ತರಳಬಾಳು ಶ್ರೀಗಳ ಪ್ರಯತ್ನದಿಂದ ಜರ್ಮನಿಯಿಂದ ಸಂತೋಷ್ ಮೃತದೇಹ ತರಲು ಸಾಧ್ಯವಾಯಿತು

  •  
  •  
  •  
  •  
  •    Views  

ದಾವಣಗೆರೆ: ಜರ್ಮನಿ ದೇಶದ ಕೆಮ್ನಿಟ್ಜ್ ನಗರದಲ್ಲಿ ನಡೆದ ವಿದ್ಯುತ್ ಅವಘಡದಲ್ಲಿ ದಾವಣಗೆರೆಯ ಯುವಕ ಕೊನೆಯುಸಿರೆಳೆದ ಘಟನೆ ನಡೆದಿದ್ದು, ಸುಮಾರು 16ದಿನಗಳ ಬಳಿಕ ಮೃತದೇಹ ದಾವಣಗೆರೆಗೆ ಬಂದಿದೆ. ಪುತ್ರನ ಮುಖ ನೋಡುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ನಗರದ ಸರಸ್ವತಿ ಬಡಾವಣೆಯ ಪಂಚಮುಖ ರಸ್ತೆಯಲ್ಲಿ ವಾಸವಿರುವ ಶಿಕ್ಷಕ ದಂಪತಿ ಕೊಟ್ರಪ್ಪ ರೇವಪ್ಪ ಹಾಗೂ ಎ. ಇಂದಿರಮ್ಮರ ಪುತ್ರ ಸಂತೋಷ್ ಕುಮಾರ್ (35) ಮೃತಪಟ್ಟ ದುರ್ದೈವಿ. ಹರಪನಹಳ್ಳಿ ತಾಲೂಕಿನ ಪುಣಬಘಟ್ಟೆ ಜಮೀನಿನಲ್ಲಿ ಡಿ.16ರಂದು ಅಂತ್ಯಕ್ರಿಯೆ ನೆರವೇರಿತು.

ಕೆ.ರೇವಪ್ಪ, ಎ.ಆರ್.ಇಂದಿರಮ್ಮ ಇಬ್ಬರೂ ಶಿಕ್ಷಕರು. ದಾವಣಗೆರೆಯಲ್ಲಿ ರೇವಪ್ಪ ಶಿಕ್ಷಕರಾದರೆ,ಇಂದಿರಮ್ಮ ಆವರಗೆರೆ ಸರ್ಕಾರಿ ಶಾಲೆಯಲ್ಲಿ ಟೀಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಪುತ್ರನಾದ ಸಂತೋಷ್ ಜರ್ಮನಿಗೆ ಹೋಗಿದ್ದರು. ಅಲ್ಲಿನ ಕೆಮ್ನಿಟ್ಜ್ ನಗರದಲ್ಲಿ ಪಿಜಿಯೊಂದರಲ್ಲಿ ರೂಂ ಮಾಡಿಕೊಂಡಿದ್ದರು. ಎಂ. ಎಸ್. ಓದಿದ್ದ ಸಂತೋಷ್ ತರಬೇತಿ ಪಡೆಯುವ ಸಲುವಾಗಿ ಹೋಗಿದ್ದರು. ಕಳೆದ ಏಪ್ರಿಲ್ ತಿಂಗಳಲ್ಲಿ ದಾವಣಗೆರೆಗೆ ಬಂದಿದ್ದ ಸಂತೋಷ್ ಗೆ ಮದುವೆ ಮಾಡಬೇಕೆಂದು ಪೋಷಕರು ಒತ್ತಡ ಹೇರಿದ್ದರು. ಇದಕ್ಕೆ ಸಂತೋಷ್ ಸಮ್ಮತಿ ಸೂಚಿಸಿದ್ದ. ಮುಂದಿನ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಮದುವೆ ಮಾಡುವ ಯೋಜನೆ ಹಾಕಿಕೊಂಡಿದ್ದರು. ಆದ್ರೆ ವಿಧಿಯಾಟವೇ ಬೇರೆಯಾಗಿತ್ತು. ಬಾರದೂರಿಗೆ ಹೋಗಿರುವ ಸಂತೋಷ್ ನೆನಪು ಮಾಡಿಕೊಂಡು ಪೋಷಕರು, ಕುಟುಂಬಸ್ಥರು, ಸ್ನೇಹಿತರು ಕಣ್ಣೀರು ಸುರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ್ದ ಸಂತೋಷ್ ಹೆಚ್ಚಿನ ವಿದ್ಯಾಭ್ಯಾಸ, ಉದ್ಯೋಗದ ನಿಮಿತ್ತ ತರಬೇತಿ ಪಡೆಯಲು ಹೋಗಿದ್ದರು.

ರೇವಪ್ಪ ಹಾಗೂ ಇಂದಿರಮ್ಮ ದಂಪತಿ ಮೊದಲ ಪುತ್ರ ಕಳೆದ ಆರು ವರ್ಷಗಳ ಹಿಂದೆ ಹೊಸದಾಗಿ ಖರೀದಿಸಿದ್ದ ರಾಯಲ್ ಎನ್ ಫೀಲ್ಡ್ ನಲ್ಲಿ ಧರ್ಮಸ್ಥಳಕ್ಕೆ ಹೋಗಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ವಾಪಸ್ ಬರುವ ವೇಳೆ ಚನ್ನಗಿರಿಯ ನಲ್ಲೂರು ಬಳಿ ಅಪಘಾತಕ್ಕೀಡಾಗಿ ಮೊದಲ ಪುತ್ರ ಶ್ರೀಧರ್ ಸಾವನ್ನಪ್ಪಿದ್ದ. ಈಗ ಎರಡನೇ ಪುತ್ರ ಕಳೆದುಕೊಂಡಿದ್ದಾರೆ.

ಜರ್ಮನಿಯಲ್ಲಿ ನಡೆದಿದ್ದೇನು…?

ಜರ್ಮನಿಯ ಕೆಮ್ ನಿಟ್ಜ್ ನಲ್ಲಿ ಮೂರ್ನಾಲ್ಕು ರೂಂ ಕೊಠಡಿಯೊಂದರಲ್ಲಿ ಈತನೂ ಒಂದು ರೂಂನಲ್ಲಿದ್ದ. ಆದ್ರೆ ಕಿಚನ್ ಮಾತ್ರ ಒಂದೇ ಇತ್ತು. ಇಲ್ಲೇ ಎಲ್ಲರೂ ಅಡುಗೆ ಮಾಡಿಕೊಳ್ಳುತ್ತಿದ್ದರು. ನವೆಂಬರ್ 29ರ ರಾತ್ರಿ ಫುಟ್ಬಾಲ್ ಪಂದ್ಯ ಇದ್ದ ಕಾರಣ ರಾತ್ರಿ ಸಂತೋಷ್ ತಡವಾಗಿ ಮಲಗಿದ್ದ. ಕಾಲ್ಚೆಂಡಿನ ಆಟದ ಬಗ್ಗೆ ಅಭಿಮಾನ ಇದ್ದ ಸಂತೋಷ್ ಪಂದ್ಯ ಮುಗಿದ ಮೇಲೆ ಮಲಗಿದ್ದ. ಆದ್ರೆ 30ರ ಬೆಳಿಗ್ಗೆ 7.15ರ ಜಪಾನಿನ ಕಾಲಮಾನದ ಪ್ರಕಾರ ಶಾರ್ಟ್ ಸರ್ಕ್ಯೂಟ್ ಆಗಿದೆ. ಆಗ ಗಾಢ ನಿದ್ರೆಯಲ್ಲಿದ್ದ ಸಂತೋಷ್ ಗೆ ಗೊತ್ತಾಗಿರಲಿಲ್ಲ. ಹೊಗೆ ತುಂಬಿಕೊಂಡ ಕಾರಣ ಉಸಿರು ಕಟ್ಟಿದೆ. ಆಮ್ಲಜನಕ ಸಿಗದೇ ಒದ್ದಾಡಿದ್ದ ಸಂತೋಷ್, ಶೀತ ಗಾಳಿ ಹೆಚ್ಚಿರುವ ಕಾರಣ ರೂಂ ಬಾಗಿಲು ಸಂಪೂರ್ಣ ಬಂದ್ ಮಾಡಲಾಗಿತ್ತು. ಅಲ್ಲಿನ ಕಾವಲುಗಾರ ಆಸ್ಪತ್ರೆಗೆ ಕರೆದೊಯ್ದರೂ ಜೀವಉಳಿಯಲಿಲ್ಲ.

ಮನೆಯವರು ಕರೆ ಮಾಡಿದಾಗ ಸ್ವೀಕರಿಸಿಲ್ಲ. ಜರ್ಮನಿಯಲ್ಲಿ ಓದಿ ದಾವಣಗೆರೆಯಲ್ಲಿದ್ದ ಸಂತೋಷ್ ಸ್ನೇಹಿತನ ಮೂಲಕ ಜರ್ಮನಿಯಲ್ಲಿ ವಿಚಾರಿಸಲಾಗಿದೆ. ಆ ಬಳಿಕ ವಿಷಯ ಗೊತ್ತಾಗಿದೆ. ಇನ್ನು ಮೃತದೇಹ ತರಲು ಸಾಕಷ್ಟು ಶ್ರಮ ವಹಿಸಲಾಗಿದೆ. ಸಂಸದ ಜಿ.ಎಂ.ಸಿದ್ದೇಶ್ವರ್. 

ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಪ್ರಯತ್ನದಿಂದ ಮೃತದೇಹ ತರಲು ಸಾಧ್ಯವಾಗಿದೆ ಎಂದು ಸಂತೋಷ್ ಸಂಬಂಧಿಕರಾದ ಮೆಳ್ಳಿಕಟ್ಟೆ ನಾಗರಾಜ್ ತಿಳಿಸಿದರು. ದಿನಾಂಕ 7-12-2022 ರಂದು ಸಂಜೆ ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ಶ್ರೀ ಜಗದ್ಗುರುಗಳವರು ಮೊಕ್ಕಾಂ ಮಾಡಿದ್ದಾಗ ಜರ್ಮನ್ ನಲ್ಲಿ ಅಗ್ನಿ ದುರಂತದಿಂದ ಮೃತರಾದ ಸಂತೋಷ್ ಇವರ ಅಣ್ಣ ಸಿದ್ದೇಶ್ ಬಂದು ಪಾರ್ಥಿವ ಶರೀರವನ್ನು ಆದಷ್ಟು ಬೇಗ ತರಿಸಿ ಕೊಡಬೇಕಾಗಿ ಭಿನ್ನವಿಸಿಕೊಂಡರು. 1978 ರಲ್ಲಿ ಜರ್ಮನಿನ ವಿಯನ್ನ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಶ್ರೀ ಜಗದ್ಗುರುಗಳವರಿಗೆ ಆ ದೇಶದವರೊಡನೆ ಒಡನಾಟವಿತ್ತು, ಸ್ವತ: ಜರ್ಮನ್ ಭಾಷೆ ಬಲ್ಲಂತವರಾದ ಶ್ರೀಗಳವರು ಜರ್ಮನ್ ದೇಶದ ರಾಯಭಾರಿಗಳಿಗೆ ಹಾಗೂ ಅವರ ಪರಿಚಯಸ್ತರಿಗೆ ಕರೆ ಮಾಡಿ ಮೃತರ ಬಗ್ಗೆ ಮಾಹಿತಿಯನ್ನು ತಿಳಿಸಿದರು. ಕೂಡಲೇ ಮೃತ ಶರೀರವನ್ನು ಜನ್ಮಭೂಮಿಗೆ ಹಿಂದಿರುಗಿಸಬೇಕಾಗಿ ಅವರಲ್ಲಿ ಆಗ್ರಹ ಪಡಿಸಿದರು.