ಬಿ.ಎ ಪಾಟೀಲ್ ಉಚ್ಚ ನ್ಯಾಯಾಲಯದ ಗೌರವಾನ್ವಿತ ನಿವೃತ್ತ ನ್ಯಾಯಾಧೀಶರಿಗೆ : ಶ್ರೀ ಜಗದ್ಗುರುಗಳವರಿಂದ ಆಶೀರ್ವಾದ

  •  
  •  
  •  
  •  
  •    Views  

ಶ್ರೀ ಬಿ.ಎ ಪಾಟೀಲ್ ಗೌರವಾನ್ವಿತ ಮಾಜಿ ನ್ಯಾಯಾಧೀಶರು ಉಚ್ಚ ನ್ಯಾಯಾಲಯ ಹಾಗೂ ಹಾಲಿ ಅಧ್ಯಕ್ಷರು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಬೆಂಗಳೂರು ಇವರು ಸಿರಿಗೆರೆಯ ಶೀ ತಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ನ್ಯಾಯಮೂರ್ತಿಗಳಾದ ಬಿ. ಎ ಪಾಟೀಲ್ ರವರು ತಮ್ಮ ಮಗಳ ಮದುವೆಗೆ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು  ಆಹ್ವಾನಿಸಿದರು. ಇದೇ ಸಂದರ್ಭದಲ್ಲಿ ರೈತರ ಬಗ್ಗೆ ಮತ್ತು ಅವರ ಭೂಕಬಳಿಕೆಯ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದರು. ರೈತರು ದೇಶದ ಬೆನ್ನೆಲುಬು ಅವರ ಭೂಮಿಯನ್ನು ಯಾವುದೇ ರಾಜಕಾರಣಿಯಾಗಲಿ ಅಥವಾ ಸಿರಿವಂತರಾಗಲಿ ಕಬಳಿಗೆ ಮಾಡಬಾರದು. ರೈತರು ಬೆಳೆದರೆ ಮಾತ್ರ ದೇಶ ಸುಭಿಕ್ಷೆಯಾಗಿರುವುದು, ದೇಶಕ್ಕೆ ಅನ್ನ ದೊರೆಯುತ್ತದೆ. ಇಂತಹ ರೈತರ ಭೂಕಬಳಿಕೆ ನಿಷೇಧದ ವಿಶೇಷ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾಗಿರುವ ಬಿ.ಎ ಪಾಟೀಲ್ ರವರನ್ನು ಸನ್ಮಾನಿಸಿ ಆಶೀರ್ವದಿಸಿದರು.

ಪ್ರತಿ ಸೋಮವಾರ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ನಡೆಯುತ್ತಿರುವ ಸದ್ಧರ್ಮ ನ್ಯಾಯ ಪೀಠದ ಬಗ್ಗೆ ಅವರಿಗೆ ಈಗಾಗಲೇ ತಿಳಿದಿದ್ದು ಈ ವಿಚಾರವಾಗಿ ನಿವೃತ್ತ ಉಚ್ಛ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿಗಳು ಬಹಳ ಹರ್ಷವನ್ನು ವ್ಯಕ್ತಪಡಿಸಿದರು. ಸಾವಿರಾರು ಜನರಿಗೆ ಶ್ರೀಗಳು ನಡೆಸುತ್ತಿರುವ ಸದ್ಧರ್ಮ ನ್ಯಾಯ ಪೀಠದಿಂದ ಅನುಕೂಲಗಳಾಗಿವೆ ನ್ಯಾಯಾಲಯದಲ್ಲಿ ಬಗೆಹರಿಸಲಾಗದ ಸಮಸ್ಯೆಗಳು ಈ ಸದ್ಧರ್ಮ ನ್ಯಾಯ ಪೀಠದಲ್ಲಿ ಬಗೆಹರಿದಿವೆ ಎಂದು ಬಣ್ಣಿಸಿದರು.