ತರಳಬಾಳು ಶ್ರೀವಾಣಿ : ಸತ್ಯ ಮತ್ತು ಧರ್ಮ

  •  
  •  
  •  
  •  
  •    Views  

ಸತ್ಯ ಮತ್ತು ಧರ್ಮ ಎಂಬ ಪದಗಳು ಬೇರೆ ಬೇರೆಯಾಗಿ ಕಂಡುಬಂದರೂ ಅವೆರಡೂ ತಾತ್ವಿಕವಾಗಿ ಒಂದೇ, ಬೇರೆ ಬೇರೆಯಲ್ಲ. ಸತ್ಯದ ಇನ್ನೊಂದು ಮುಖವೇ ಧರ್ಮ ಅಥವಾ ಸತ್ಯದ ಸಾಕ್ಷಾತ್ಕಾರವೇ ಧರ್ಮ. ಸತ್ಯ ಕೇವಲ ನುಡಿಯಾಗಿ ಉಳಿಯದೆ ನಡೆಯಾಗಿ ಗಟ್ಟಿಗೊಳುವ ವಿಶಿಷ್ಟ ಪ್ರಕ್ರಿಯೆಯೇ ಧರ್ಮ, ಯಾವುದನ್ನು ನಾವು ಧರ್ಮ ಎಂದು ತಿಳಿದು ಗೌರವಿಸುತ್ತೇವೆಯೋ ಅದು ಸತ್ಯವನ್ನು ಬಿಟ್ಟು ಬೇರೆ ಅಲ್ಲ. ಇದನ್ನು ಇನ್ನೊಂದು ಪ್ರಮುಖ ಉಪನಿಷತ್ತಾದ ಬೃಹದಾರಣ್ಯಕವು ನಿರ್ದುಷ್ಟವಾದ ಶಬ್ದಗಳಲ್ಲಿ ಹೀಗೆ ಹೇಳುತ್ತದೆ: “ಯೋ ವೈ ಸ ಧರ್ಮ: ಸತ್ಯಂ ವೈ ತತ್ (1.4.14). ಸತ್ಯವು ಧರ್ಮಕ್ಕಿಂತ ಬೇರೆಯಾಗಿರಲು ಸಾಧ್ಯವಿಲ್ಲ. ಹಾಗೇನಾದರೂ ಅದು ಬೇರೆ ಎಂದು ಕಂಡುಬಂದರೆ ಅದು ಸತ್ಯವಾಗಿರಲು ಸಾಧ್ಯವಿಲ್ಲ. ಸತ್ಯವನ್ನು ನುಡಿದರೆ ಧರ್ಮದಿಂದ ನಡೆದಂತೆ; ಧರ್ಮದಿಂದ ನಡೆದರೆ ಸತ್ಯವನ್ನು ನುಡಿದಂತೆ. ಆದ್ದರಿಂದ ಸತ್ಯ ಮತ್ತು ಧರ್ಮ ಒಂದೇ ಹೊರತು ಬೇರೆ ಬೇರೆ ಅಲ್ಲ. (ಸತ್ಯಂ ವದಂತಂ ಆಹುಃ ಧರ್ಮಂ ವದತೀತಿ | ಧರ್ಮಂ ವಾ ವದಂತಂ ಸತ್ಯಂ ವದತೀತಿ).

 -ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.