ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ತರಳಬಾಳು ಸಂಶೋಧನಾ ಅಧ್ಯಯನ ಕೇಂದ್ರ: ಕುಲಪತಿ ಡಾ. ಬಿ.ವಿ ಕುಂಬಾರ

  •  
  •  
  •  
  •  
  •    Views  

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯಲ್ಲಿ ತರಳಬಾಳು ಸಂಶೋಧನಾ ಅಧ್ಯಯನ ಕೇಂದ್ರ ಆರಂಭಿಸಲು ಸಿರಿಗೆರೆಯ ತರಳಬಾಳು ಶ್ರೀಗಳು ಸಮ್ಮತಿ ಸೂಚಿಸಿದ್ದಾರೆ ಎಂದು ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಡಾ. ಬಿ.ವಿ ಕುಂಬಾರ ತಿಳಿಸಿದರು.

ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ಆಯೋಜಿಸಿದ್ದ ಮಾಗನೂರು ಬಸಪ್ಪ ಅವರ ಸಂಸ್ಮರಣಾ ಗ್ರಂಥ ಹಾಗೂ ಅವರ ಆತ್ಮಚರಿತ್ರೆಯ ಹಿಂದಿ ಅನುವಾದಿತ ಕೃತಿಯನ್ನು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಈ ಸಂಶೋಧನಾ ಕೇಂದ್ರದಲ್ಲಿ ಮಾಗನೂರು ಬಸಪ್ಪ ಸೇರಿದಂತೆ ಎಲ್ಲ ಟ್ರಸ್ಟ್ ಗಳ  ಸಹಯೋಗದೊಂದಿಗೆ ವಿವಿಯು ಮಾದರಿ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದು ತಿಳಿಸಿದರು.

ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ,ಮಾಗನೂರು ಬಸಪ್ಪ ಅವರು ಗಾಂಧಿ ತತ್ವದಂತೆ ನಿಸ್ವಾರ್ಥ ಬದುಕು ನಡೆಸಿದರು. ಸಮಾಜದ ಹಿತಾಸಕ್ತಿ ಬಳಿಕವೇ ಸ್ವಂತ ಕೆಲಸಕ್ಕೆ ಆದ್ಯತೆ ನೀಡಿದ್ದರು. ದಾವಣಗೆರೆಯ ಅನುಭವ ಮಂಟಪ, ವಿದ್ಯಾಸಂಸ್ಥೆಗೆ ಅಸ್ತಿಭಾರ ಹಾಕಿದ್ದರು ಎಂದು ನೆನೆದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಚಿಂತಕ ಡಾ.ನಾ. ಲೋಕೇಶ ಒಡೆಯರ್ , ಡಾ.ಎಚ್.ವಿ.ವಾಮದೇವಪ್ಪ, ಡಾ. ಎಚ್.ಎಸ್.ಮಂಜುನಾಥ ಕುರ್ಕಿ, ಡಾ.ಎಂ. ಈಶ್ವರಶರ್ಮ, ಬಿ.ಎನ್.ಗೋವಿಂದರಾವ್ ಇದ್ದರು.