
ಕರ್ನಾಟಕದಲ್ಲಿ ಇದೀಗ ವಿಧಾನಸಭೆಯ ಚುನಾವಣಾ ರಣಕಹಳೆ ಮೊಳಗಿದೆ. ಇದನ್ನು ಮಾಧ್ಯಮಗಳು “ಕರ್ನಾಟಕ ಕುರುಕ್ಷೇತ್ರ” ಎಂದು ಬಣ್ಣಿಸಿವೆ. ಮಹಾಭಾರತದ ಕುರುಕ್ಷೇತ್ರಕ್ಕೂ ಸ್ವತಂತ್ರ ಭಾರತದ ಈ ಚುನಾವಣಾ ಸಮರಕ್ಕೂ ಇರುವ ಹೋಲಿಕೆ ವ್ಯತ್ಯಾಸಗಳೇನು? ಕೌರವರು ಮತ್ತು ಪಾಂಡವರ ಮಧ್ಯೆ ಭೀಕರ ಯುದ್ಧ ನಡೆದ ಸ್ಥಳವೇ ಕುರುಕ್ಷೇತ್ರ. ಭಗವದ್ಗೀತೆಯ ಆರಂಭದ ಶ್ಲೋಕದಲ್ಲಿ ಈ ಕುರುಕ್ಷೇತ್ರವನ್ನು “ಧರ್ಮಕ್ಷೇತ್ರ” ಎಂದು ಬಣ್ಣಿಸಲಾಗಿದೆ. “ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾಃ ಯುಯುತ್ಸವಃ ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ” (ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ನನ್ನ ಮಕ್ಕಳೂ ಮತ್ತು ಪಾಂಡವರು ಏನು ಮಾಡಿದರು?) ಎಂದು ಧೃತರಾಷ್ಟ್ರನು ಸಂಜಯನನ್ನು ಕೇಳುತ್ತಾನೆ. ಅಪಾರ ಸಾವುನೋವಿನಿಂದ ರಕ್ತಸಿಕ್ತವಾದ ಕುರುಕ್ಷೇತ್ರ ಯುದ್ಧಭೂಮಿಯನ್ನು ತೀರ್ಥಕ್ಷೇತ್ರಗಳಾದ ಕಾಶೀ-ರಾಮೇಶ್ವರಗಳಂತೆ “ಧರ್ಮಕ್ಷೇತ್ರ” ಎಂದು ಕರೆಯಬಹುದೇ? ಇದಕ್ಕೆ ಒಂದು ಕಾರಣವಿದೆ. ಪಾಂಡವರು ಮತ್ತು ಕೌರವರು ಯುದ್ಧ ಮಾಡಲು ಸನ್ನದ್ಧರಾಗಿ ಕುರುಕ್ಷೇತ್ರದಲ್ಲಿ ತಮ್ಮ ಅಪಾರ ಸೈನ್ಯದೊಂದಿಗೆ ಜಮಾಯಿಸಿದಾಗ ಯುದ್ಧವನ್ನು ಆರಂಭಿಸುವ ಮುನ್ನ ಎರಡೂ ಕಡೆಯವರು ಒಂದೆಡೆ ಸೇರಿ ಸಮಾಲೋಚಿಸಿ ಯುದ್ಧಕುರಿತಾದ ಒಂದು ನೀತಿ ಸಂಹಿತೆಯನ್ನು ರೂಪಿಸಿಕೊಳ್ಳುತ್ತಾರೆ. ಇದರ ವಿವರಗಳು ಮಹಾಭಾರತದ ಭೀಷ್ಮಪರ್ವದ ಆರಂಭದಲ್ಲಿ ದೊರೆಯುತ್ತವೆ. ಅವರು ಒಪ್ಪಂದ ಮಾಡಿಕೊಂಡ ಯುದ್ಧದ ನಿಬಂಧನೆಗಳು ಈ ಮುಂದಿನಂತಿವೆ:
ರಥೀ ಚ ರಥಿನಾಂ ಯೋಧ್ಯೋ ಗಜೇನ ಗಜದೂರ್ಗತಃ |
ಅಶ್ವೇನಾಶ್ಚೀ ಪದಾತಿಶ್ಚ ಪಾದಾತೇನೈವ ಭಾರತ ||
ಏಕೇನ ಸಹ ಸಂಯುಕ್ತಃ ಪ್ರಪನ್ನೋ ವಿಮುಖಸ್ತಥಾ |
ಕ್ಷೀಣಶಸ್ತ್ರೋ ವಿವರ್ಮಾ ಚ ನ ಹಂತವ್ಯಃ ಕದಾಚನ ||
ನ ಸೂತೇಷು ನ ಧುರ್ಯೇಷು ನ ಚ ಶಸ್ತ್ರೋಪನಾಯಿಷು |
ನ ಭೇರೀಶಂಖವಾದೇಷು ಪ್ರಹರ್ತವ್ಯಂ ಕದಾಚನ ||
ಅಂದರೆ ರಥಾರೂಢ ಯೋಧನು ರಥಾರೂಢ ಯೋಧನೊಂದಿಗೆ, ಗಜಾರೂಢ ಯೋಧನು ಗಜಾರೂಢ ಯೋಧನೊಂದಿಗೆ, ಅಶ್ವಾರೂಢ ಸೈನಿಕನು ಅಶ್ವಾರೂಢ ಸೈನಿಕನೊಂದಿಗೆ, ಪದಾತಿಯು (ಕಾಲಾಳು) ಪದಾತಿ ಸೈನಿಕನೊಂದಿಗೆ ಮಾತ್ರ ಯುದ್ಧ ಮಾಡಬೇಕು. ರಥಾರೂಢ ಯೋಧನಾಗಲೀ, ಗಜಾರೂಢ ಸೈನಿಕನಾಗಲೀ, ಅಶ್ವಾರೂಢ ಸೈನಿಕನಾಗಲೀ ಕಾಲಾಳು ಸೈನಿಕನ ಮೇಲೆ ದಾಳಿ ಮಾಡುವಂತಿಲ್ಲ. ರಣರಂಗದಲ್ಲಿ ಶತ್ರುಸೈನ್ಯಗಳ ಮಧ್ಯೆ ನಡೆಯುವ ಯುದ್ಧವು ಪ್ರತಿ ದಿನ ಸೂರ್ಯಾಸ್ತದೊಂದಿಗೆ ನಿಲ್ಲಬೇಕು. ಸೂರ್ಯ ಮುಳುಗಿದ ಮೇಲೆ ಯುದ್ಧ ಮಾಡುವಂತಿಲ್ಲ. ಒಬ್ಬ ಯೋಧನಲ್ಲಿ ಶಸ್ತ್ರಾಸ್ತ್ರಗಳು ಮುಗಿದು ಹೋಗಿದ್ದರೆ ಅಥವಾ ಅವನು ಶಸ್ತ್ರಗಳನ್ನು ತ್ಯಜಿಸಿ ಶರಣಾಗತನಾದರೆ ಅಥವಾ ಯುದ್ಧದಿಂದ ವಿಮುಖನಾದರೆ ಅಂಥವನನ್ನು ಕೊಲ್ಲಬಾರದು. ಸಾರಥಿಗಳ ಮೇಲೆ, ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವವರ ಮೇಲೆ, ಮದ್ದಳೆ-ಶಂಖ ನಿನಾದ ಮಾಡುವವರ ಮೇಲೆ ಶಸ್ತ್ರಾಸ್ತ್ರ ಪ್ರಯೋಗ ಮಾಡಬಾರದು. ಯೋಧರು ಸಮಾನ ಬಲಶಾಲಿಗಳೊಂದಿಗೆ ಮಾತ್ರ ಯುದ್ಧ ಮಾಡಬೇಕು. ದುರ್ಬಲರೊಂದಿಗೆ ಮಾಡಬಾರದು ಇತ್ಯಾದಿ. ಇದಕ್ಕೆ ಅನುಗುಣವಾಗಿ ಭಗವದ್ಗೀತೆಯಲ್ಲಿ ಉಲ್ಲೇಖಗೊಂಡಿರುವ ಪ್ರಸಂಗ ಹೀಗಿದೆ. ಶತ್ರು ಸೈನ್ಯಗಳು ಯುದ್ಧಸನ್ನದ್ಧರಾಗಿ ರಣರಂಗದಲ್ಲಿ ನಿಂತಿರುವಾಗ ಅರ್ಜುನನು ತನ್ನ ಸಾರಥಿಯಾದ ಶ್ರೀಕೃಷ್ಣನಿಗೆ ಹೀಗೆ ಹೇಳುತ್ತಾನೆ: “ಎರಡೂ ಸೈನ್ಯಗಳ ಮಧ್ಯೆ ನನ್ನ ರಥವನ್ನು ನಿಲ್ಲಿಸು. ಯುದ್ಧಮಾಡಲು ಬಂದಿರುವ ಇವರಲ್ಲಿ ನನ್ನೊಂದಿಗೆ ಯುದ್ಧ ಮಾಡಲು ಯಾರು ಸಮರ್ಥರು ಎಂದು ನೋಡುತ್ತೇನೆ”. (“ಸೇನಯೋರುಭಯೋರ್ಮಧ್ಯೆ ರಥಂ ಸ್ಥಾಪಯ ಮೇ”ಚ್ಯುತ|| ಯಾವದೇತಾನ್ ನಿರೀಕ್ಷೇಹಂ ಯೋದ್ದುಕಾಮಾನವಸ್ಥಿತಾನ್ ಕೈರ್ಮಯಾ ಸಹ ಯೋಧ್ಯವ್ಯಮಸ್ಮಿನ್ ರಣಸಮುದ್ರಮೇ||)
ಮಹಾಭಾರತ ಯುದ್ಧದ ಮೊದಲ ದಿನ ನಡೆದ ಇನ್ನೊಂದು ಘಟನೆ ತುಂಬಾ ವಿಸ್ಮಯಕಾರಿಯಾಗಿದೆ. ಇನ್ನೇನು ಯುದ್ಧ ಆರಂಭವಾಗಬೇಕು ಆಗ ಇದ್ದಕ್ಕಿದ್ದಂತೆಯೇ ಧರ್ಮರಾಯನು ರಥದಿಂದ ಕೆಳಗೆ ಇಳಿದು ತನ್ನೆಲ್ಲ ಶಸ್ತ್ರಾಸ್ತ್ರಗಳನ್ನು ಬದಿಗಿರಿಸಿ ಕೌರವ ಸೈನ್ಯದತ್ತ ಒಬ್ಬನೇ ಕಾಲುನಡಿಗೆಯಲ್ಲಿ ಸಾಗುತ್ತಾನೆ. ದರ್ಮರಾಯನು ಶಾಂತಿಯನ್ನು ಬಯಸಿ ಶರಣಾಗತನಾಗುತ್ತಿದ್ದಾನೆಯೇ? ಎಂದು ಎಲ್ಲರೂ ಚಕಿತಗೊಳ್ಳುತ್ತಾರೆ. “ಯಾರಿಗೂ ಹೇಳದೆ ಕೇಳದೆ ಹೀಗೇಕೆ ಏಕಾಂಗಿಯಾಗಿ ನಿಶ್ಯಸ್ತ್ರನಾಗಿ ಶತ್ರುಸೈನ್ಯದತ್ತ ಕಾಲಿಡುತ್ತೀದ್ದೀಯಾ? ಎಂದು ಅರ್ಜುನ ಅಣ್ಣನನ್ನು ಕೇಳುತ್ತಾನೆ. ಧರ್ಮರಾಯ ಉತ್ತರಿಸದೆ ಮೌನವಾಗಿ ಮುಂದೆ ಸಾಗುತ್ತಾನೆ. ಆದರೆ ಅವನು ಹೋಗಿದ್ದು ಶರಣಾಗತನಾಗಲು ಅಲ್ಲ. ಯುದ್ಧ ಆರಂಭಿಸುವ ಮುನ್ನ ಶತ್ರುಸೈನ್ಯದಲ್ಲಿದ್ದ ಹಿರಿಯರಾದ ಭೀಷ್ಮಪಿತಾಮಹ ಮತ್ತು ಗುರು ದ್ರೋಣಾಚಾರ್ಯರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಲು!
ಪಾಂಡವರು ಮತ್ತು ಕೌರವರ ಮಧ್ಯೆ ನಡೆದ ಕುರುಕ್ಷೇತ್ರ ಯುದ್ಧದ ಈ ನೀತಿಸಂಹಿತೆಯು ಪ್ರಶಂಸನೀಯವಾದರೂ 18 ದಿನಗಳ ಕಾಲ ನಡೆದ ಘೋರ ಮಹಾಭಾರತ ಯುದ್ಧದಲ್ಲಿ ಎಷ್ಟರಮಟ್ಟಿಗೆ ಪಾಲನೆಯಾಯಿತು ಎಂಬುದು ಪ್ರಶ್ನಾರ್ಹ. ಅಂತೆಯೇ ಸದುದ್ದೇಶದಿಂದ ರೂಪಿಸಿರುವ ಆಧುನಿಕ ಭಾರತದ ಚುನಾವಣಾ ನೀತಿಸಂಹಿತೆಯನ್ನು ರಾಜಕೀಯ ಪಕ್ಷಗಳು ಎಷ್ಟರಮಟ್ಟಿಗೆ ಪಾಲಿಸುತ್ತಿವೆ ಎಂದು ಅವಲೋಕಿಸಿದಾಗ ಕಂಡುಬರುವ ವಿಸಂಗತಿಗಳು ಅನೇಕ.
ಮಹಾಭಾರತದ ಕುರುಕ್ಷೇತ್ರವು ಧರ್ಮಕ್ಷೇತ್ರವಾಗಿದ್ದರೆ ಸ್ವತಂತ್ರ ಭಾರತದ ಚುನಾವಣಾ ಕ್ಷೇತ್ರಗಳು ಪಾಪಕ್ಷೇತ್ರಗಳಾಗಿವೆ. ರಾಜ್ಯ ಚುನಾವಣಾ ಆಯೋಗವು ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಹೊರಡಿಸಿರುವ ಸದಾಚಾರ ಸಂಹಿತೆಯ 2ನೇ ಕಲಂ ಪ್ರಕಾರ ಈ ಸದಾಚಾರ ಸಂಹಿತೆಯು ಚುನಾವಣೆಯ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸುವ ದಿನಾಂಕದಿಂದ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಜಾರಿಯಲ್ಲಿರುತ್ತದೆ. ಕಲಂ 4ರಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ವಿವಿಧ ಜಾತಿ ಅಥವಾ ಸಮುದಾಯಗಳ ಮಧ್ಯೆ ಇರುವ ವೈಮನಸ್ಸನ್ನು ಕೆರಳಿಸುವ, ದ್ವೇಷ ಹುಟ್ಟಿಸುವ, ಉದ್ವೇಗಕ್ಕೆ ಕಾರಣವಾಗುವಂತಹ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು ಎಂಬ ನಿಷೇಧವಿದೆ. ಇತರೆ ರಾಜಕೀಯ ಪಕ್ಷವನ್ನು ಟೀಕಿಸುವಾಗ ಆ ಪಕ್ಷಗಳ ಕಾರ್ಯನೀತಿ, ಹಿಂದಿನ ಕಾರ್ಯ ನೀತಿಗಳಿಗೆ ಮಾತ್ರ ಟೀಕೆಗಳು ಸೀಮಿತವಾಗಿರಬೇಕು. ಇತರೆ ಪಕ್ಷದ ನಾಯಕರ ಅಥವಾ ಕಾರ್ಯಕರ್ತರ ಸಾರ್ವಜನಿಕ ಚಟುವಟಿಕೆಗಳಿಗೆ ಸಂಬಂಧಪಡದ ಅಂಶಗಳನ್ನು ಕುರಿತು ಟೀಕೆ ಮಾಡತಕ್ಕದ್ದಲ್ಲ ಎಂಬ ನಿರ್ಬಂಧವಿದೆ. ಇಂತಹ ಸದಾಚಾರ ನೀತಿಸಂಹಿತೆಯು ಚುನಾವಣೆಯ ಕಾಲಾವಧಿಗೆ ಮಾತ್ರ ಏಕೆ ಸೀಮಿತಗೊಳ್ಳಬೇಕು? ಎಂಬುದು ಮೂಲ ಪ್ರಶ್ನೆ. ಚುನಾವಣೆ ಮುಗಿದ ಮೇಲೆ ನಿಯಂತ್ರಿಸಲು ಬೇರೆ ನಿಯಮಗಳಿವೆ ಎಂದರೆ ಆ ನಿಯಮಗಳು ಇದುವರೆಗೂ ಪೂರ್ಣ ಯಶಸ್ವಿಯಾಗಿವೆಯೇ?

ಇಂದಿನ ವಿದ್ಯಮಾನಗಳನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಹಿಂದೆ ನಡೆದ ಸ್ವಾತಂತ್ರ್ಯ ಸಮರಕ್ಕಿಂತ ಈಗಿನ ಚುನಾವಣಾ ಸಮರವೇ ಜೋರಾಗಿದೆ. ದೇಶ ಸೇವೆಗಿಂತ ಸ್ವಾರ್ಥ ಲಾಲಸೆ ಮೇರೆ ಮೀರಿ ಬೆಳೆದಿದೆ. ನಮ್ಮ ದೇಶದಲ್ಲಿ ಟಿಕೆಟ್ಟಿಗಾಗಿ ನೂಕು ನುಗ್ಗಲಾಗುವುದು ಮೂರು ಕಡೆ: ಒಂದು ಸಿನೇಮಾ ಮಂದಿರಗಳ ಮುಂದೆ, ಇನ್ನೊಂದು ಕ್ರಿಕೆಟ್ ಸ್ಟೇಡಿಯಂ ಮುಂದೆ, ಮತ್ತೊಂದು ಚುನಾವಣೆಯ ಸಂದರ್ಭದಲ್ಲಿ ಪ್ರಭಾವೀ ರಾಜಕಾರಣಿಗಳ ಮತ್ತು ಮಠಮಂದಿರಗಳ ಮುಂದೆ! ರಾಜಕೀಯದಲ್ಲಿ ಭ್ರಷ್ಟಾಚಾರ ಪ್ರಾರಂಭವಾಗುವುದೇ ಈ ಟಿಕೆಟ್ಟಿನಿಂದ! ಟಿಕೆಟ್ ಹಂಚುವ ಪ್ರಕ್ರಿಯೆ ಎಲ್ಲ ಭ್ರಷ್ಟಾಚಾರಗಳ ಪಾಪಕೂಪ! ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಿಗಿಂತ, ಇಂದು ದೇಶದ ಅಧಿಕಾರ ಗದ್ದುಗೆಯನ್ನು ಏರಲು ರಾಜಕೀಯ ಪಕ್ಷದ ಟಿಕೆಟ್ಟಿಗಾಗಿ ಹೋರಾಡುವ ಟಿಕೆಟ್ಟು ಹೋರಾಟಗಾರರ ಸಂಖ್ಯೆಯೇ ಜಾಸ್ತಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕಥೆ ಒಂದು ತೆರನಾದರೆ, ಟಿಕೆಟ್ಟಿಗಾಗಿ ಹೋರಾಡುವವರ ಕಥೆ/ವ್ಯಥೆ ಮತ್ತೊಂದು ತೆರನಾಗಿದೆ. “ಟಿಕೆಟ್ಟು ಹೋರಾಟಗಾರರ ಸಂಘ” ಸ್ಥಾಪನೆಯಾಗುವುದೊಂದು ಬಾಕಿ ಉಳಿದಿದೆ.
ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಈ (ವಾ)ನರರಿಗೆ ಸಾರ್ವಜನಿಕ ಜೀವನದಲ್ಲಿ ಸಹಜವಾಗಿ ಇರಬೇಕಾದ ಕನಿಷ್ಠ ನಾಚಿಕೆಯೂ ಇಲ್ಲ. “ಅಡವಿ ದೆವ್ವ ಬಂದು ಊರು ದೆವ್ವನ್ನ ಓಡಿಸ್ತು” ಎಂಬ ಗಾದೆ ಮಾತಿನಂತಾಗಿದೆ. ಇದರಿಂದ ಎಷ್ಟೊಂದು ಕೋಲಾಹಲ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸಲು ಯಾವ ಕಾನೂನಿನಿಂದಲೂ ಸಾಧ್ಯವಾಗದಿರುವುದು ವಿಷಾದನೀಯ. ಪಕ್ಷಾಂತರ ತಡೆ ಕಾನೂನು ಇದ್ದರೂ ಪೂರ್ಣಪ್ರಯೋಜನಕಾರಿ ಆಗಿರುವುದಿಲ್ಲ. "Politics without principles is a crime" (ನೀತಿ ಇಲ್ಲದ ರಾಜಕಾರಣ ಒಂದು ಅಪರಾಧ) ಎನ್ನುತ್ತಾರೆ ಗಾಂಧೀಜಿ. ನೀತಿಯುತ ರಾಜಕಾರಣ ಈ ದೇಶದಲ್ಲಿ ನೆಲಸಬೇಕೆಂದರೆ ಟಿಕೆಟ್ ಸಿಗದವರು ಬೇರೆ ಪಕ್ಷಕ್ಕೆ ವಲಸೆ ಹೋಗಲು ಅವಕಾಶವಿರಬಾರದು. ಯಾವ ರಾಜಕೀಯ ಪಕ್ಷದವರೂ ಬೇರೊಂದು ಪಕ್ಷದಿಂದ ಬಂದವರಿಗೆ ಮಣೆ ಹಾಕಬಾರದು. ಪಕ್ಷದ ಸದಸ್ಯರ ಹೆಸರು ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರಬೇಕು. ಒಂದು ಪಕ್ಷದಿಂದ ಟಿಕೆಟ್ ಪಡೆಯಬೇಕೆಂದರೆ ಅಭ್ಯರ್ಥಿಯು ಆ ಪಕ್ಷದಲ್ಲಿ ಕನಿಷ್ಟ 5 ವರ್ಷಗಳ ಕಾಲ ಸಕ್ರಿಯ ಸದಸ್ಯನಾಗಿರಬೇಕು. ಪಕ್ಷಾಂತರಗೊಂಡರೆ ಆ ಪಕ್ಷದ ಟಿಕೆಟ್ ಪಡೆಯಲು 5 ವರ್ಷ ಕಾಯಬೇಕು. ಇಲ್ಲದಿದ್ದರೆ ಸ್ವತಂತ್ರವಾಗಿ ನಿಲ್ಲಲು ಅವಕಾಶ ಕಲ್ಪಿಸಿಕೊಡಬಹುದು. ಇದರಿಂದ ಪಕ್ಷದೊಳಗಿನ ತಿಕ್ಕಾಟಗಳು ಕಡಿಮೆಯಾಗುತ್ತವೆ. ಪಕ್ಷನಿಷ್ಠೆ ಮತ್ತು ಶಿಸ್ತು ಮೂಡುತ್ತದೆ. ಚುನಾವಣಾ ಫಲಿತಾಂಶ ಬಂದ ಮೇಲೆ ಯಾವ ಪಕ್ಷಕ್ಕೂ ಬಹುಮತ ಬರದೇ ಹೋದರೆ ಬೇರೆ ಪಕ್ಷದವರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ರೆಸಾರ್ಟ್ ರಾಜಕೀಯ ಹುನ್ನಾರಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಯಾರೂ ಸಹ ಆಗ ಪಕ್ಷಾಂತರ ಮಾಡಲು ಮನಸ್ಸು ಮಾಡುವುದಿಲ್ಲ. ಪಕ್ಷಾಂತರಿಗಳು ಅಧಿಕಾರ ಲಾಲಸೆಯಿಂದ ರಾಜಿನಾಮೆ ಕೊಟ್ಟು ಮರುಚುನಾವಣೆಗೆ ಸ್ಪರ್ಧಿಸಲು ಬರುವುದಿಲ್ಲ. ಕೋರ್ಟು ಕಛೇರಿಗಳಲ್ಲಿ ಮಾಡುವ ರಾಜಕೀಯ ರಾದ್ಧಾಂತಗಳಿಗೂ ಅವಕಾಶವಿರುವುದಿಲ್ಲ. ಮರುಚುನಾವಣೆ ನಡೆಸಲು ಸರಕಾರ ಅನಾವಶ್ಯಕವಾಗಿ ಮಾಡಬೇಕಾದ ಖರ್ಚು ಉಳಿಯುತ್ತದೆ. ಮಂತ್ರಿ ಮಹೋದಯರು ಆಡಳಿತದ ಕಡೆ ಗಮನ ಹರಿಸದೆ ವರ್ಷದುದ್ದಕ್ಕೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಉಪಚುನಾವಣೆಗಳಲ್ಲಿ ಗೆಲ್ಲಿಸಲು ಮಾಡುವ ಕಸರತ್ತು ತಪ್ಪುತ್ತದೆ. ಇತರೆ ಪಕ್ಷದವರನ್ನು ನಿಂದಿಸಿ ಸಾಮಾಜಿಕ ಕ್ಷೋಭೆಯುಂಟು ಮಾಡುವುದು ನಿಲ್ಲುತ್ತದೆ.
ಗಾಂಧೀಜಿಯ ನೇತೃತ್ವದಲ್ಲಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಮುಖರೆಲ್ಲರೂ ಆ ಕಾಲದ ಸುಪ್ರಸಿದ್ಧ ವಕೀಲರು. ಅವರ ನಿಸ್ವಾರ್ಥಸೇವೆ ಮತ್ತು ತ್ಯಾಗ ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯವೇನೋ ಸಿಕ್ಕಿತು. ಆದರೆ ಸ್ವಾತಂತ್ರ್ಯದ ಆಶಯ ಇನ್ನೂ ಈಡೇರಿಲ್ಲ. ಆದಕಾರಣ ಈ ದೇಶದ ಬಗ್ಗೆ ಕಾಳಜಿಯುಳ್ಳ ಪ್ರಖ್ಯಾತ ವಕೀಲರು ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಲು ಮತ್ತೊಂದು ಚಳುವಳಿ ಆರಂಭಿಸುವ ಅವಶ್ಯಕತೆ ಇದೆ. ಈ ಬಗ್ಗೆ ಕಾನೂನು ತಜ್ಞರು ಮತ್ತು ಪ್ರಜ್ಞಾವಂತರು ಚಿಂತನೆ ನಡೆಸಿ ಸೂಕ್ತ ನಿಯಮಗಳು ಜಾರಿಗೆ ಬರುವಂತೆ ಕಾನೂನಾತ್ಮಕ ಹೋರಾಟ ನಡೆಸಿದರೆ ಈಗಿನ ಅವಾಂತರಗಳು ಕೊನೆಗೊಂಡು ನಾಗರೀಕರು ನೆಮ್ಮದಿಯಿಂದ ಬದುಕುವಂತಾಗಬಹುದು.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.6-4-2023.

The bugle call has heralded the Assembly Elections in Karnataka. The media is dubbing it as the Kurukshetra of Karnataka. Well, what are the similarities and differences between the Kurukshetra of Mahabharata and the ongoing election battle of Independent India? Kurukshetra was the site of a fierce battle between the Kauravas and the Pandavas. The Bhagadvad Gita describes this Kurukshetra as Dharmakshethra, ‘field of righteousness’. In its opening verses Dhritharashta asks Sanjaya “Dharmakshetre Kurukshetre Samavethaha yuyutsavaha mamakaaha pandavashchaiva kimakuruvatha Sanjaya”. “What did my sons and the Pandavas do in the Dharmakshethra (the land of Dharma) of Kurukshetra?”. Can the battlefield of Kurukshetra, drenched in blood from innumerable deaths, of mutilated bodies reverberating with the howling and the cried of pain be compared to the holy sites like Kashi and Rameswaram? There is a reason for this.
The Kauravas and Pandavas assemble in Kurukshetra with their vast armies, ready to fight. Prior to the war both the sides hold a meeting to discuss and formulate a code of conduct for war, the details of which can be found at the beginning of the Bhishma Parva of the Mahabharata. The terms of the treaty they agreed upon are as follows.
Rathicha rathinam yodha gajena gajadurgathaha l
Ashwenashwi padathisheha padathinaiva Bharatha ll
Ekena saha samayukthaha prapanno vimukhasthatha l
Ksheena shasthro vivarma cha na hanthavyaha kadachana ll
Na sutheshu no dhuryeshu na cha hanthavyaha shasthropanayishu l
Na Bheri Shankhavadeshu praharthavyam kadachana ll
This means that a warrior on a Chariot should fight only with a Warrior on a Chariot, an elephant riding warrior with another elephant riding warrior, a horse-riding warrior should fight only with another horse-riding soldier. And a foot soldier (infantry) should fight only with another foot soldier. No warrior riding on a chariot, elephant or horse should attack a foot soldier. Warfare should stop at the sunset every day. Warfare shall not take place after the sun has set. A Warrior should not be killed, if he runs out of his weapons or if he surrenders abandoning his weapons or turns away from the war. Weapons should not be used on the charioteers, on those supplying arms or those who blow conch and trumpet. Warriors should fight only with those having equal strength, not with the weaker ones etc.

Correspondingly, an incident mentioned in the Bhagavadgita is as follows. As both the armies stood ready for the battle, Arjuna says to his charioteer, “Lord Krisha, place my chariot between the two armies so that I may see with whom to fight in this battle”. (Senayorubhayar madhye ratham sthaphaya me chyutha ll yavadethan nireekshenam yodduka manavasthithan Kairmaya Shaha yodhyavyamasmin rana Samudra me ll)
Another incident that happened on the first day of Mahabharata war is astonishing. Just as the war was about to begin Dharmaraya gets down from the Chariot, lays down all his weapons and marches alone on foot towards the Kaurava army. Everyone is shocked and wonders whether Dharmaraya is surrendering himself to the enemy seeking peace. Arjuna asks his brother “why are you walking alone unarmed towards the enemy without even consulting any of us?” Dharmaraya walks forward in silence, without answering. He was not gone there to surrender but to pay his respects and seek blessings from the elderly Bhishma Pitamaha and Guru Dronacharya who were present in the Kaurava army.
While this code of ethics of the Kurukshetra war between the Pandavas and the Kauravas is commendable it remains debatable as to how far was it followed in the gruesome Mahabharata war that lasted for 18 days. Similarly, many discrepancies can be found regarding the extent to which the political parties are following the well-intended election code of conduct of modern India. If the Kurukshetra was a Dharmakshethra, a field of righteousness, the election constituencies of independent India are the Paapakshethra, fields of Sin. According to the clause 2 of the model code of conduct issued by the state Election Commission for the guidance of the candidates, it shall remain in force from the date of announcement of the election schedule by the State Election Commission till the completion of the election process. Clause 4 prohibits the parties of the candidates from engaging in activities that inflame animosity between different castes and communities, breed enmity or cause tension. While criticizing the opponent parties, the criticism should be limited only to the present and past policies of those parties. There is a restriction not to criticize other party leaders or activists on matters not related to their public activities. Any party in violation of this code in section 4 shall be liable to action under law. How far is this code of conduct followed is a matter of contention.
Why should such a righteous code of conduct be observed only during the election? Is there a similar code to observe even after the elections? If so, has it been successful?
The current scenario clearly reveals that the election wars fought these days are more intense than the freedom struggle fought in the past.
In our country one can see a mad rush for tickets in three places – one in front of the cinema halls, another in front of the cricket stadiums and the third in front of the influential politicians and religious Institutions. Corruption in politics starts with the ticket distribution process. This is the root cause of the corruption. Today, the number of ticket aspirants fighting for the ticket of a political party to grab the power is more than those who fought for our country’s Independence.
If the story of those who fought for freedom is one of its kind, the story, and the agony of those who fight for ticket is another of its kind.
The only thing remains to be done is the formation of ‘Ticket Warriors Association’. These party-hoppers jumping from party to party do not even possess the minimum sense of shame required for public life. It is like the saying, ‘the forest demon chases away the town demon’.
It is unfortunate that no law has been able to curtail such menace. The laws to control defection are not entirely effective. Gandhiji said, ‘Politics without principles is a crime’. If fair practices are to be established in this country those who are denied tickets in a party should not be allowed to switch or migrate to other parties. No political party should favour those who come from another party. The names of the members of the party should be registered with the Election Commission To get a ticket from a party, a candidate must be an active member of that party for at least 5 years. If he defeats, he must wait for 5 more years to get a ticket from that new party or he can be allowed to contest independently. This reduces the conflicts within the party. Party loyalty and discipline are maintained. It puts an end to the ‘Resort Politics’ of luring the candidates of other parties when no political party gets a clear mandate. No one would defect then. The defector will not resign and contest for re-election out of lust for power. And no scope for political ruckus in the courts. It saves the Government from spending unnecessarily on re-elections, it saves the Mantri Mahodayas from the exercise of making efforts to help party candidates win in the by-elections without paying attention to the administration of the land.
It puts an end to the social unrest caused due to the mudslinging of rival parties.
All the prominent people who fought for the freedom of this country under the leadership of Gandhiji were eminent lawyers of that time. The country attained freedom due to their selfless service and sacrifice. But the objectives and aspirations are yet to be realised. Hence there is a need for eminent lawyers who are concerned about this country, to launch a movement to make our democracy a success. If the legal experts and the intellectuals consider this seriously and engage in legal battle for the implementation of appropriate laws, the current menace will end, and the citizens of India can live peacefully.
- Sri Taralabalu Jagadguru
Dr.Shivamurthy Shivacharya Mahaswamiji
Vijayakarnataka News Paper
6-4-2023

कर्नाटक में अब विधानसभा के चुनाव का बिगुल बज चुका है | इसे माध्यमों ने कर्नाटक का कुरुक्षेत्र कहकर वर्णन किया है | महाभारत के कुरुक्षेत्र को और स्वतंत्र भारत के इस चुनाव समर को रही साम्यता एवं अंतर क्या है ? कौरव और पांडवों के बीच में जो भीषण युद्ध हुआ उस स्थान का नाम ही कुरुक्षेत्र है | भगवद्गीता के आरंभिक श्लोक में इस कुरुक्षेत्र को 'धर्मक्षेत्र' कहकर वर्णन किया गया है |
'धर्मक्षेत्रे कुरुक्षेत्रे समवेता : युयुत्सव: मामका : पांडवाश्चैव किमकुर्वत संजय' ( धर्मक्षेत्र के कुरुक्षेत्र में मेरे बेटे और पांडवों ने क्या किया?)इस तरह धृतराष्ट्र संजय से पूछता है | असीम मृत्यु और दर्द से,रक्तसिक्त हुई कुरुक्षेत्र की युद्ध भूमि को काशी-रामेश्वर जैसे तीर्थक्षेत्रों को 'धर्मक्षेत्र' कह सकते हैं? इसका एक कारण है, पांडव और कौरव युद्ध करने तैयार होकर कुरुक्षेत्र में अपनी अपार सेना के साथ जमा होकर युद्ध आरंभ करने के पहले दोनों तरफ के एक तरफ मिलकर समालोचन करके युद्ध से संबंधित एक नीति संहिता को तैयार कर लेते हैं | इसके विवरण महाभारत के भीष्मपर्व के आरंभ में मिलते हैं | उनसे किए हुए समझौते के युद्ध निबंध निम्न प्रकार हैं |
रथी च रथिनां योध्यो गजेन गजदूर्गत: ।
अश्वेनाश्ची पदातिश्च पादातेनैव भारत ॥
एकेन सह संयुक्त : प्रपन्नो विमुखस्तथा ।
क्षीणशस्त्रों विवर्मा च न हंतव्य : कदाचन ॥
न सूतेषु न धुर्येषु न च शस्त्रोपनायिषु ।
न भेरीशंखवादेषु प्रहर्तव्यं कदाचन ॥
माने, रथारूढ़ योद्धा रथारूढ योद्धा से, गजारूढ़ योद्धा गजारूढ़ योद्धा से, अश्वारोही सैनिक अश्वारोही सैनिक से, पदाति (पैदल) पदाति सैनिक से, सिर्फ युद्ध करना चाहिए। रथारूढ़ सैनिक हो, अश्वारोही सैनिक हो, पदाति सैनिक पर हमला नहीं करना है। रणभूमि में शत्रु सेनाओं के बीच में चल रहे युद्ध रोज सूर्यास्त के साथ समाप्त होना चाहिए । सूर्यास्त के बाद युद्ध नहीं करना चाहिए | यदि एक योद्धा के शस्त्र खत्म हो तो अथवा वह शस्त्र त्याग कर शरणागत हो तो या युद्ध से विमुख हो तो ऐसे को नहीं मारना है | सारथियों पर, शस्त्रास्त्र आपूर्ति करने वाले, नगाड़ा-शंख निनाद करने वालों पर शस्त्रास्त्र का प्रयोग नहीं करना है | योद्धा को सिर्फ अपने समान बलशाली योद्धा के साथ ही लड़ना चाहिए; दुर्बलों के साथ नहीं आदि | इसके अनुसार भगवद्गीता में उल्लेखित एक प्रसंग है - शत्रु सेना युद्ध सन्नद्ध होकर युद्ध भूमि में रहते समय अर्जुन अपने सारथी श्रीकृष्ण से कहता है :'दोनों सेना के बीच में मेरे रथ को रोक दो | युद्ध करने आए इनमें से मेरे साथ युद्ध करने कौन समर्थ है यह देखता हूँ |' (सेनयोरुभयोर्मध्ये रथं स्थापय मे' च्युत । यावदेतान निरीक्षेहं योद्धुकामानवस्थितान कैर्मया सह योध्यव्यमस्मिन रणसमुद्यमे ||)'
महाभारत के युद्ध के पहले दिन घटी और एक घटना बहुत विस्मयकारी है | और अभी युद्ध आरंभ होना ही था तब एकदम धर्मराय रथ से उतरकर अपने सभी शस्त्रास्त्रों को एक ओर रखकर कौरव सेना की ओर अकेले पैदल चलते हैं |
वहाँ रहे सब लोग अचरज से क्या धर्मराय शांति चाहते शरणागत हो रहें हैं? अर्जुन अपने भाई से पूछता है कि "किसीसे कुछ भी कहे बिना ऐसे अकेले और निशस्त्र होकर शत्रु सेना की ओर क्यों कदम रख रहे हो" ? धर्मराय बिना उत्तर दिये मौन होकर आगे बढ़ता है। लेकिन वह शरणागत होने नहीं गया था,बल्कि युद्ध आरंभ होने के पहले शत्रु सेना के वरिष्ठ भीष्म पितामह और गुरु द्रोणाचार्य के पैरों को छूकर, प्रणाम कर आशीर्वाद पाने हेतु !
पांडव और कौरवों के बीच में 18 दिनों तक हुए कुरुक्षेत्र युद्ध में यह नीति संहिता प्रशंसनीय तो है, पर किस तरह इसका पालन हुआ यह प्रश्नार्ह है | वैसे ही आधुनिक भारत की चुनाव नीति संहिता को सदुद्देश से रूपित किया राजनीति पक्ष कहाँ तक इसका पालन पूरा कर रहे हैं इसका अवलोकन करें तो बहुत सी विसंगतियाँ हैं । राज्य चुनाव आयोग ने अभ्यर्थियों के मार्गदर्शन के लिए जारी किये सदाचार संहिता के कलं 2 के प्रकार यह सदाचार संहिता चुनाव समय तालिका राज्य चुनाव आयोग लागू किये दिनांक से चुनाव प्रक्रिया पूर्ण होने तक लागू रहती है। कलं 4 में कोई पक्ष अथवा प्रत्याशी विभिन्न जाति या समुदायों के बीच में रहे मनमुटाव बिगाड़ना, द्वेष को पैदा करना, उद्वेग से होनेवाले किसी क्रिया कलाप में लगना निषेध है। अन्य राजनीति पक्षों की टीका-टिप्पणियाँ करते समय उस पक्ष की कार्यनीति, पिछली कार्यनीति को सिर्फ टीका सीमित होनी चाहिए। दूसरे पक्षों के नेता अथवा कार्यकर्ताओं के सार्वजनिक कार्यकलापों को न संबंध रखे अंशों के बारे में टीका-टिप्पणी नहीं करनी चाहिए ऐसा निर्बन्ध है। ऐसी सदाचार नीति संहिता सिर्फ चुनाव कालावधि तक क्यों सीमित होनी चाहिए ? यह मूल प्रश्न है। चुनाव होने के बाद नियंत्रण के लिए अन्य नियम है कहें तो उन नियमों का पालन आज तक क्या पूर्णरूप से सफलता पाये हैं?

प्रस्तुत विद्यमान देखें तो हमारे देश में पिछले चले स्वाधीनता समर से आज का यह चुनाव समर बहुत तेज़ है। देश सेवा से स्वार्थ लालसा सीमा पार कर बढ़ चुकी है। हमारे देश में टिकट के लिए धक्का- मुक्कि तीन तरफ : एक सिनेमा घरों के आगे, एक क्रिकेट स्टेडियम के आगे तो और एक चुनाव के संदर्भ में प्रभावी राजनेता और मठ-मंदिरों के आगे! राजनीति में भ्रष्टाचार का आरंभ इस टिकट से ही होता है। टिकट बाँटने की प्रक्रिया सभी भ्रष्टाचारों का पापकूप है ! हमारे देश के स्वतंत्रता के लिए लड़े स्वतंत्रता सेनानियों से आज देश की अधिकार गद्दी को चढने राजनीति पक्ष की टिकट के लिए लडनेवाले टिकट सेनानियों की संख्या ज्यादा है। स्वतंत्रता के लिए लडनेवालों की कथा एक तरह हो तो, टिकट के लिए लड़नेवालों की कथा-व्यथा और एक तरह की है। 'टिकट लड़नेवालो के संघ की स्थापना होना बाकी बची हैं।'
पक्ष से पक्ष को कूदनेवाले इन (वा) नरों को सार्वजनिक जीवन में सहज रूप से रहनेवाली कनिष्ठ लज्जा भी नहीं है। कन्नड में एक कहावत है कि "जंगल के भूत ने आकर गाँव के भूत को भगा दिया |" इससे कितना कोलाहल मच जाता है। यह खेद की बात है कि इसका नियंत्रण किसी भी कानून से नहीं हो पा रहा है । पक्षांतर रोकने का कानून होने पर भी यह पूर्ण रूप से सफल नहीं हुआ है | "Politics without principles is a crime"( नीति रहित राजनीति एक अपराध है ) - यह गांधीजी का कथन है। नीतियुक्त राजनीति यदि इस देश में रहना चाहे तो टिकट न पानेवाले दूसरे पक्ष को पक्षांतर करने का मौका नहीं रहना चाहिए । सब राजनीति के पक्षवाले दूसरे पक्ष से आनेवालों को अवसर नहीं देना चाहिए। पक्ष के सदस्यों के नाम चुनाव आयोग में पंजीकरण होने चाहिए | एक पक्ष की टिकट प्राप्त करना हो तो अभ्यर्थी उस पक्ष में कम से कम पाँच वर्षों तक सक्रीय सदस्य होना चाहिए। पक्षांतर हो तो उस पक्ष की टिकट पाने के लिए पाँच वर्षों तक इंतज़ार करना चाहिए। नहीं तो स्वतंत्र अभ्यर्थी बनकर चुनाव लड़ने का मौका दे सकते हैं। इससे पक्ष के अंतर की गुटबाजी कम होती है। पक्षनिष्ठा और अनुशासन भी रहता है। चुनाव परिणाम के बाद किसी भी पक्ष को बहुमत न आये तो अन्य पक्ष के सदस्यों को अपने पक्ष में लाने का, रेसार्ट राजनीति की बागडोर डालने जैसे हो जाता है। कोई भी तब पक्षांतर करने का मन नहीं करता । पक्षांतरी लोग अधिकार लालसा से इस्तीफ़ा देकर पुन: चुनाव में स्पर्धा करने नहीं आते। कोर्ट-कचहरी में भाग दौड़ करने का अवसर भी नहीं रहता । पुनः चुनाव चलाने का और अनावश्यक धन व्यय का खर्च भी सरकार को बचता है। मंत्री महोदय शासन व्यवस्था की ओर ध्यान न देकर साल भर अपने पक्ष के अभ्यर्थियों को उप-चुनावों में जिताने के लिए करने की कसरत छूटती है। अन्य पक्षों के सदस्यों की निंदा करके सामाजिक व्याकुलता भी बंद हो जाती है।
गांधीजी के नेतृत्व में इस देश के स्वतंत्रता के लिए लड़े सब प्रमुख उस ज़माने के मशहूर वकील थे। उनकी निस्वार्थ सेवा और त्याग-बलिदान से देश को स्वाधीनता तो मिली लेकिन स्वाधीनता के आशय अभी परिपूर्ण नहीं हुए हैं। इसलिए, इस देश के प्रति आसक्त प्रख्यात वकील प्रजातंत्र को यश दिलाने के लिए और एक आंदोलन आरंभ करने की आवश्यकता है। इसके बारे में कानून तज्ञ और प्रज्ञावान प्रजा,चिंता करके सटीक नियमों को लागू करके कानूनात्मक आंदोलन चलायें तो आज की अव्यवस्था समाप्त होकर, प्रजा सुख-शांति से जी सकती है।
- श्री तरळबाळु जगद्गुरु
डॉ. शिवमूर्ति शिवाचार्य महास्वामीजी
सिरिगरे
"विजय कर्नाटक"
6-4-2023