ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯುವುದೇ ನಿಜವಾದ ಶಿಕ್ಷಣ : ಡಾ.ಎಚ್.ವಿ.ವಾಮದೇವಪ್ಪ
ತರಳಬಾಳು ಕಲಾ ಸೌರಭ -2023
ಪಠ್ಯಪೂರಕ ಚಟುವಟಿಕೆಗಳ ಹಾಗೂ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ
"ಸಾಂಸ್ಕೃತಿಕ ಸಂಜೆ " ಹಳ್ಳಿ ಸೊಬಗು- ಬೆಳ್ಳಿ ಬೆಡಗು
ತಿಪಟೂರು ತಾಲೂಕು ಹೊನ್ನವಳ್ಳಿ ಹೋಬಳಿ, ಹಾಲ್ಕುರಿಕೆ ತರಳಬಾಳು ಶಾಲಾ ಆವರಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಶ್ರೀ ಸಂಸ್ಥೆಯ ಆಡಳಿತಾಧಿಕಾರಿಗಳಾದ ವಾಮದೇವಪ್ಪ ಎಚ್ ವಿ ಉದ್ಘಾಟಿಸಿ ಮಾತನಾಡಿದರು. "ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತೆಗೆಯುವುದೇ ನಿಜವಾದ ಶಿಕ್ಷಣವಾಗಿದೆ. ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕದೆ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು. ಶಿಕ್ಷಣ ಮಗುವಿನ ಉನ್ನತಿಗೆ ದಾರಿ ಆಗಬೇಕೆ ಹೊರತು ಅಂಕ ಗಳಿಕೆಯ ಮಾನದಂಡ ವಾಗಬಾರದು ಮಕ್ಕಳ ಪ್ರತಿಭೆ ಹಾಗೂ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹಿಸಿ ಶಿಕ್ಷಣ ನೀಡುವುದೇ ನಿಜವಾದ ಶಿಕ್ಷಣ ಮಕ್ಕಳು ಆಸಕ್ತಿಯಿಂದ ಕಲಿತು ಸಾಧನೆ ಮಾಡಬೇಕು ಪ್ರತಿಭೆ ಹಾಗೂ ಸಾಧನೆಗೆ ಬಡತನ ಹಾಗೂ ಶ್ರೀಮಂತಿಕೆ ಅಡ್ಡಿಯಾಗಬಾರದು ನಮ್ಮ ನಡುವೆ ಬಡತನದ ಸಂಕಷ್ಟವನ್ನು ಮೆಟ್ಟಿನಿಂತು ನಮ್ಮ ನ್ಯೂನ್ಯತೆಗಳನ್ನು ತುಳಿದು ಸಾಧನೆ ಮಾಡಿದ ಸಾಧಕರನ್ನು ಕಾಣಬಹುದಾಗಿದೆ. ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಗ್ರಾಮೀಣ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು ಕರ್ನಾಟಕದಲ್ಲಿ ಹೆಚ್ಚಿನ ಶಿಕ್ಷಣ ಕ್ರಾಂತಿಯಾಗಲು ನಮ್ಮ ಮಠಮಾನ್ಯಗಳೆ ಕಾರಣವಾಗಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ತಿಪಟೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಎಸ್ ಸಿದ್ದರಾಮೇಶ್ವರ ಮಾತನಾಡಿ ವಿದ್ಯಾವಂತರಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿರುವುದು ವಿಷಾದನೀಯ ವಿದ್ಯಾವಂತರು ದೇಶದ ಕಾನೂನು ಪಾಲಿಸಲು ಸಾಧ್ಯವಾಗುತ್ತಿಲ್ಲ,ನಾವು ಕಲಿತ ಶಿಕ್ಷಣವನ್ನೇ ಅವಮಾನಿಸಿದಂತಾಗುತ್ತದೆ ನಮ್ಮ ದೇಶದ ಕಾನೂನನ್ನು ಗೌರವಿಸುವ ಬಗ್ಗೆ ತಿಳಿಸುವ ಕೆಲಸ ಮಾಡಬೇಕು ಹಾಗೂ ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ಉತ್ತಮ ಸಾಧನೆ ಮಾಡಲು ಅವಕಾಶ ಮಾಡಿಕೊಡಬೇಕು. ಸಂಸ್ಕಾರ ಮೌಲ್ಯಗಳನ್ನು ಕಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಎಚ್ ವಿ ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಿಪಟೂರು ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ನಂಜುಂಡಪ್ಪ ಪಿ ಬಿ ಮಕ್ಕಳಿಗೆ ಬಹುಮಾನ ವಿತರಿಸಿದರು. ಹೆಚ್ ಸಿ ಎಂ ಜಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಸ್ಥಳೀಯ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಶರಣ ಶಿವಶಂಕರ್ ಎಚ್, ಹೆಚ್ ಸಿ ಎಂ ಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವೇಂದ್ರ ನಾಯ್ಕ್, ನಿವೃತ್ತ ಶಿಕ್ಷಕರಾದ ವೀರಭದ್ರಪ್ಪ ಹಿರಿಯ ಶಿಕ್ಷಕರಾದ ವೀರನಗೌಡ ಉಪಸ್ಥಿತರಿದ್ದರು.
ಪ್ರತಿವರ್ಷದಂತೆ 2023ರಲ್ಲಿ ತರಳಬಾಳು ಇಂಟರ್ನ್ಯಾಷನಲ್ ಸ್ಕೂಲ್, ಹಾಲ್ಕರಿಕೆ ವತಿಯಿಂದ ನೀಡಲಾಗುವ
ಶ್ರೀ ಮದುಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ||ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಹೆಸರಲ್ಲಿ ನೀಡಲಾಗುವ "ವೀರಯೋಧ" ಸೈನಿಕ ಪ್ರಶಸ್ತಿಯನ್ನು ಶರಣ ಷಡಕ್ಷರಯ್ಯ ಸಿ ಎಸ್ ನಿವೃತ್ತ ಸೈನಿಕರು ಇವರಿಗೆ ನೀಡಲಾಯಿತು.
ಲಿಂ|| ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ ಹೆಸರಲ್ಲಿ ನೀಡಲಾಗುವ "ಕಾಯಕ ಯೋಗಿ" ರೈತ ಪ್ರಶಸ್ತಿಯನ್ನು ಹಾಲ್ಕುರಿಕೆ ಗ್ರಾಮದ ಸಾವಯವ ಕೃಷಿಕರಾದ ಬಸವರಾಜು ಮಡಿವಾಳ ವರಿಗೆ ಪ್ರಧಾನ ಮಾಡಿ ಸನ್ಮಾನಿಸಲಾಯಿತು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈಭವ ಸಿರಿ ಕಾರ್ಯಕ್ರಮಗಳನ್ನು ನಡೆಸಲಾಯಿತು.
ತರಳಬಾಳು ಇಂಟರ್ನ್ಯಾಷನಲ್ ಸ್ಕೂಲ್ ನ ಮುಖ್ಯೋಪಾಧ್ಯಾಯರಾದ ವಿಜಯ ಹೆಚ್ ಬಿ ಸ್ವಾಗತಿಸಿದರು. ಶಿಕ್ಷಕಿ ಜಿ.ಬಿ.ಹರ್ಷ ಶ್ರೀ ನಿರೂಪಿಸಿದರು. ಲೋಕೇಶ್ ವಂದನಾರ್ಪಣೆ ಸಲ್ಲಿಸಿದರು.