ಹಾರುವ ನೊಣಕ್ಕೆ ಆಸೆ ಪಡುವ ಹಾವಿನ ಬಾಯ ಕಪ್ಪೆಗಳು!
ಇಡೀ ಜಗತ್ತು ಕೊರೊನಾ ಮಹಾಮಾರಿಯ ದವಡೆಯಲ್ಲಿ ಸಿಲುಕಿ ನಲುಗುತ್ತಿದೆ. ಹಾಗಿದ್ದರೂ ನಮ್ಮ ಜನರು ಪದೇ ಪದೆ ಎಚ್ಚರ ತಪ್ಪುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿರಿ ಎಂದು ಅವರ ಹಿತದೃಷ್ಟಿಯಿಂದ ಸರಕಾರ ಹೇಳಿದರೂ, ಪೊಲೀಸರು ಲಾಠಿ ಸವಿ ತೋರಿಸಿದರೂ, ಮಾಧ್ಯಮಗಳು ನಿರಂತರ ಬೊಬ್ಬೆಹೊಡೆದರೂ ಜನ ಜಪ್ಪಯ್ಯಾ ಎನ್ನುತ್ತಿಲ್ಲ, ಅರ್ಧ ಲೀಟರ್ ಉಚಿತ ಹಾಲಿಗೆ ನೂಕುನುಗ್ಗಲು, ಮಾರಾಮಾರಿ! ತರಕಾರಿಗೆ, ದಿನಸಿಗೆ, ಹಣ್ಣು ಹಂಪಲಿಗೆ ಮುಗಿ ಬೀಳುತ್ತಾರೆ. ಇದನ್ನೆಲ್ಲಾ ನೋಡುತ್ತಿದ್ದರೆ ನೆನಪಾಗುವುದು ಬಸವಣ್ಣನವರ ಈ ಕೆಳಗಿನ ವಚನ:
ಹಾವಿನ ಬಾಯ ಕಪ್ಪೆ ಹಸಿದು ಹಾರುವ ನೊಣಕ್ಕೆ ಆಸೆ ಮಾಡುವಂತೆ