆಪಟ್ಟಿಗಳೇ ಸಾಕು!
ಭದ್ರ ಮತಪೆಟ್ಟಿಗೆ!
ನಿಲ್ಲಿಸು, ಹೊಸ ಹಣೆಪಟ್ಟಿ ಹಚ್ಚುವೆ ಏತಕೆ?
ಭ್ರಾಂತಿ ನಿನಗೆ!
ಬಾ ಬಾ ಬಾರ ಬಿಗುಮಾನ ಬಿಟ್ಟು ಹತ್ತಿರಕೆ
ಒಂದಾಗಿ ಕನ್ನಡದ ಕಾವ್ಯರಸಾಸ್ವಾದಕೆ!
-ಶ್ರೀ ತರಳಬಾಳು ಜಗದ್ಗುರು
ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು,
ಸಿರಿಗೆರೆ.