21-12-2022 01:44 PM
ಶ್ರೀಗಳು ಸಂಸ್ಕೃತದ ಆಳ -ಅಗಲಗಳನ್ನು ಬಲ್ಲವರು. ಬಹುವಿಧ ಸಂಶೋಧನೆಗಳಲ್ಲಿ ತೊಡಗಿಕೊಂಡು, ಮುಂದಿನ ಪೀಳಿಗೆಗೆ ಸಂಸ್ಕೃತದ ಸಾರವನ್ನು ಕಟ್ಟಿಕೊಡುವ, ಸಂಸ್ಕೃತದಲ್ಲಿ ಅಭಿರುಚಿ ಮೂಡಿಸುವ ಕಾಯಕವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಋಷಿರಾಜ್ ರಂತಹ ಎಳಸುಗಳು ಪಾಣಿನಿಯ ಸೂತ್ರಗಳನ್ನು ಅರ್ಥೈಸಿಕೊಂಡು, ಮುನ್ನಡೆದರೆ ಅದೇ ನಿಜವಾದ ಸಂಸ್ಕೃತದ ಸೇವೆ. ಸಂಶೋಧನೆ ದೂರದ ಮಾತು! ಅಹಂಕಾರವನ್ನು ಬಿಟ್ಟು, ಶ್ರೀಗಳಿಂದ ಪಾಣಿನಿಯ ಸೂತ್ರಗಳ ಕುರಿತು ಸೂಕ್ತ ಮಾಹಿತಿ ಪಡೆಯಲಿ.. ಪ್ರಚಾರದಾಸೆಗೆ ಅಸಂಬದ್ಧ ನುಡಿಯದಿರಲಿ...
ಎಂ. ಆರ್. ಹೆಗಡೆ.
Davanagere,