ಶ್ರೀ ತರಳಬಾಳು ಜಗದ್ಗುರುಗಳವರ ಕನ್ನಡದ ಕಂಪಿನ ಹಿಂದಿ ಆಶೀರ್ವಚನಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ.!

  •  
  •  
  •  
  •  
  •    Views  

ದಿನಾಂಕ 25-02-2023  ಸ್ಥಳ -  ತಾಲ್ಕಟೋರಾ ಕ್ರೀಡಾಂಗಣ,ನವದೆಹಲಿ : 

ದೇಶದ ಪ್ರಧಾನಿಯಿಂದ ಭಾರತಕ್ಕೆ ಶಕ್ತಿ ಬಂದಿದೆ: ತರಳಬಾಳು ಶ್ರೀಜಗದ್ಗುರುಗಳವರ ಅಭಿಮತ
____________

ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವ ಮಾನ್ಯ ಪ್ರಧಾನಿಯವರಿಂದ ಉದ್ಘಾಟನೆ  ಶ್ರೀತರಳಬಾಳು ಶ್ರೀಜಗದ್ಗುರುಗಳವರಗಳ ಆಶೀರ್ವಚನ.
____________

ಸಿರಿಗೆರೆಗೆ ಬರುವಂತೆ ಪ್ರಧಾನಿ ಮೋದಿಗೆ ತರಳಬಾಳು ಶ್ರೀಜಗದ್ಗುರುಗಳವರ ಆಹ್ವಾನ:
____________

ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಂದ ಬಹುದೊಡ್ಡ ಶಕ್ತಿ ಬಂದಿದೆ. ಇಡೀ ಜಗತ್ತೇ ಇಂದು ಭಾರತ ದೇಶದ ಕಡೆಗೆ ತಿರುಗಿ ನೋಡುವಂತಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿಪ್ರಾಯ ಪಟ್ಟರು.

ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಜಗದ್ಗುರುಗಳು ಭಾರತ ದೇಶದ ಗೌರವ ಮತ್ತು ಪ್ರತಿಷ್ಠೆಗಳು ಮೋದಿಯವರ ಕಾಲದಲ್ಲಿ ಹಿಮಾಲಯದ ಎತ್ತರಕ್ಕೆ ಹೋಗಿವೆ ಎಂದು ಪ್ರಶಂಸಿಸಿದರು.

ಜಗತ್ತಿನ ದೊಡ್ಡಣ್ಣನ ಸ್ಥಾನವು ಇದೀಗ ಭಾರತಕ್ಕೆ ಲಭಿಸಿದೆ. ಜಗತ್ತಿನಲ್ಲಿರುವ ಎಲ್ಲಾ ದೇಶಗಳು ಭಾರತದ ಕಡೆಗೆ ನೋಡುತ್ತಿವೆ. ಅಂತಹ ಶಕ್ತಿ ಬರಲು ಸಾಧ್ಯವಾಗಿದ್ದು ಮೋದಿಯವರಿಂದ ಎಂದು ತಿಳಿಸಿದರು. ಮೋದಿ ಅದೇನು ಮೋಡಿ ಮಾಡಿದ್ದಾರೋ, ಇಡೀ ಜಗತ್ತಿನ ಜನರಲ್ಲಿ ಬಹುದೊಡ್ಡ ಶಕ್ತಿಯನ್ನು ಕಾಣುತ್ತಿದ್ದಾರೆ. ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ಜಗತ್ತಿನ ಜನರು ಮೋದಿಯವರನ್ನು ನೋಡುತ್ತಿದ್ದಾರೆ ಎಂದರು.

ಕರ್ನಾಟಕ ಭಾರತ ಮಾತೆಯ ಮಗಳು. ದೂರದ ಕರ್ನಾಟಕದ ಮಗಳು ದೆಹಲಿಯ ತವರು ಮನೆಯಲ್ಲಿ ನಡೆಯುವ ಅಮೃತ ಮಹೋತ್ಸವ ಸಂಭ್ರಮಕ್ಕೆ ಬಂದಿದ್ದಾಳೆ. ಅಂತಹ ಸಡಗರ ಇಲ್ಲಿ ನೆಲೆಗೊಂಡಿದೆ ಎಂದು ಶ್ರೀಜಗದ್ಗುರುಗಳು ಬಣ್ಣನೆಗೆ ದೆಹಲಿಯ ತಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಕನ್ನಾಡಾಭಿಮಾನಿಗಳ ಕರತಾಡನ ಕಿವಿಗಡುಚುಕ್ಕಿತು.

ರಾಷ್ಟ್ರ ರಾಜಧಾನಿಯಲ್ಲಿ ಕನ್ನಡದ ಡಿಂಡಿಮ ಭಾರಿಸಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಕಲಾವಿದರನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಕರೆದುಕೊಂಡು ಬಂದಿರುವುದು ಅಭಿನಂದನೀಯ ಎಂದು ಶ್ಲಾಘಿಸಿದ ಶ್ರೀಜಗದ್ಗುರುಗಳು ದೆಹಲಿಯಲ್ಲಿ ಕನ್ನಡದ ಆರತಿಯನ್ನು ಬೆಳಗಿಸುವ ಕೆಲಸವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಡುತ್ತಿದ್ದಾರೆ ಎಂದರು.

ಸಿರಿಗೆರೆಗೆ ಬರುವಂತೆ ಪ್ರಧಾನಿ ಮೋದಿಗೆ ತರಳಬಾಳು ಶ್ರೀಜಗದ್ಗುರುಗಳವರ  ಆಹ್ವಾನ:

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಆಶ್ರಯದಲ್ಲಿ ಸಿರಿಗೆರೆಯಲ್ಲಿ ನಿರ್ಮಿತವಾಗಿರುವ 43 ಕೋಟಿ ರೂ.ಗಳ ವೆಚ್ಚದ ಆಧುನಿಕ ಗುರುಶಾಂತೇಶ್ವರ ದಾಸೋಹ ಭವನ ಉದ್ಘಾಟನೆಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಭೆಯಲ್ಲಿ ಆಹ್ವಾನಿಸಿದರು.

ಭರಮಸಾಗರದ ಐತಿಹಾಸಿಕ ಭರಮಣ್ಣನಾಯಕನ ಕೆರೆಯು ಹಲವು ದಶಕಗಳ ನಂತರ ಏತನೀರಾವರಿ ಯೋಜನೆಯಡಿ ತುಂಬಿದೆ. ಅದರಿಂದ ಸುಮಾರು 43 ಕೆರೆಗಳಿಗೆ ನೀರು ಹರಿಯುತ್ತಿದೆ. ಪ್ರಾಕೃತಿಕ ಸಂಪತ್ತು, ಕೃಷಿ ಚಟುವಟಿಕೆಗಳು, ಅಂತರ ಜಲದ ಮೇಲೆ ಇದು ಪರಿಣಾಮ ಬೀರಿದೆ. ಏತನೀರಾವರಿ ಯೋಜನೆಯು ಪ್ರಧಾನಿಯವರಿಂದ ಉದ್ಘಾಟನೆ ಆಗಬೇಕೆಂಬುದು ತಮ್ಮ ಆಶಯವಾಗಿದೆ ಎಂದು ಶ್ರೀಜಗದ್ಗುರುಗಳು ಪ್ರಧಾನಿಯವರಿಗೆ ತಿಳಿಸಿದರು.

ಶ್ರೀ ಜಗದ್ಗುರುಗಳವರ ಆಶೀರ್ವಚನವನ್ನು ತದೇಕಚಿತ್ತದಿಂದ ವೀಕ್ಷಿಸಿದ ಪ್ರಧಾನಿ ಮೋದಿಯವರು ಶ್ರೀ ಜಗದ್ಗುರುಗಳವರು ಅನೇಕ ವಿಷಯಗಳನ್ನು ಪ್ರಧಾನಿಯವರು ಅಭಿಮಾನದಿಂದ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಭಾಷಣ ಮುಗಿಸಿದ ನಂತರ ತರಳಬಾಳು ಶ್ರೀಜಗದ್ಗುರುಗಳವರನ್ನು, ಸುತ್ತೂರು ಶಿವರಾತ್ರೀಶ್ವರ ಮಹಾಸ್ವಾಮೀಜಿ, ಆದಿಚುಂಚನಗಿರಿಯ ನಿರ್ಮಲಾನಂದ ಮಹಾಸ್ವಾಮೀಜಿ, ಉಡುಪಿಯ ವಿಶ್ವೇಶತೀರ್ಥ ಪ್ರಸನ್ನ ಶ್ರೀ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ, ನಂದಾವಧೂತ ಸ್ವಾಮಿಗಳ ಜೊತೆ ತಮ್ಮ ಸಂತಸ ಹಂಚಿಕೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಮುಖಂಡ ಸಿ.ಟಿ. ರವಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ನಾಗರಾಜ್ ಸೇರಿದಂತೆ ಮುಂತಾದವರು ವೇದಿಕೆಯಲ್ಲಿದ್ದರು.

ನವದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಂಭ್ರಮದಲ್ಲಿ ನರೇಂದ್ರ ಮೋದಿ ತರಳಬಾಳು ಶ್ರೀ, ಸುತ್ತೂರು ಶ್ರೀ ಹಾಗೂ ಆದಿಚುಂಚನಗಿರಿ ಶ್ರೀಗಳಿಗೆ ಭಕ್ತಿಗೌರವ ಸಲ್ಲಿಸಿದರು

src="http://math.taralabalu.in/assets/reportimgs/gallery4249.jpeg" style="width: 473px;" class="fr-fic fr-dib">