ತಿಪಟೂರಿನಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರ ಆಶೀರ್ವಾದ ಪಡೆದ ಘನತೆವೆತ್ತ ರಾಜ್ಯಪಾಲರು.
ತಿಪಟೂರು: ಶ್ರೀ ತರಳಬಾಳು ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ನಡೆದ ಶಿಕ್ಷಣ ಸಚಿವರ ಪುತ್ರಿಯ ವಿವಾಹ.
ಶಿಕ್ಷಣ ಸಚಿವ ಶರಣ ನಾಗೇಶ್.ಬಿ.ಸಿ ರವರ ಪುತ್ರಿಯ ವಿವಾಹ ಮಹೋತ್ಸವ ತಿಪಟೂರಿನ ತಮ್ಮ ಸ್ವಗೃಹದಲ್ಲಿ ನಿನ್ನೆ ಭಾನುವಾರ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ನೂತನ ದಂಪತಿಗಳಿಗೆ ಶ್ರೀ ಜಗದ್ಗುರುಗಳವರು ಆಶೀರ್ವದಿಸಿದರು.
ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರು ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದದ ಪಡೆದು ಕುಶಲೋಪರಿಯೊಂದಿಗೆ ಚರ್ಚಿಸಿದರು.