ಅಹಿಂಸೆಯೇ ಜಗತ್ತಿನ ಶಾಂತಿಗೆ ಸೋಪಾನ
ವರ್ಷದ ಉದ್ದಕ್ಕೂ ನಾನಾ ಅಂತಾರಾಷ್ಟ್ರೀಯ ದಿನಗಳನ್ನು ಆಚರಿಸುವ ಪದ್ದತಿಯನ್ನು ವಿಶ್ವರಾಷ್ಟಸಂಸ್ಥೆ ಜಾರಿಗೆ ತಂದಿದೆ. ಈ ದಿನಗಳ ಆಚರಣೆಯು ಇಡೀ ವಿಶ್ವದಲ್ಲಿ ಆಯಾಯ ವಿಷಯದ ಬಗೆಗೆ ಜಾಗೃತಿ ಮೂಡಿಸುವುದೇ ಇದರ ಮೂಲ ಉದ್ದೇಶ - ವಿಶ್ವ ಪರಿಸರ ದಿನ, ವಿಶ್ವ ಮಹಿಳಾ ದಿನ, ವಿಶ್ವ ಸಾಕ್ಷರತಾ ದಿನ, ವಿಶ್ವ ವನ್ಯಜೀವಿ ದಿನ, ವಿಶ್ವ ಆರೋಗ್ಯ ದಿನ, ವಿಶ್ವ ತಾಯಂದಿರ ದಿನ, ಅಂತಾರಾಷ್ಟ್ರೀಯ ಯೋಗ ದಿನ ಇತ್ಯಾದಿ. ಹೀಗೆ ವರ್ಷದ ಉದ್ದಕ್ಕೂ ಆಚರಿಸಲಾಗುವ ನಾನಾ ಅಂತಾರಾಷ್ಟ್ರೀಯ ದಿನಾಚರಣೆಗಳು ಒಂದು ನಿರ್ದಿಷ್ಟ ವಿಷಯವೊಂದರ ಕುರಿತು ಯಾವುದೋ ಚಾರಿತ್ರಿಕ ಹಿನ್ನೆಲೆಯಲ್ಲಿ ರೂಪುಗೊಂಡಿರುವುದನ್ನು ಮನಗಾಣಬಹುದು. ಪ್ರತಿಯೊಂದು ದೇಶವೂ ತನ್ನದೇ ಆದ ಇತಿಹಾಸದ ಹಿನ್ನೆಲೆಯಲ್ಲಿ ಕೆಲವೊಂದು ದಿನಾಚರಣೆಗಳನ್ನು ಜಾರಿಗೆ ತಂದರೂ ಈ ಅಂತಾರಾಷ್ಟ್ರೀಯ ದಿನಾಚರಣೆಗಳಿಗೆ ಯಾವುದೇ ದೇಶದ ಗಡಿಬಾಂದುಗಳ ಪರಿಮಿತಿ ಇಲ್ಲ. ಎಲ್ಲ ದೇಶಗಳ ಜನರು ಇದರಲ್ಲಿ ಭಾಗಿಯಾಗುತ್ತಾರೆ; ಎಲ್ಲ ದೇಶಗಳ ಸರಕಾರಗಳು ಈ ದಿನಾಚರಣೆಗಳಲ್ಲಿ ಕೈಜೋಡಿಸುತ್ತವೆ. ಅಂತಹ ಎರಡು ಪ್ರಮುಖ ದಿನಾಚರಣೆಗಳೆಂದರೆ ಇತ್ತೀಚೆಗೆ ಸೆಪ್ಟೆಂಬರ್ 21 ರಂದು ಆಚರಿಸಿದ ಅಂತಾರಾಷ್ಟ್ರೀಯ ಶಾಂತಿದಿನ ಮತ್ತು ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ದಿನ ಆಚರಿಸಿದ ಅಂತಾರಾಷ್ಟ್ರೀಯ ಅಹಿಂಸಾ ದಿನ.
ಶಾಂತಿಯು ಜಗತ್ತಿನ ಎಲ್ಲ ಜನರಿಗೂ ಅಗತ್ಯವಾಗಿ ಬೇಕು. ಪ್ರತಿ ವರ್ಷ ಸೆಪ್ಟೆಂಬರ್ 21ನ್ನು ಅಂತಾರಾಷ್ಟ್ರೀಯ ಶಾಂತಿದಿನವನ್ನಾಗಿ ಘೋಷಣೆ ಮಾಡಿದ್ದು 1981ರಲ್ಲಿ ಪ್ರಥಮ ಶಾಂತಿ ದಿನಾಚರಣೆಯನ್ನು 1982ರಲ್ಲಿ ಆಚರಿಸಲಾಯಿತು. ಶಾಂತಿಯ ಮಹತ್ವವನ್ನು ಕುರಿತು ಜಗತ್ತಿನ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಈ ಆಚರಣೆಯ ಉದ್ದೇಶವಾಗಿದೆ. ಆಲಿವ್ ಮರದ ಚಿಕ್ಕ ಹಸಿರು ಎಲೆಯ ಟೊಂಗೆಯನ್ನು ತನ್ನ ಕೊಕ್ಕಿನಲ್ಲಿ ಕಚ್ಚಿ ಹಿಡಿದು ಹಾರುವ ಬಿಳಿಯ ಬಣ್ಣದ ಪಾರಿವಾಳವನ್ನು ಶಾಂತಿ ದಿನಾಚರಣೆಯ ಸಂಕೇತವಾಗಿ ಬಳಸಲಾಗುತ್ತಿದೆ. ಯುದ್ದ ಮತ್ತು ಹಿಂಸೆಯಿಂದ ಮುಕ್ತವಾದ ಶಾಂತಿಗಾಗಿ ಈ ದಿನವನ್ನು ಸಮರ್ಪಿಸಲಾಗಿದೆ. ವಿಶ್ವರಾಷ್ಟ್ರ ಸಂಸ್ಥೆಯು ಜಗತ್ತಿನ ಜನರೆಲ್ಲರಿಗೂ ಪರಸರ ಗೌರವವನ್ನು ಕೊಡಲು ಕರೆ ಕೊಟ್ಟಿದೆ. ಹಾಗೆ ಜನರು ಪರಸ್ಪರ ಗೌರವವನ್ನು ಕೊಟ್ಟಾಗ ಮಾತ್ರ ವಿಶ್ವದಲ್ಲಿ ಶಾಂತಿಯ ವಾತಾವರಣ ನೆಲೆಗೊಳ್ಳುವುದು ಸಾಧ್ಯ. ಒಂದು ಮತ್ತು ಎರಡನೆಯ ಮಹಾಯುದ್ಧಗಳು ಜಗತ್ತಿನಲ್ಲಿ ಅತಿ ದೊಡ್ಡ ದುರಂತಗಳನ್ನು ಸೃಷ್ಟಿಸಿದ್ದು ಅವುಗಳ ದುಷ್ಪರಿಣಾಮಗಳನ್ನು ಜನರು ಇಂದಿಗೂ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶ ದೇಶಗಳು ಜನರಿಗೆ ಶಾಂತಿಯ ಮಹತ್ವವನ್ನು ಕುರಿತು ಜಾಗೃತಿ ಮೂಡಿಸಲು ಅನೇಕ ಸಭೆ ಸಮಾರಂಭಗಳನ್ನು ಈ ದಿನ ಹಮ್ಮಿಕೊಳ್ಳುತ್ತವೆ. ಶಾಲಾ ಕಾಲೇಜುಗಳೂ ಶಾಂತಿಯ ಮಹತ್ವನ್ನು ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತವೆ. ಪ್ರಪಂಚದಾದ್ಯಂತ ವಿಶೇಷ ಕಾರ್ಯಕ್ರಮಗಳು ಅಂದು ಜರುಗುತ್ತವೆ. ಗೌರವ ಮತ್ತು ಪ್ರೀತಿಗಳಿಂದ ಮಾತ್ರ ನಾವು ಈ ಭೂಮಿಯನ್ನು ಮುಂದಿನ ಪೀಳಿಗೆ ಸುಖವಾಗಿ ಬಾಳಲು ತಕ್ಕ ನೆಲೆಯನ್ನಾಗಿ ಮಾಡಲು ಸಾಧ್ಯ.
ಮಹಾತ್ಮ ಗಾಂಧೀಜಿ ಅವರ ಜನ್ಮ ದಿನವಾದ ಅಕ್ಟೋಬರ್ 2ನ್ನು 2007 ರಿಂದ ಅಂತಾರಾಷ್ಟ್ರೀಯ ಅಹಿಂಸಾ ದಿನ'ವನ್ನಾಗಿ ಆಚರಿಸಲಾಗುತ್ತಿದೆ. ಅನ್ಯಾಯವಿದ್ದಲ್ಲಿ ಪ್ರತಿಭಟನೆ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಅನೇಕ ವೇಳೆ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪವನ್ನು ಪಡೆಯುತ್ತವೆ. ಅಂತಹ ಪ್ರತಿಭಟನೆಗಳನ್ನು ಜಗತ್ತಿನೆಲ್ಲೆಡೆ ಎಲ್ಲ ಕಾಲದಲ್ಲೂ ಹಿಂಸೆಯಿಂದಲೇ ಹತ್ತಿಕ್ಕಿರುವುದನ್ನು ನೋಡಬಹುದು. ಹಿಂಸಾತ್ಮಕ ಪ್ರತಿಭಟನೆಯನ್ನು ಅಧಿಕಾರಾರೂಢರು ಹಿಂಸೆಯಿಂದಲೇ ಹತ್ತಿಕ್ಕುತ್ತಾರೆ. ಆದರೆ, ಅಹಿಂಸಾತ್ಮಕ ಪ್ರತಿಭಟನೆಯನ್ನು ಹಿಂಸೆಯಿಂದ ಹತ್ತಿಕ್ಕುವುದು ಕಷ್ಟ ಎಂಬುದನ್ನು ಗಾಂಧೀಜಿ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಹಿಂಸೆಯಿಂದ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಮಣಿಸುವುದು ಸಾಧ್ಯವಿಲ್ಲವೆಂಬುದನ್ನು ಅವರು ಚೆನ್ನಾಗಿ ಅರಿತಿದ್ದರು. ಆದ್ದರಿಂದಲೇ ಅವರು ತಮ್ಮ ಪ್ರತಿಭಟನೆಗೆ ಅಹಿಂಸಾತ್ಮಕ ಹೋರಾಟವನ್ನೇ ಆಯ್ಕೆ ಮಾಡಿಕೊಂಡರು. An eyeforan eye anda tooth foratooth (ಕಣ್ಣುಕಿತ್ತವನ ಕಣ್ಣು ಕೀಳು, ಹಲ್ಲು ಮುರಿದ ವನ ಹಲ್ಲು ಮುರಿ) ಎನ್ನುವ ಸೇಡಿನ ಮನೋಭಾವವನ್ನು ಬಿಟ್ಟು 'ಎಡಗೆನ್ನೆಗೆ ಹೊಡೆದರೆ ಬಲಗೆನ್ನೆಯನ್ನು ಒಡ್ಡು' ಎನ್ನುವ ಏಸುಕ್ರಿಸ್ತನ ಸಂದೇಶ ದೌರ್ಬಲ್ಯದ ಸಂಕೇತ ಅಲ್ಲ, ಹಾಗೆ ನಡೆದುಕೊಳ್ಳುವುದು ಆತ್ಮಸಂಯಮದ ಹೆಗ್ಗುರುತು. ಅಂತಹ ಆತ್ಮಬಲ ಉಳ್ಳವರಾಗಿದ್ದ ಗಾಂಧೀಜಿ ಅಹಿಂಸೆ ಮತ್ತು ಅಸಹಕಾರದ ಮೂಲಕವೇ ಸೂರ್ಯ ಮುಳುಗದ ವಿಶ್ವದ ಅತಿ ದೊಡ್ಡ ಸಾಮ್ರಾಜ್ಯದ ದೈತ್ಯ ಮಿಲಿಟರಿ ಶಕ್ತಿಯನ್ನು ಮಣಿಸಿದ್ದು ಈಗ ಇತಿಹಾಸ.
ಶಾಂತಿ ದಿನವಾದ ಸೆಪ್ಟೆಂಬರ್ 21ರಿಂದ ಅಹಿಂಸಾ ದಿನವಾದ ಅಕ್ಟೋಬರ್ 2ರವರೆಗೆ Peace to Non-violence (ಶಾಂತಿ ಯಿಂದ ಅಹಿಂಸೆಯೆಡೆಗೆ) ಎಂಬ ವಿಷಯ ಕುರಿತು Universal Peace Federation ಎಂಬ ಒಂದು ಅಂತಾರಾಷ್ಟ್ರೀಯ ಸಂಸ್ಥೆ ಈ ತಿಂಗಳ ಆರಂಭದಲ್ಲಿ ಅಂತರ್ಜಾಲದಲ್ಲಿ ಒಂದು ವೆಬಿನಾರ್ ನಡೆಸಿತು. ಇದರಲ್ಲಿ ನಮ್ಮನ್ನೂ ಒಳಗೊಂಡಂತೆ ದೇಶ ವಿದೇಶಗಳ ಅನೇಕ ಧಾರ್ಮಿಕ ಮುಖಂಡರು ತಾವಿದ್ದ ಸ್ಥಳದಿಂದಲೇ Zoomನಲ್ಲಿ login - ಒಳ್ಳೆಯ ಸಂದೇಶಗಳನ್ನು ನೀಡಿದರು. ವೆಬಿನಾ ಶೀರ್ಷಿಕೆ ಆಕರ್ಷಕವಾಗಿದ್ದು ನಮ್ಮನ್ನು ಆಲೋಚನಾಪರರನ್ನಾಗಿ ಮಾಡಿತು. ಕ್ಯಾಲೆಂಡರ್ ಪ್ರಕಾರ ಮೊದಲು 'ಶಾಂತಿದಿನ' ಬರುತ್ತದೆ, ನಂತರ 'ಅಹಿಂಸಾ ದಿನ'. ಆದರೆ ಶಾಂತಿಯಿಂದ ಅಹಿಂಸೆಯೋ, ಅಹಿಂಸೆಯಿಂದ ಶಾಂತಿಯೋ? ಯಾವುದು ಮೊದಲು ಯಾವುದು ನಂತರ? ಎಂಬುದು ಇಲ್ಲಿನ ಚಿಂತನಾರ್ಹ SHAPING PEACE TOGETHER INTERNATIONAL DAY OF 02 OCTOBER NON-VIOLENCE UHA ಪ್ರಶ, ಶಾಂತಿ ಇದ್ದಡೆಯಲ್ಲಿ ಹಿಂಸೆಗೆ ತಾಣವಿಲ್ಲ, ಹಿಂಸೆ ಇದೆಡೆಯಲ್ಲಿ ಶಾಂತಿ ಇರಲು ಸಾಧ್ಯವಿಲ್ಲ. ಹಿಂಸೆ ತಾಂಡವವಾಡುವ ಸ್ಥಳದಲ್ಲಿ ಶಾಂತಿಯ ಅಗತ್ಯವಿರುತ್ತದೆ. ಕ್ಯಾಲೆಂಡರ್ ಪ್ರಕಾರ ಶಾಂತಿದಿನದ ನಂತರ ಅಹಿಂಸಾದಿನ ಬಂದರೂ ವಾಸ್ತವವಾಗಿ ಅಹಿಂಸೆಯೇ ಮೊದಲು, ಶಾಂತಿಯೇ ನಂತರದ್ದು, ಅಹಿಂಸೆಯೇ ಶಾಂತಿಯ ಮೂಲವೆಂದರೆ ತಪ್ಪಿಲ್ಲ, ಶಾಂತಿ ಎಂಬುದು ಗುರಿಯಾದರೆ ಅದನ್ನು ಸಾಧಿಸಲು ಅಗತ್ಯವಾದ ಹಾದಿಯ ಅಹಿಂಸೆ. ಮೇಲ್ನೋಟಕ್ಕೆ ಶಾಂತಿ ಇದ್ದಡೆಯಲ್ಲಿ ಹಿಂಸೆಗೆ ಅವಕಾಶ ನಿಲ್ಲವಾದರೂ ಶಾಂತಿ ನೆಲೆಗೊಳ್ಳಲು ಬೇಕಾದ ಭದ್ರ ಬುನಾದಿಯೇ ಅಹಿಂಸೆ. ಎಲ್ಲರೂ ಅಹಿಂಸಾ ಮಾರ್ಗವನ್ನು ಅನುಸರಿಸಿದರೆ ಶಾಂತಿಯು ತಂತಾನೇ ನೆಲೆಗೊಳ್ಳುತ್ತದೆ. ಅಹಿಂಸೆಯೆಂಬ ಸಾತ್ವಿಕ ಗುಣವನ್ನು ಮೈಗೂಡಿಸಿಕೊಳ್ಳದೆ ಶಾಂತಿಯನ್ನು ಮುಟ್ಟಿಲುಬಾರದು.
ದ್ವೇಷ ಮತ್ತು ಸೇಡಿನ ಮನೋಭಾವ ಉಳ್ಳವರು ಜೀವನದಲ್ಲಿ ಎಂದೂ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಕೆಟ್ಟ ಆಲೋಚನೆಗಳಿಂದ ಪ್ರದೂಷಿತವಾದ ಅವರ ಮನಸ್ಸು ಕೆಟ್ಟ ಕಾರ್ಯಗಳತ್ತ ಪ್ರಚೋದಿಸುತ್ತದೆಯೇ ಹೊರತು ಎಂದೂ ಒಳ್ಳೆಯ ಕಾರ್ಯಗಳತ್ತ ಪ್ರೇರೇಪಿಸುವುದಿಲ್ಲ, ಶಾಂತಿಯಿಂದ ಸುಖವನ್ನು ಪಡೆಯಬಹುದೇ ಹೊರತು ಹಿಂಸೆಯಿಂದ ಸುಖವನ್ನು ಪಡೆಯಲು ಸಾಧ್ಯವಿಲ್ಲ. ಹಿಂಸೆ ಮತ್ತು ಕ್ರೌರ್ಯದಿಂದಲೂ 'ಸುಖ'ವನ್ನು ಪಡೆಯುವವರು ಕೆಲವರು ಇದ್ದಾರೆ. ಆದರೆ ಅವರದು 'ವಿಕೃತ ಸುಖ'ವೇ (wicked pleasure) ಹೊರತು ನಿಜವಾದ ಸುಖ ಅಜ್ಜ ಇನ್ನೊಬ್ಬರ ಮೈಯನ್ನು ಚಿವುಟಿ ಏನೂ ಮಾಡದವನಂತೆ ನಟಿಸುವ ವ್ಯಕ್ತಿ ತನಗೆ ತಾನೇ ಆತ್ಮದ್ರೋಹವನ್ನು ಮಾಡಿಕೊಳ್ಳುತ್ತಾನೆ. ಯಾರು ಚಿವುಟುತ್ತಾರೆಂದು ಪತ್ತೆ ಹಚ್ಚಲು ಹೋಗಿ ಜಗಳ ತಂದುಕೊಳ್ಳುವ ಬದಲು ಅಂತಹ ವ್ಯಕ್ತಿಗಳಿಂದ ದೂರ ಇರುವುದು ಒಳ್ಳೆಯದು. ಅಂಥವರನ್ನು ಕುರಿತು ಬಸವಣ್ಣನವರು ಹೇಳುವ ಒಂದು ಹಿತನುಡಿ:
ಸಾರ, ಸಜ್ಜನರ ಸಂಗವ ಮಾಡುವುದು,