ಸಂಭ್ರಮದ ಶಿವನಕೆರೆ ಬಸವೇಶ್ವರ ಮಹಾರಥೋತ್ಸವಕ್ಕೆ ಶ್ರೀ ತರಳಬಾಳು ಜಗದ್ಗುರುಗಳವರಿಂದ ಪುಷ್ಪಾರ್ಪಣೆಯ ಚಾಲನೆ.
ದಿನಾಂಕ-02-03-2023 ಶಿವನಕೆರೆ: ಸಿರಿಗೆರೆ ಸಮೀಪದ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಬಸವನ ಶಿವನಕೆರೆಯಲ್ಲಿ ಗುರುವಾರ ಸಂಜೆ ಬಸವೇಶ್ವರ ಸ್ವಾಮಿಯ ಮಹಾರಥೋತ್ಸವಕ್ಕೆ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಚಾಲನೆ ನೀಡಿದರು.
ಪ್ರತಿವರ್ಷ ಶಿವರಾತ್ರಿಯ ನಂತರದ ಏಕಾದಶಿ ಆರಂಭವಾದ ದಿನದಂದು ಜರುಗುವ ರಥೋತ್ಸವದಲ್ಲಿ ಶ್ರೀಜಗದ್ಗುರುಗಳವರು ಪ್ರತಿ ವರ್ಷ ಸಾನಿಧ್ಯ ಕರುಣಿಸುವ ಸಂಪ್ರದಾಯದಂತೆ ಸಂಜೆಯ ರಥೋತ್ಸವದಲ್ಲಿ ಮಹಾರಥವನೇರಿ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ಪುಷ್ಟಾರ್ಚನೆ ಅರ್ಪಣೆಯೊಂದಿಗೆ ಚಾಲನೆ ನೀಡಿದರು. ಮಹಾರಥೋತ್ಸವ ಜರುಗಿದ ನಂತರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ಕರುಣಿಸಿದರು.
ಫೆಬ್ರವರಿ ರಿಂದ 28 ರಿಂದ ಮಾರ್ಚ್ 4ರವರೆಗೆ ನಡೆಯುವ ಜಾತ್ರೆಯಲ್ಲಿ ಶ್ರೀ ಸ್ವಾಮಿಗೆ ಕಂಕಣಧಾರಣೆ ಮತ್ತು ಧ್ವಜಾರೋಹಣ ಜರುಗಿದವು. ಬುಧವಾರ ಬೆಳೆಗ್ಗೆ 9 ಗಂಟೆಗೆ ಉಪರಥೋತ್ಸವ ಜರುಗಿತು. ಭಕ್ತಾದಿಗಳು ಸೋಮವಾರ ಬೆಳಿಗ್ಗೆ ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿ ಇಲ್ಲಿಯೇ ಅಡುಗೆ ತಯಾರಿಸಿ ದೇವರಿಗೆ ನ್ನೆವೇದ್ಯ ಸಮರ್ಪಿಸಿ ಊಟ ಮಾಡುವ ಪದ್ಧತಿ ಇದೆ. ರಥೋತ್ಸವವನ್ನು ವಿವಿಧ ಹೂಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ವೀರಗಾಸೆ ಹಾಗೂ ಮಂಗಳ ವಾದ್ಯ ವೃಂದದ ಕುಣಿತಗಳು ನೋಡುಗರ ಮೆರುಗು ಹೆಚ್ಚಿಸಿದವು.
ಶನಿವಾರ ಬೆಳಿಗ್ಗೆಯಿಂದ ಸಂಜೆವರೆಗೆ ಜವಳೆ, ಪಾನಕಗಾಡಿ, ಹರಕೆ ಕಾಣಿಕೆಗಳನ್ನು ಸ್ವಾಮಿಗೆ ಭಕ್ತಾದಿಗಳು ಸಲ್ಲಿಸುವುದರ. ಮೂಲಗ ಜಾತ್ರೆಗೆ ತೆರೆಬೀಳಲಿದೆ.
ಶಿವನಕೆರೆ ಬಸವೇಶ್ವರಸ್ವಾಮಿ ಐತಿಹ್ಯ
ಬಸವನಶಿವನಕೆರೆ ಹಾಗೂ ಬೇಡರ ಶಿವನಕೆರೆ ಆರಾಧ್ಯ ದೈವ ಬಸವೇಶ್ವರ ಸ್ವಾಮಿಯಾಗಿದ್ದು, ಶತಮಾನಗಳ ಹಿಂದ ಶಾಂತವರ ಮೆನೆ ಹಣ್ಣು ಮಗಳನ್ನು ರೊಟ್ಟಿಹಳ್ಳಿ ಬಳಗದವರ ಮನೆಯದರಿಗೆ ಕೊಟ್ಟು ಮದುವೆ ಮಾಡಲಾಗುತ್ತದೆ. ರೊಟ್ಟಿಹಳ್ಳಿ ಬಳಗದವರ ಮನೆಯವರು. ನಿತ್ಯ ಬಸವೇಶ್ವರ ಸ್ವಾಮಿಯನ್ನು ಪೂಜಿಸುತ್ತಿರುತ್ತಾರೆ. ಆ ಮನೆಯವರು ತೀರಿಕೊಂಡ ನಂತರ ಗಂಡನ ಮನೆಯವರು ಹೆಣ್ಣುಗಳಿಗೆ ಗಂಡ ಪೂಜಿಸುತ್ತಿದ್ದ ದೇವರ ಮೂರ್ತಿ ಕೊಟ್ಟು ಮನೆಯಿಂದ ಹೊರ ಹಾಕುತ್ತಾರೆ.ನಂತರ ಆ ಹೆಣ್ಣು ಮಗಳು ದೇವರ ಮೂರ್ತಿ ಹೊತ್ತುಕೊಂಡು ಬಸವನ ಶಿವನಕೆರೆಗೆ ಬಂದು ನೆಲೆಸುತ್ತಾಳೆ. ಅವಳ ಜೊತೆ ಬಂದ ಬಸವೇಶ್ವರ ಕೂಡ ಇಲ್ಲೇ ನೆಲೆಸುತ್ತಾನೆ. ನಂತರ ಅವಳಿ ಗ್ರಾಮಸ್ಥರು ಈ ದೇವರಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದು, ನೂತನ ದೇವಸ್ಥಾನದಲ್ಲಿ ನಿತ್ಯವೂ ಪೂಜಾಕೈಂಕರ್ಯಗಳು ಜರುಗುವವು. ಈ ಹಿಂದಿನ ಮೂರ್ತಿಯನ್ನು ಬದಲಾವಣೆಯ ಸಂದರ್ಭದಲ್ಲಿತರಳಬಾಳು ಶ್ರೀಜಗದ್ಗುರುಗಳವರ ಮಾರ್ಗದರ್ಶನದಂತೆ ಅಣ್ಣಬಸವಣ್ಣನವರ ಮೂರ್ತಿಯನ್ನು ಕರ್ತೃಗದ್ದುಗೆಗೆಯ ಮೇಲೆ ಪ್ರತಿಷ್ಠಾಪಿಸಿ ಪೂಜಿಸುತ್ತಿರುವರು. ಪೂಜ್ಯರ ನೇತೃತ್ವದಲ್ಲಿ ದೇವಾಸ್ಥಾನ ಮತ್ತು ಗ್ರಾಮದ ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಶ್ರೀ ಜಗದ್ಗುರುಗಳವರ ಅಪ್ಪಣೆಯಂತೆ ಬಹುವರ್ಷಗಳಿಂದ ಈ ಗ್ರಾಮದ ಯುವಕ ಯುವತಿಯರ ವಿವಾಹವು ಕಡ್ಡಾಯವಾಗಿ ಬಸವೇಶ್ವರ ದೇವಾಲಯದಲ್ಲಿಯೇ ನಡೆಯುತ್ತಿರುವುದು ಇಲ್ಲಿನ ವಿಶೇಷವಾಗಿದೆ.
ನೂರಾರು ವರ್ಷಗಳಿಂದ ಭಕ್ತರ ಸಂಕಷ್ಟಗಳಿಗೆ ಪರಿಹಾರ ನೀಡುವ ಬಸವೇಶ್ವರಸ್ವಾಮಿ ಸಾವಿರಾರು ಭಕ್ತರ ಮನೆಯ ದೇವರಾಗಿದೆ ಎಂದು ಗ್ರಾಮದ ಹಿರಿಯರು ಸ್ಮರಿಸುತ್ತಾರೆ.