20-01-2023 01:27 PM
ಈ ನಾಡಿನಲ್ಲಿ ತ್ರಿವಿಧ, ಪಂಚ,,,,, ,,,, ಹೀಗೇ ದಾಸೋಹ ಮಾಡುವ ಮಠಗಳು, ಗುರುಗಳೂ ಸಾಕಷ್ಟು ಇರುವರು ಆದರೆ ಬಹುದಾಸೋಹ ಮಾಡುತ್ತಿರುವ ಏಕೈಕ ಮಠ, ಏಕೈಕ ಗುರುಗಳು ಇದ್ರೆ ತರಳಬಾಳು ಮಠ ಮತ್ತು ಪೂಜ್ಯ ಶಿವಮೂರ್ತಿ ಗುರುಗಳು ಮಾತ್ರ ,,,, ಅನ್ನ, ಅಕ್ಷರ, ನ್ಯಾಯ, ಆದ್ಯಾತ್ಮಿಕತೆ , ಕೃಷಿ, ನೀರಾವರಿ, ವ್ಯಸನ ಮುಕ್ತ,
ರೈತರಿಗೆ ಡಿಜಿಟಲ್ ಮನಿ ಟ್ರಾನ್ಸ್ಫರ್, ಡಿಜಿಟಲ್ ಆದ ಸಂಸ್ಕೃತ ಭಾಷೆ, ಇಡೀ ನಾಡಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಆದ್ಯಾತ್ಮಿಕ ಹಾಗೂ ಸರ್ವ ಧರ್ಮ ಸಭೆಗಳಲ್ಲಿ ಭಾರತದಿಂದ ಭಾಗವಹಿಸುವ ಅತ್ಯಪರೂಪದ ಗುರುಗಳು ಇವರು, ಹಿಂದಿನ KAS ನೇಮಕಾತಿ ಮೊನ್ನೆ ಪೂರ್ಣಗೊಂಡಿದ್ದು,,,,,,,,,,,,, ಹೀಗೆಯೇ ಪಟ್ಟಿ ಮಾಡುತ್ತಾ ಹೋದರೆ ತುಂಬಾ ಇವೆ ಆದ್ರೆ ನನ್ನ ದೃಷ್ಟಿಯಲ್ಲಿ ಒಂದು ವಿಷಾದನೀಯವೆಂದರೆ ಇಡೀ ದೇಶ ಹಾಗೂ ನೆರೆ ರಾಷ್ಟ್ರಗಳಲ್ಲಿ ಗೊತ್ತಾಗಬೇಕಿರುವ ಈ ಮಠ ಹಾಗೂ ಇಂತಹ ಸ್ವಾಮೀಜಿ ಕರ್ನಾಟಕದಲ್ಲೇ ಇನ್ನೂ ಬಹಳ ಜನಗಳಿಗೆ ಗೊತ್ತಿಲ್ಲ . ಅಲ್ಪ ಸ್ವಲ್ಪ ಮಾಡಿಕೊಂಡು ಕೆಲವು ಸ್ವಾಮಿ ಜಿಗಳು , ಕೆಲವು ಮಠಗಳು ನಾಡಿನ ಪ್ರತಿಯೊಬ್ಬರಿಗೂ ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಗೊತ್ತಿರುವರು . ಈಗ ಬೇಕಾಗಿರುವುದು ಈ ಮಠಕ್ಕೇ ಇನ್ನೂ ಹೆಚ್ಚಿನ ಜನರ ಗಮನ. ಇದು ನನ್ನಾಸೆ ಕೂಡಾ ವಾಸ್ತವವೂ ಕೂಡಾ . ಕೊಟ್ಟುರು ತರಳಬಾಳು ಹುಣ್ಣಿಮೆಯಿಂದ ಇದೆಲ್ಲ ಆಗಬಹುದು ಎಂದು ನಿರೀಕ್ಷಿಸಿರುವೆ
ಸಿದ್ದಲಿಂಗಪ್ಪ H, ಶಿಕ್ಷಕರು, ಕೊಪ್ಪಳ
ಕೊಟ್ಟೂರು