ಕನ್ನಡದ ಅಪ್ರತಿಮ ಸೇವೆಗೆ ಹೆಸರಾದವರು ಡಾ. ಮಹಾದೇವ ಬಣಕಾರರು - ನಮ್ಮನ್ನಗಲಿ 22 ವರ್ಷಗಳಾದವು

  •  
  •  
  •  
  •  
  •    Views  

ಕವಿ, ನಾಟಕಕಾರ,ಆಧುನಿಕ ವಚನಕಾರ,  ಕನ್ನಡ ಹೋರಾಟಗಾರ  ಡಾ. ಮಹದೇವ ಬಣಕಾರ ಭೌತಿಕವಾಗಿ ನಮ್ಮನ್ನು ಅಗಲಿ ಇಂದಿಗೆ 22 ವರ್ಷಗಳಾದವು. "ಆಂಗ್ಲರ ಆಡಳಿತದಲ್ಲಿ ಕನ್ನಡ" ಎಂಬ ಮೇರುಕೃತಿ, ಮರುಳಸಿದ್ಧನನ್ನು ಮತ್ತು ಸಿರಿಗೆರೆ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಕುರಿತು ಭಾಮಿನಿ ಷಟ್ಪದಿಯಲ್ಲಿ ಮಹಾಕಾವ್ಯ ರಚಿಸಿದ ವರು. "ಎನ್ನ ವರಗುರು ಶಿವಕುಮಾರ ಪ್ರಭು" ಎಂಬ ಅಂಕಿತದಲ್ಲಿ ಸಾವಿರಾರು ಆಧುನಿಕ ವಚನಗಳನ್ನು ರಚಿಸಿದ್ದಾರೆ. ಅನೇಕ ಚಲನಚಿತ್ರಗಳಿಗೆ ಗೀತೆಗಳನ್ನು ರಚಿಸಿದ್ದಾರೆ. 

ಎರಡು ಅವಧಿಗೆ ಶಾಸಕರಾಗಿ ರಾಜಕಾರಣದಲ್ಲೂ ತಮ್ಮ ಛಾಪು ಮೂಡಿಸಿದ್ದರು. ಪಾಟೀಲ್ ಪುಟ್ಟಪ್ಪನವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದಾಗ ಇವರು ಸಮಿತಿಯ ಸದಸ್ಯರಾಗಿ ಅನನ್ಯ ಸೇವೆ ಸಲ್ಲಿಸಿದ್ದರು.  ಬಣಕಾರರ  "ಆಂಗ್ಲರ ಆಡಳಿತದಲ್ಲಿ ಕನ್ನಡ" ಕೃತಿ ಅವರ ಸಂಶೋಧನಾ ಆಸಕ್ತಿಗೆ ಸಾಕ್ಷಿ. ಬ್ರಿಟಿಷರ ಆಡಳಿತದ ಅವಧಿಯಲ್ಲಿ ಬ್ರಿಟಿಷ್ ಅಧಿಕಾರಿಗಳು ಕನ್ನಡ ಕಲಿತು ಕನ್ನಡದಲ್ಲಿ ಆಡಳಿತದ ಸುತ್ತೋಲೆಗಳನ್ನು ಹೊರಡಿಸುತ್ತಿದ್ದರು. ಅನ್ಯ ನೆಲದ ಅವರು ಇಲ್ಲಿಯ ಜನಭಾಷೆಯಲ್ಲಿ ಆಡಳಿತ ನಡೆಸುತ್ತಿದ್ದುದು ಅವರ ಯಶಸ್ಸಿನ ಸೂತ್ರವಾಗಿತ್ತು.  ಅದಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಬಣಕಾರರು ಸಂಶೋಧಿಸಿ  ಈ ಕೃತಿಯಲ್ಲಿ ಕನ್ನಡಿಗರಿಗೆ ಬ್ರಿಟಿಷರ ಮಾದರಿಯನ್ನು ಎತ್ತಿ ತೋರಿಸಿದ್ದಾರೆ. 

ಇದು ಮಹಾದೇವ ಬಣಕಾರರ ಕನ್ನಡದ ಅಪ್ರತಿಮ ಸೇವೆಗೆ ಸಾಕ್ಷಿಯಾಗಿದೆ.  ಬಣಕಾರರ ಸಾಹಿತ್ಯ, ಸಂಶೋಧನೆ, ಹೋರಾಟಕ್ಕೆ ಸಂದ ಪ್ರಶಸ್ತಿಗಳು ಹಲವು.  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುವೆಂಪು ವಿವಿಯ ಗೌರವ ಡಾಕ್ಟರೇಟ್, ತರಳಬಾಳು ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು  ಬಣಕಾರರ  ಮಕುಟವನ್ನು ಸಿಂಗರಿಸಿವೆ.

ಶಿಕ್ಷಕರು: 
ನಾಗರಾಜ ಸಿರಿಗೆರೆ