05-04-2023 08:30 PM
ನಾಳೆ ಸದ್ಧರ್ಮ ಪೀಠ ಸಂಸ್ಥಾಪನಾಚಾರ್ಯ
ಶ್ರೀ ವಿಶ್ವಬಂಧು ಮರುಳಸಿದ್ದರ ಮಹಾರಥೋತ್ಸವ.
-----------------------------------------------------------------------
ತೇರನೇರಿ ಆನಗೋಡಿನ ಮಹಾರಥೋತ್ಸವಕ್ಕೆ ಶ್ರೀ ತರಳಬಾಳು ಜಗದ್ಗುರುಗಳವರಿಂದ ಚಾಲನೆ..!
ಹನ್ನೇರಡನೇಯ ಶತಮಾನದ ಬಸವಾದಿ ಶಿವ ಶರಣರ ಹಿರಿಯ ಸಮಕಾಲೀನರಾದ ಶ್ರೀ ವಿಶ್ವಬಂಧು ಮರುಳಸಿದ್ದರು ಅಂದಿನ ಜಾತಿ ಪದ್ಧತಿ, ಮೂಢನಂಬಿಕೆ, ಪುರೋಹಿತಶಾಹಿ ವಿರುದ್ಧ ಹೋರಾಡಿದ ಮಹಾತಪಸ್ವಿ ಹಾಗು ಪವಾಡ ವಿರೋಧಿ ಪವಾಡ ಪುರುಷರು.ಸಮತೆಯ ತತ್ವದ ಸಮಾನತೆಯ ಸಂಕೇತದ ಮೊದಲ ಹೆಜ್ಜೆಯ ಪ್ರತೀಕದ ಮರುಳಸಿದ್ದರು ಕೊಲ್ಲಾಪುರದ ಮಹಾಲಕ್ಷ್ಮಿಯು(ಮಾಯೆ) ಶಿವ ಭಕ್ತರ ವಿರೋಧಿ ನೀತಿಯನ್ನು ಯುಕ್ತಿಯಿಂದ ಜಯಿಸಿ ಲಿಂಗ ದೀಕ್ಷೆ ಕರುಣಿಸಿದ ಮಹಾಮಹೀಮರು ತನ್ನ ನಂತರ ಸಮಾಜದ ಶ್ರೇಯೋಭಿವೃದ್ದಿಯ ದಿವ್ಯ ಕನಸು ಕಂಡು ಇಂದಿನ ಬಳ್ಳಾರಿ ಜಿಲ್ಲೆ,ಕೂಡ್ಲಿಗಿ ತಾಲ್ಲೂಕಿನ, ಉಜ್ಜಯಿನಿ ಅಂದಿನ ಕಗ್ಗಲ್ಲುಪುರದ ಪೂರ್ವಾಶ್ರಮದ ಸಾಕುತಂದೆ ಬಾಚಣ್ಣನ ಗೌಡ ನಿಂದ ಒಂಭತ್ತು ಪಾದದ ಭೂಮಿಯನ್ನು ಪಡೆದು ಮಾಘ ಶುದ್ಧ ಪೌರ್ಣಿಮೆಯ ಅಮೃತ ಗಳಿಗೆಯಲ್ಲಿ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾ ಪೀಠ ಸ್ಥಾಪಿಸಿ ಶ್ರೀ ಪೀಠದ ಮೇಲೆ ತೆಲುಗಬಾಳಿನ ಮೂಕಸಿದ್ದರನ ಮಾತನಾಡುವ ಸಿದ್ದರನ್ನಾಗಿಸಿ ತಮ್ಮ ಸರ್ವಶಕ್ತಿಯನ್ನು ಧಾರೆಯನ್ನು ತರಳಾ ಬಾಳು ಎಂದು ಆಶೀರ್ವದಿಸುವ ಮೂಲಕ ತರಳಬಾಳು ಗುರು ಪರಂಪರೆಯ ಮೂಲಪುರುಷರಾಗದ್ದರೆ .ಈ ಪರಂಪರೆಯಲ್ಲಿ ಸಾಗಿಬಂದ ಗುರುವರ್ಯರು ತರಳಬಾಳು ಜಗದ್ಗುರುಗಳೆಂದು ವಿಶ್ವ ಪ್ರಸಿದ್ದಿಯಾಗಿದ್ದಾರೆ.
ಈ ತರಳಬಾಳು ಪಂಚಾಕ್ಷರಿ ಮಂತ್ರದಲ್ಲಿ ಸಂಪೂರ್ಣ ಮನುಕುಲದ ಅಭ್ಯುಧಯವೇ ಕೇಂದ್ರಿಕೃತವಾಗಿದೆ. ಕಾಲನುಕಾಲ ನಂತರದ ಕುಹಕಿಗಳ ವರ್ತನೆಗೆ ಛೀ ಎಂದು ಶ್ರೀ ತರಳಬಾಳು ಜಗದ್ಗುರು ಸದ್ದರ್ಮ ಸಿಂಹಾಸನಾ ಪರಂಪರೆಯ ದಿವ್ಯಕೇಂದ್ರ ಸಿರಿಗೆರೆಯನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಂಡರು.
ಈ ಪರಂಪರೆಯ ಜ್ಞಾನ ಜ್ಯೋತಿ ದೇಶ ವಿದೇಶಗಳಲ್ಲಿ ಧೇದೀಪ್ಯಮಾನವಾಗಿ ಪ್ರಜ್ವಲಿಸುತ್ತಿದೆ . ಶ್ರೀ ಪೀಠದ ಇಂದಿನ ಸುವರ್ಣಯುಗದ ಪ್ರಶಂಸೆಗೆ ತರಳಬಾಳು ಗುರುಪರಂಪರೆಯು ಎಲ್ಲಾ ಗುರುವರ್ಯರ ಸಮಾಜಮುಖಿ ಕಾಳಜಿಯೇ ಕಾರಣವಾಗಿದೆ . ಇಂತಹ ದೀರ್ಘ ಐತಿಹ್ಯ ಶ್ರೀ ಗುರು ಪರಂಪರೆಯ ಮೂಲಪುರುಷ ಶ್ರೀ ವಿಶ್ವಬಂಧು ಮರುಳಸಿದ್ದ ಕೇವಲ ಗುರುವಾಗದೇ ನಾಡಿನ ಎಲ್ಲಾ ವರ್ಗದ ಜನರ ಮನೆದೇವರಾಗಿರುವುದು ಅತ್ಯಂತ ವಿಭಿನ್ನವಾಗಿ ಕಂಡುಬಂದಿದೆ. ಶ್ರೀ ಮರುಳಸಿದ್ದರು ಲೋಕ ಸಂಚಾರ ಕೈಗೊಂಡು ಜನರನ್ನು ಸುಜ್ಞಾನದ ತೆಕ್ಕೆಗೆ ಕರೆದೊಯ್ಯುವ ಸಂಧರ್ಭದಲ್ಲಿ ನಡೆದ ಜೀವಂತ ದೃಶ್ಯವಾಳಿಗಳ ಸ್ಮರಣಾರ್ಥವೇ ಇಂದು ಮರುಳಸಿದ್ದರ ನೂರಾರು ದೇವಾಲಯಗಳು ನಿರ್ಮಾಣವಾಗಿರುವುದು. ರಥೋತ್ಸವಗಳು ,ವಿಶೇಷ ಪೂಜಾ ಕೈಂಕರ್ಯಗಳು ದಿನ ಪ್ರತಿ ಜರುಗುತ್ತಿರುವುದು.ಅಂತಹ ಪೂಣ್ಯ ಕ್ಷೇತ್ರಗಳಲ್ಲಿ ಒಂದಾದ,ಮರುಳಸಿದ್ದರ ಪವಾಡ ಕ್ಷೇತ್ರವೆಂದೇ ಜನಮನದಲ್ಲಿ ಪಾವನಕ್ಷೇತ್ರವಾದ ದಾವಣಗೆರೆಯ ಸಮೀಪದ ಆನಗೋಡಿನಲ್ಲಿ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪಾವನ ಸಾನ್ನಿಧ್ಯ ದಿ ,ಲಕ್ಷಾಂತರ ಸದ್ಭಕ್ತರ ಉಪಸ್ಥಿತಿಯಲ್ಲಿ ತರಳಬಾಳು ಗುರುಪರಂಪರೆಯ ಮೂಲಪುರುಷರ ಶ್ರೀ ಮರುಳಸಿದ್ದರ ಮಹಾರಥೋತ್ಸವ ನಾಳೆ ಸಂಜೆ ಜರುಗಲಿದೆ. ಈ ಐತಿಹ್ಯ ಪುರುಷರ ದರ್ಶನಾರ್ಶೀವಾದಕ್ಕೆ ನೀವೇಲ್ಲಾ ಸಾಕ್ಷೀಯಾಗಿ.
BASAVARAJ SIRIGERE SHIMOGA
Shimoga