ಶ್ರೀ ತರಳಬಾಳು ಜಗದ್ಗುರುಗಳವರ ಕೊಟ್ಟೂರು ಭಾಗದ ಕೆರೆಗಳನ್ನು ತುಂಬಿಸುವ ಜಲಸಂಕಲ್ಪಕ್ಕೆ ಸರ್ಕಾರದ ಅನುಮೋದನೆ.

  •  
  •  
  •  
  •  
  •    Views  

ದಿನಾಂಕ 09-02-2023 :  ಸಾಧ್ಯವಾಗದಿದ್ದನ್ನು ಸಾಧಿಸುವ ನುಡಿದಂತೆ ನಡೆವ, ಬರೆದಂತೆ ಬದುಕುವ, ಸರ್ವ ಸಮಾಜಗಳ ಅಭ್ಯುದಯದ ಭಕ್ತರ ಪಾಲಿನ ಪ್ರತ್ಯಕ್ಷ ದೈವ, ದಣಿವರಿಯದ ದಾಸೋಹಿಯ ಸೇವಾ ತತ್ಪರತೆಗೆ ಎಲ್ಲೆಡೆ ಹರಿದು ಬರುತ್ತಿರುವ ಪ್ರಾಂಜಲ ಪ್ರಣಾಮಗಳು.
---------------------------
ತರಳಬಾಳು ಹುಣ್ಣಿಮೆ ಮಹೋತ್ಸವ ಸಮಾರೋಪಗೊಂಡ ಎರಡೇ ದಿನದಲ್ಲಿ ಪ್ರಕಟಗೊಂಡ ಡಿ.ಪಿ.ಆರ್. ಅನುಮೋದನೆಯ ಆದೇಶ.
---------------------------
ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ನೀರನ್ನೆತ್ತಿ ಕೊಟ್ಟೂರು ಕೆರೆ ಮತ್ತು ಇತರೆ 16 ಕೆರೆಗಳನ್ನು ತುಂಬಿಸುವ ಯೋಜನೆಯ ವಿವರವಾದ ಯೋಜನಾ ವರದಿಗೆ ಸರ್ಕಾರದ ಅನುಮೋದನೆ.
---------------------------
ರೂ.379.00 ಕೋಟಿ ಮೊತ್ತದ ವಿವರವಾದ ಯೋಜನೆಗೆ ಕೊಟ್ಟೂರು ಕೆರೆ ಮತ್ತು ಇತರೆ 16 ಕೆರೆಗಳನ್ನು ತುಂಗಭದ್ರಾ ಜಲಾಶಯದಿಂದ ತುಂಬಿಸುವ ಯೋಜನೆಯನ್ನಾಗಿ ಘೋಷಿಸಲಾಗಿದೆ.
---------------------------
ಸದರಿ ಕಾಮಗಾರಿಗಾಗಿ ರೂ.379.00 ಕೋಟಿ ಮೊತ್ತದ  ವಿಸೃತ ಯೋಜನಾ ವರದಿಗೆ ನಿರ್ದೇಶಕರ ಮಂಡಳಿಯ ಅನುಮೋದನೆಗೆ, ಸರ್ಕಾರಕ್ಕೆ ಆಡಳಿತಾತ್ಮಕ ಅನುಮೋದನೆ.
---------------------------
ತುಂಗಭದ್ರಾ ಜಲಾಶಯದಿಂದ ನೀರನ್ನೆತ್ತಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಕೊಟ್ಟೂರು ತಾಲ್ಲೂಕಿನ ಕೊಟ್ಟೂರು ಕೆರೆ ಮತ್ತು ಇತರೆ 16 ಕೆರೆಗಳನ್ನು ತುಂಬಿಸುವ ರೂ.379.00 ಕೋಟಿಗಳ ಯೋಜನೆಯ ವಿವರವಾದ ಯೋಜನಾ ವರದಿಗೆ ಮಂಡಳಿಯ ಮತ್ತು ಸರ್ಕಾರದ ಅನುಮೋದನೆ.
---------------------------

ಸದರಿ ಯೋಜನೆಯ ಕಾಮಗಾರಿಗಳನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನ, 1ನೇ ಹಂತದಲ್ಲಿ ರೂ.100.00 ಕೋಟಿ ಮೊತ್ತದಲ್ಲಿ ಜಾಕ್ವೆಲ್, ವಿದ್ಯುತ್ ಸಂಪರ್ಕ ಹಾಗೂ ಸಂಬಂಧಿಸಿದ ಇತರೆ ಕಾಮಗಾರಿಗಳನ್ನು ಕೈಗೊಳ್ಳಲು ಅನುಮೋದನೆ ಮತ್ತು ಬಾಕಿ ಕಾಮಗಾರಿಯನ್ನು 2ನೇ ಹಂತದಲ್ಲಿ ಕೈಗೊಳ್ಳಲು ಸೂಚನೆ.
---------------------------
ಸದರಿ  ಯೋಜನೆಯ ಕಾರ್ಯಾನುಷ್ಠಾನವನ್ನು 2022-23ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅಳವಡಿಸಿ ಕೊಳ್ಳಲಾಗಿರುತ್ತದೆ.
---------------------------
ಇದೇ ಫೆಬ್ರವರಿ 17ರ ರಾಜ್ಯ ಬಜೆಟ್ ನಲ್ಲಿ ಸಂಪೂರ್ಣ ಯೋಜನೆಯ ಅಧೀಕೃತ ಘೋಷಣೆ
---------------------------
ರೈತ ಮೆಚ್ಚಿದ ಮಹಾಗುರು, ಅನ್ನದಾತರ ಜಲಋಷಿ, ಜಲಕ್ರಾಂತಿಯ ಶ್ರೀ ತರಳಬಾಳು ಜಗದ್ಗುರುಗಳವರಿಗೆ ಭಕ್ತಿ ಪೂರ್ವಕ ನಮನ ಸಲ್ಲಿಸಿದ ರೈತ ಬಾಂಧವರು.
ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕರಣಧಾರತ್ವದ ಕೊಟ್ಟೂರು ತರಳಬಾಳು ಹುಣ್ಣಿಮೆಯ ಸಾರ್ಥಕತೆಯು ಎರಡೇ ದಿನದಲ್ಲಿ ಸಾಕಾರ.
---------------------------
ಶ್ರೀ ತರಳಬಾಳು ಜಗದ್ಗುರುಗಳವರ ಗಂಗಾವತರಣದ ಕೈಂಕರ್ಯಕ್ಕೆ ಕೊಟ್ಟೂರು ಮತ್ತು16 ಕೆರೆಗಳನ್ನು ತುಂಬಿಸುವ ಯೋಜನೆ ಸೇರ್ಪಡೆ. 
> ---------------------------
ಬಂಧುಗಳೇ, ಮಾನವ ಧರ್ಮ ದೊಡ್ಡದು, ನಿಸ್ವಾರ್ಥ ಸೇವೆ ದೊಡ್ಡದು. ಬನ್ನಿ ತರಳಬಾಳು ಸಂದೇಶದಂತೆ ವಿಶ್ವಬಂಧುಗಳಾಗೋಣ. ಶ್ರೀ ಜಗದ್ಗುರುಗಳವರ ನಿರ್ಮಲ ನಿಸ್ವಾರ್ಥ ಸೇವೆಯ ಜಲದಲ್ಲಿ ಮಿಂದು ಪಾವನರಾಗೋಣ.