ಶಾಲೆಯಲ್ಲಿ ಅಧ್ಯಯನ ಮಾಡುವ ಮಕ್ಕಳು ರಾಷ್ಟಪ್ರೇಮ ಬೆಳಸಿಕೊಳ್ಳಬೇಕು : ಶ್ರೀ ತರಳಬಾಳು ಜಗದ್ಗುರುಗಳವರು
ಹರಿಹರ ತಾ. ಹೊಳೆಸಿರಿಗೆರೆ ದಿನಾಂಕ 13-11-2022: ಪೋಷಕರು ಮಕ್ಕಳಿಗೆ ಯಾವ ಕಲಿಕೆಯಲ್ಲಿ ಆಸಕ್ತಿ ಇದೆಯೋ ಅದರಂತೆಯೇ ಕಲಿಯಲು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಅವಕಾಶ ಕಲ್ಪಸಿಕೊಡವುದು ತುಂಬಾ ಮುಖ್ಯವಾದುದು ಎಂದು ಶ್ರೀ ತರಳಬಾಳು ಬೃಹನ್ಮಠ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ನುಡಿದರು.
ಹರಿಹರ ತಾಲ್ಲೂಕು ಹೊಳೆಸಿರಿಗೆರೆ ಗ್ರಾಮದಲ್ಲಿ ಭಾನುವಾರ ನಡೆದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶ್ರೀ ಮಾಗೋಡ ಹಾಲಪ್ಪ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಮತ್ತು ನೂತನ ಶಾಲಾ ಕಟ್ಟಡದ ಉದ್ಘಾಟನೆ, ವಿಜ್ಙಾನ ಪ್ರಯೋಗಾಲಯ ಹಾಗೂ ಸ್ಮಾರ್ಟ ಕ್ಲಾಸ್ ಕೊಠಡಿಯನ್ನು ಉದ್ಘಾಟಿಸಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಬರುವ ವಿಧಾನಸಭೆ ಚುನಾವಣೆಯಲ್ಲಿ ದೇಶದ ಸಾರ್ವಭೌಮತ್ವಕ್ಕೆ ಯಾರು ಹೋರಾಟ ಮಾಡಿದ್ದಾರೋ ಅಂಥಹವರಿಗೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗೆ ಟಿಕೆಟ್ ಕೊಡುವ ನಿರ್ಣಯ ತೆಗೆದುಕೊಳ್ಳುಬೇಕು ಎಂದರು. ಹೊಳೆಸಿರಿಗೆರೆ ಗ್ರಾಮದವರೇ ಆದ ದಿ.ಕರ್ನಲ್ ರವೀಂದ್ರನಾಥ್ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡು ದೇಶಕ್ಕೆ ವಿಜಯ ತಂದು ಕೊಡುವದರ ಮೂಲಕ ದೇಶದ ಅತ್ಯುನ್ನತ ವೀರಚಕ್ರ ಪ್ರಶಸ್ತಿ ಪಡೆದು ಗ್ರಾಮಕ್ಕೆೆ, ರಾಜ್ಯಕ್ಕೆ, ಕೀರ್ತಿ ತಂದಿರುತ್ತಾರೆ. ಈ ಶಾಲೆಯಲ್ಲಿ ಅಧ್ಯಯನ ಮಾಡುವ ಮಕ್ಕಳು ರಾಷ್ಟçಪ್ರೇಮ ಬೆಳಸಿಕೊಳ್ಳಬೇಕೆಂದು ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಕಿವಿಮಾತು ಹೇಳಿದರು.
ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಿAದ 46,49,286 ರೂಗಳು, ಲಿಂ.ಕರ್ನಲ್ ಎಂ.ಬಿ.ರವೀಂದ್ರನಾಥ್ ಇವರ ಜ್ಙಾಪಕಾರ್ಥವಾಗಿ ಕುಟುಂಬ ವರ್ಗದವರಿಂದ 41,50,000 ರೂಗಳು, ಕಡ್ಲೆಪ್ಪರ ದಿ. ಶ್ರೀಮತಿ ರೇವಮ್ಮ ಕೋಂ ದಿ. ರೇವಣಪ್ಪ ಮತ್ತು ಸಹೋದರರು ಹಾಗೂ ಮಕ್ಕಳು 10,00,000 ರೂಗಳು ಹಾಗೂ ಹೊಳೆಸಿರಿಗೆರೆ, ಯಲವಟ್ಟಿ, ಕೆ.ಎನ್.ಹಳ್ಳಿ, ಸುತ್ತಮುತ್ತಲಿನ ಗ್ರಾಮದವರು 23,67,102 ರೂ ಗಳನ್ನು ದೇಣಿಗೆ ನೀಡಿದ್ದಾರೆ. ಒಟ್ಟು ಕಟ್ಟಡ ನಿರ್ಮಾಣಕ್ಕೆ 1,21,45,957 ರೂ ಗಳು ಖರ್ಚಾಗಿರುತ್ತವೆ.
ಕಾರ್ಯಕ್ರಮದಲ್ಲಿ ದಾವಣಗೆರೆಯ ಲೋಕಸಭೆ ಸದಸ್ಯರಾದ ಶ್ರೀ ಜಿ.ಎಮ್.ಸಿದ್ದೇಶ್ವರರವರು ಮಾತನಾಡಿ ಕರ್ನಲ್ ರವೀಂದ್ರನಾಥ್ ಇವರ ಜ್ಞಾಪಕಾರ್ಥವಾಗಿ ದಾವಣಗೆರೆಯಲ್ಲಿ ವೃತ್ತಕ್ಕೆ ಇವರ ಹೆಸರನ್ನು ಇಡಲಾಗಿದೆ ಎಂದು ಹೇಳಿದರು.
ಮಾಜಿ ಶಾಸಕರಾದ ಬಿ.ಪಿ.ಹರೀಶ್ ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹಿರಿಯ ಜಗದ್ಗುರುಗಳವರು ಶಿಕ್ಷಣದ ಮಹತ್ವವನ್ನು ಅರಿತು ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚು ಹೆಚ್ಚು ಶಾಲಾ-ಕಾಲೇಜುಗಳನ್ನು ಸ್ಥಾಪಿಸಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಕುಂದೂರು ಮಲ್ಲೇಶಪ್ಪನವರು ಅಧ್ಯಕ್ಷತೆಯನ್ನು ವಹಿಸಿದ್ದರು. ಬಿ.ಜೆ.ಪಿ ಜಿಲ್ಲಾ ಅಧ್ಯಕ್ಷರಾದ ಹನಗವಾಡಿ ವಿರೇಶ್, ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಮಾಗೋಡ ಓಂಕಾರಪ್ಪ, ಉಪಾಧ್ಯಕ್ಷರಾದ ಕಡೆಮನಿ ದೇವೇಂದ್ರಪ್ಪ, ನಿರ್ದೇಶಕರಾದ ರಾಜೇಂದ್ರರವರು, ಹಾಲಸ್ವಾಮಿ, ಸ್ಥಳೀಯ ಸಲಹಾ ಸಮಿತಿ ಸದಸ್ಯರಾದ ಕುಂದೂರು ಮಂಜಪ್ಪನವರು ಇವರಿಂದ ಕಾರ್ಯಕ್ರಮದ ವರದಿ ವಾಚನ, ಸ್ಥಳೀಯ ಸಲಹಾ ಸಮಿತಿ ಹಾಗೂ ನೂತನ ಕಟ್ಟಡ ಸಮಿತಿ ಎಲ್ಲಾ ಸದಸ್ಯರು, ಗ್ರಾಮದವರಾದ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಬೂದಾಳ್ ಹಾಲೇಶಪ್ಪ, ಹಿರಿಯರಾದ ಎನ್.ಜಿ.ನಾಗನಗೌಡ್ರು ಮತ್ತು ನೌಕರ ವೃಂದದವರು, ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.