ವಿಭೂತಿ ಜ್ಞಾನದ ಸಂಕೇತ : ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ದೇವಿಹೊಸೂರು: ದಿನಾಂಕ 12-11-2022 “ವಿಭೂತಿ  ಮಹಿಮೆ ಅಪಾರ”, ವಿಭೂತಿ ಧರಿಸಿ, ತಂದೆ ತಾಯಿಗಳಿಗೆ ವಂದಿಸಿ ದಿನದ ವಿದ್ಯಾಭ್ಯಾಸ ಆರಂಭಿಸಬೇಕು” ಹಾಗೂ ನಿತ್ಯ ಜೀವನದಲ್ಲಿ ಭಕ್ತಿ ಭಾವ ತುಂಬಿದ ಮನಸ್ಸು ನಿಮ್ಮದಾಗಲಿ ಎಂದು ಶನಿವಾರ ನಡೆದ ಶ್ರೀ ನಿಂಗಪ್ಪ ಬಸಪ್ಪ ಕಬ್ಬೂರ ಪ್ರೌಢಶಾಲೆಯ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ1108 ಡಾ. ಶಿವಮೂರ್ತಿ ಶೀವಾಚಾರ್ಯ ಮಹಾಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.  

ಜಗತ್ತೀನ ಎಷ್ಟೇ ಭಾಷೆಗಳನ್ನು ಕಲಿತರೂ ಎಲ್ಲರೂ ಶುದ್ಧ ಕನ್ನಡ ಭಾಷೆ ಮಾತನಾಡುವ ಸೊಗಡು ಬೆಳೆಸಿಕೊಳ್ಳಬೇಕು ಬೆಂಗಳೂರಿನ ಮಕ್ಕಳಿಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂಬ ವಿಚಾರವನ್ನು ಹೇಳುವ ಪೋಷಕರಿಗೆ ನಾಚಿಕೆಯಾದೀತೇನೊ, ಹಾಗಂತ ಬೇರೆ ಭಾಷೆ ದ್ವೇಷಿಸಬೇಕಂದಲ್ಲ. ಮಾತೃ ಭಾಷೆಯ ಮೇಲೆ ಅಭಿಮಾನ ಇರಬೇಕು ಯಾರು ಕನ್ನಡದಲ್ಲಿ ಮಾತನಾಡುವುದಿಲ್ಲ ಅವರಿಗೆ ದಂಡ ಹಾಕಬೇಕು ಎಂಬ ಅಂಶವನ್ನು ತಿ.ನಂ.ಶ್ರೀ ಅವರ ವಿಚಾರಧಾರೆಯೊಂದಿಗೆ ಸ್ಪಷ್ಟಪಡಿಸಿದರು.

ಮನಸ್ಸಿನ ಮಾತನ್ನು ಕೇಳಬೇಕು ಎಂಬ ವಿಚಾರವನ್ನು ಎಂ.ಸಿ.ಚಾರ್ಲಾರವರ ಕಥೆ ಹೇಳುವುದರೊಂದಿಗೆ ಪ್ರೊ. ಜೋಶಿಯವರ ನಿದರ್ಶನದೊಂದಿಗೆ ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಮ್ಮುಖ ವಹಿಸಿದ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಮೂರುಸಾವಿರ ಮಠ ಹುಬ್ಬಳ್ಳಿ ಹಾಗೂ ವಿರಕ್ತ ಮಠ ಹಾನಗಲ್ಲ. ಮಕ್ಕಳನ್ನು ಉದ್ದೇಶಿಸಿ ವಿದ್ಯೆ ಉಳ್ಳವನ ಮುಖದ ಸೌಂದರ್ಯ ಬೇರೆ , ಕೇವಲ ವ್ಯಕ್ತಿಯ ಬಾಹ್ಯ ಸೌಂದರ್ಯ ನೋಡಿ ಅಳೆಯಬಾರದು  ಎನ್ನುವ ಅಂಶವನ್ನು ಅಷ್ಟಾವಕ್ರ ಕಥೆಯನ್ನು ಹೇಳುವುದರ ಮುಖಾಂತರ ಸಭೆ ಕುರಿತು ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟಕ ನುಡಿಯನ್ನು ನುಡಿದ ಶರಣ ಬಸವರಾಜ ಹೊರಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿಉತ್ತಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು. ಉದ್ಯೋಗ ಯಾವುದೆ ಆಗಿರಲಿ ಮಾನವೀಯ ಮೌಲ್ಯಗಳು ಜೀವನಕ್ಕೆ ಬೇಕು. ಎನ್ನುವ ಸಂದೇಶವನ್ನು ತಾವು “ಟೈಮ್ಸ ಆಪ್ ಇಂಡಿಯಾ” ದಿನ ಪತ್ರಿಕೆಯಲ್ಲಿ ಓದಿದ ತಾಯಿ ಮತ್ತು ನಾಯಿಯ ಕಥೆಯನ್ನು ಎಲ್ಲರ ಮನ ಮುಟ್ಟುವಂತೆ ಹೇಳಿದರು. ಹಾಗೆಯೇ ತರಳಬಾಳು ಗುರು ಪರಂಪರೆಯ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾದ ಶರಣ ಬಸವರಾಜ ನೀ ಶಿವಣ್ಣನವರ ಶಾಲೆ ನಡೆದು ಬಂದ ದಾರಿಯ ಬಗ್ಗೆಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಇದರ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.

ಇನ್ನೋರ್ವ ಅತಿಥಿಗಳಾದ ಶರಣ ವಿರುಪಾಕ್ಷಪ್ಪ ಬಳ್ಳಾರಿ ಶಾಸಕರು ಬ್ಯಾಡಗಿ. ಇವರು ತಾವು ಬಾಲ್ಯದಲ್ಲಿ ಕಷ್ಟ ಪಟ್ಟು ಓದಿದ್ದು ಅಂದಿನ ಶಿಕ್ಷಣದ ಸ್ಥತಿಗತಿಗಳು ಹೇಗಿದ್ದವು ಎಂಬುದನ್ನು ತಿಳಿಸಿ, ಇಂದಿನ ಮಕ್ಕಳು ಇರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾವಂತ ಜವಾಬ್ದಾರಿಯುತ ಪ್ರಜೆಗಳಾಗಿ ಬಾಳಲು ಕರೆ ನೀಡಿದರು.

ಕಾರ್ಯಕ್ರಮವು ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಸುವರ್ಣ ಮಹೋತ್ಸವ ಸಮಿತಿಯ ಅದ್ಯಕ್ಷರಾದ ಸುರೇಶ ಚ ಕಬ್ಬೂರ ರವರು ಶಾಲಾ ಇತಿಹಾಸದ ವರದಿ ವಾಚನ ಮಾಡಿದರು. ಶಾಲೆಯ ಮುಖ್ಯಗುರುಗಳಾದ ಸಿದ್ದಲಿಂಗಪ್ಪ.ಜಿ.ಎನ್ ರವರು ಸ್ವಾಗತಿಸಿದರು. ವೇದಿಕೆಯ ಮೇಲಿರುವ ಪರಮಪೂಜ್ಯರು ಮತ್ತು ಗಣ್ಯವ್ಯಕ್ತಿಗಳಿಂದ  ಉದ್ಘಾಟನೆಯು “ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ” ಎಂಬ ವಚನದೊಂದಿಗೆ ದೀಪ ಬೆಳಗುವುದರ ಮುಖಾಂತರ ನಡೆಯಿತು.

ನಂತರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತ ರಾದ ಮುಖ್ಯೋಪಾಧ್ಯಾಯರು ಮತ್ತು ಸಹಶಿಕ್ಷಕರು ಸಿಬ್ಬಂದಿ ವರ್ಗಕ್ಕೆ ಸನ್ಮಾನಿಸಲಾಯಿತು. ನಮ್ಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಶಿಕ್ಷಕರು ಸಿಬ್ಬಂದಿ ವರ್ಗಕ್ಕೂ,  ಹತ್ತನೇ ತರಗತಿಯಲ್ಲಿ ಪ್ರಥಮ ಬಂದ ವಿದ್ಯಾರ್ಥಿಗಳಿಗೂ(1974-75  ರಿಂದ 2021-22 ರ ವರೆಗೆ) ಶಾಲೆಯ ಏಳ್ಗೆಗಾಗಿ ಶ್ರಮಿಸಿದ ಸಮಿತಿಯ ಹಳೆಯ ಹಾಗೂ ಹೊಸ ಸದಸ್ಯರಿಗೆ ಹಾಗೂ ಶಾಲೆಯ ಹಳೆಯ ವಿದ್ಯರ್ಥಿಗಳಿಗೆ ಸನ್ಮಾನಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಚನ ನೃತ್ಯ, ಕನ್ನಡ ರಾಜ್ಯೋತ್ಸವ ನೃತ್ಯ ಹಾಗೂ ಕಿರು ಹಾಸ್ಯ ನಾಟಕಗಳು ಜನರನ್ನು ರಂಜಿಸಿದವು. ಕಾರ್ಯಕ್ರಮವನ್ನು ಸವಿತಾ ಆರ್ ಪಾಟೀಲ ಮತ್ತು ಶಶಿಧರ ಹೊಸಳ್ಳಿ ನಿರೂಪಿಸಿದರು.ಮಹಾಂತೇಶ ಹೊಸಳ್ಳಿ ಶಿಕ್ಷಕರು ವಂದನಾರ್ಪಣೆ ಮಾಡಿದರು.