ಚಿನ್ನದ ಪದಕಕ್ಕೆ ಭಾಜನರಾಗಿರುವ ಅಂತರಾಷ್ಟ್ರೀಯ ಥ್ರೋ ಬಾಲ್ ಕ್ರೀಡಾಪಟುಗಳು
ಚನ್ನಗಿರಿ ತಾ. ಹೊದಿಗೆರೆ ಗ್ರಾಮ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ ಹಳೆಯ ವಿದ್ಯಾರ್ಥಿನಿಯಾದ ಹೆಚ್.ಕೆ.ರೂಪ ತಂದೆ ಹೆಚ್.ಕೆ. ಕೃಷ್ಣಪ್ಪ ಇವರ ಕೀಡಾ ಸಾಧನೆ ಮಾಹಿತಿ.
ಹೆಚ್.ಕೆ.ರೂಪ ಇವರು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲೆಯಲ್ಲಿ 2011-12ನೆಯ ಸಾಲಿನಲ್ಲಿ 10ನೇ ತರಗತಿ ತೇರ್ಗಡೆ ಹೊಂದಿದ್ದಾರೆ.
ಕ್ರೀಡೆಯಲ್ಲಿ ಮಾಡಿರುವ ಸಾಧನೆಗಳು.
2014-15, 2015-16, 2016-17ರಲ್ಲಿ ತಮಿಳುನಾಡಿನ ಚೆನೈನಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರುತ್ತಾರೆ.
2016ರಲ್ಲಿ ಬೆಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವದ ಮಾಣಿಕ್-ಪರೇಡ್ ನ ಪಥ ಸಂಚಲನದಲ್ಲಿ ಭಾಗವಹಿಸಿ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಎನ್.ಎಸ್.ಎಸ್ ಶಿಬಿರಾರ್ಥಿಯಾಗಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
2022 ಮಾರ್ಚ್ 25ರಿಂದ 28 ರವರೆಗೆ ಪಂಜಾಬಿನ ಬಟಿಂಡಾದಲ್ಲಿ ನಡೆದ ರಾಷ್ಟ್ರಮಟ್ಟದ ಥ್ರೋ ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
2022ನೇ ಸಾಲಿನಲ್ಲಿ ಪಾಳದ ಪೋಖಾರದಲ್ಲಿ ಮೇ 18ರಿಂದ 23ರವರೆಗೆ ನಡೆದ ಅಂತರಾಷ್ಟ್ರೀಯ ಥ್ರೋಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.
2022ರಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅತ್ಯುತ್ತಮ ಸ್ವಯಂ ಸೇವಾ ಪ್ರಶಸ್ತಿ ಪಡೆದಿರುತ್ತಾರೆ.
2022ರ ಡಿಸೆಂಬರ್ 15ರಿಂದ 17ರವರೆಗೆ ಮಲೇಷಿಯಾದ ಕೌಲಾಲಂಪುರದಲ್ಲಿ ನಡೆದ ವರ್ಲ್ಡ್ ಕ್ಲಬ್ ಥ್ರೋ ಬಾಲ್ ಚಾಂಪಿಯನ್ ಶಿಪ್ ಗೆ ಭಾಗವಹಿಸಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿರುತ್ತಾರೆ.
ಆಯೋಜಕರು:- ವರ್ಲ್ಡ್ ಕ್ಲಬ್ ಥ್ರೋ ಬಾಲ್ ಚಾಂಪಿಯನ್ ಷಿಪ್ ಕೌಲಾಲಂಪುರ ಮಲೇಷಿಯಾ,
ಫ್ರೆಂಡ್ಸ್ ಸ್ಪೋರ್ಟ್ಸ್ ಅಕಾಡೆಮಿ ಬೆಂಗಳೂರು 29-12-2022ರ ಗುರುವಾರದ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಒಪ್ಪಿಕೊಂಡಿರುತ್ತಾರೆ.